ಕಾಗವಾಡ

ದೀನದಯಾಳ, ಡಾ ಶಾಮಾಪ್ರಸಾದರ ತತ್ವಾದರ್ಶಗಳನ್ನು ಯುವಜನ ಅಳವಡಿಸಿಕೊಳ್ಳಲಿ: ಬೆಂಡವಾಡ

ದೀನದಯಾಳ, ಡಾ ಶಾಮಾಪ್ರಸಾದರ ತತ್ವಾದರ್ಶಗಳನ್ನು ಯುವಜನ ಅಳವಡಿಸಿಕೊಳ್ಳಲಿ: ಬೆಂಡವಾಡ
ಉಗಾರ ಬಿಕೆ ಗ್ರಾಮದಲ್ಲಿ ಬಿಜೆಪಿ ಸಂಸ್ಥಾಪನಾ ದಿನಾಚರಣೆಯನ್ನುದ್ದೇಶಿಸಿ ರಾಜ್ಯ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ದುಂಡಪ್

ಶೇಡಬಾಳ 6: ದೇಶಕ್ಕೆ ಅನುಪಮ ಕೊಡುಗೆ ನೀಡಿದ ಪಂಡಿತ ದೀನದಯಾಳ ಉಪಾಧ್ಯಾಯ, ಡಾ ಶಾಮಾಪ್ರಸಾದ ಮುಖರ್ಜಿಯವರ ತತ್ವ, ಆದರ್ಶ ಗುಣಗಳನ್ನು ಇಂದಿನ ಯುವ ಜನಾಂಗ ರೂಢಿಸಿಕೊಳ್ಳಬೇಕೆಂದು ರಾಜ್ಯ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ದುಂಡಪ್ಪ ಬೆಂಡವಾಡ ಹೇಳಿದರು.

ಮಂಗಳವಾರ ದಿ.6 ರಂದು ಉಗಾರ ಬಿಕೆ ಗ್ರಾಮದಲ್ಲಿ  ಕಾಗವಾಡ ಮಂಡಲದ ಬಿಜೆಪಿ ರೈತ ಮೋರ್ಚಾ ವತಿಯಿಂದ ಏರ್ಪಡಿಸಿದ ಕಿಸಾನ್ ಸಮ್ಮಾನ್ ಸಮಾವೇಶ ಹಾಗೂ ಬಿಜೆಪಿ ಸಂಸ್ಥಾಪನಾ ದಿನಾಚರಣೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ಪಂಡಿತ ದೀನದಯಾಳ ಉಪಾಧ್ಯಾಯ, ಡಾ ಶಾಮಾಪ್ರಸಾದ ಮುಖರ್ಜಿ, ದಿ.ಪ್ರಧಾನಿ ಅಟಲಬಿಹಾರಿ ವಾಜಪೇಯಿ, ಎಲ್.ಕೆ ಅಡ್ವಾನಿಯಂತಹ ಮಹಾನ್ ನಾಯಕರುಗಳು ಕಟ್ಟಿದ ಬಿಜೆಪಿ ಇಂದು ಬಲಿಷ್ಟವಾಗಿ ಬೆಳೆದು ನಿಂತಿದೆ ಎಂದರು.

ಸ್ವಾತಂತ್ರ್ಯ ಸಿಕ್ಕು 70 ವರ್ಷಗಳಲ್ಲಿ ಬ್ರಷ್ಟಾಚಾರ ಮುಕ್ತ ಸರಕಾರ ನೀಡಿದ ಬಿಜೆಪಿ ನೇತೃತ್ವದ ನರೇಂದ್ರ ಮೋದಿ ಸರಕಾರ ಎಂದರು. ಪ್ರಧಾನ ಮಂತ್ರಿಗಳು ಕೃಷಿ ಮಸೂದೆ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಆದರೆ ದಿಕ್ಕು ದಿಶೆ ಇಲ್ಲದ ಕಾಂಗ್ರೆಸ್ ಪಕ್ಷ ಸ್ವಾರ್ಥಕ್ಕಾಗಿ ರೈತರನ್ನು ತಪ್ಪು ದಾರಿಗೆ ಎಳೆಯುತ್ತಿದೆ ಎಂದರು. 

ರೈತ ಪರವಾದಂತ ಮಸೂದೆ ಇದಾಗಿದ್ದು ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ಅವರು ಮೋದಿ ಹಾಗೂ ಶಹಾ ಅವರು ದೇಶದಲ್ಲಿಯೇ ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದರು.

ವೇದಿಕೆಯ ಮೇಲೆ ಅಥಣಿ ಪಿಎಲ್‍ಡಿ ಬ್ಯಾಂಕಿನ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಶೀತಲಗೌಡ ಪಾಟೀಲ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಸತ್ಯಪ್ಪ ನಾಯಿಕ, ಮಂಡಲ ಅಧ್ಯಕ್ಷ ತಮ್ಮಣ್ಣ ಪಾರಶೆಟ್ಟಿ, ಪಿಕೆಪಿಎಸ್ ಉಪಾಧ್ಯಕ್ಷ ಅಪ್ಪಾಸಾಬ ಚೌಗುಲಾ, ಗ್ರಾಮ ಪಂಚಾಯತ ಅಧ್ಯಕ್ಷ ಅಣ್ಣಾಗೌಡ ಪಾಟೀಲ, ಮುಖಂಡರಾದ ರಾಮಗೌಡ ಪಾಟೀಲ, ಮಹಾವೀರ ನಾಶಿಪುಡಿ, ಪ್ರಮೋದ ಹೊಸುರೆ, ಶಶಿಕಾಂತ ಜೋಷಿ, ಅನಿಲ ನಾವಲಿಗೇರ, ಯೋಗೇಶ ಕುಂಬಾರ, ಉದಯ ದೇಶಾಯಿ, ಶಿವಾನಂದ ನವಿನಾಳೆ, ಮನೋಜ ಕುಸನಾಳೆ, ವಿಜಯ ಶಿಂಧೆ, ಬಂಡು ತಮದಡ್ಡಿ, ಅಪ್ಪಾಸಾಬ ಸನದಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದು ಮಾತನಾಡಿದರು.

ಉಗಾರ ಬಿಕೆ ಗ್ರಾಮದ ಶೀತಲಗೌಡ ಪಾಟೀಲ ನೇತೃತ್ವದ ಜನ ಸಂಪರ್ಕ ಕಾರ್ಯಾಲಯದಲ್ಲಿ  ಪಂಡಿತ ದೀನದಯಾಳ ಉಪಾಧ್ಯಾಯರ ಹಾಗೂ ಡಾ.ಶಾಮಪೆಸಾದ ಮುಖರ್ಜಿಯವರ ಭಾವಚಿತ್ರಗಳನಿಟ್ಟು ಪೂಜೆ ಸಲ್ಲಿಸಿದರು. ನಂತರ ಬಿಜೆಪಿ ಪಕ್ಷದ ಧ್ವಜಾರೋಹಣವನ್ನು ನೆರವೇರಿಸಿದರು.  

ಕಾಗವಾಡ ಮಂಡಲದ ಬಿಜೆಪಿ ರೈತ ಮೋರ್ಚಾದ ಪದಾಧಿಕಾರಿಗಳು    ಗ್ರಾಮ ಪಂಚಾಯತ ಸದಸ್ಯರು, ಪಕ್ಷದ ಕಾರ್ಯಕರ್ತರು, ಮುಖಂಡರು ಇದ್ದರು. ಶಿವಾನಂದ ನವಿನಾಳೆ ಸ್ವಾಗತಿಸಿ ವಂದಿಸಿದರು. 

ಸುದ್ದಿ ಓದಿ