ರಾಣೆಬೆನ್ನೂರ

ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ಸಾಮಾಜಿಕ ಕಾರ್ಯಕ್ರಮಗಳ ಅನಾವರಣ

ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ಸಾಮಾಜಿಕ ಕಾರ್ಯಕ್ರಮಗಳ ಅನಾವರಣ

ರಾಣೆಬೆನ್ನೂರು,04: ತಮ್ಮ ಮನೋಜ್ಞ ನಟನೆಯಿಂದ ರಾಜ್ಯ ದೇಶಾದ್ಯಂತ ಮನೆ ಮಾತಾಗಿರುವ ಕಿಚ್ಚ ಸುದೀಪ್ ಅವರ ಹುಟ್ಟು ಹಬ್ಬವನ್ನು ರಾಣೆಬೆನ್ನೂರು ತಾಲೂಕ ಅಭಿಮಾನಿ ಬಳಗದ ವತಿಯಿಂದ ನಗರದ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಆಚರಿಸಲಾಯಿತು.  

ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ವಾಲ್ಮೀಕಿ ಸಮಾಜದ ಹಿರಿಯ ಮುಖಂಡ ಚಂದ್ರ​‍್ಪ ಬೇಡರ್  ಕನ್ನಡ ಚಲನಚಿತ್ರ ರಂಗದಲ್ಲಿ ನಟನಾಗಿ,ನಿರ್ಮಾಪಕನಾಗಿ, ನಿರ್ದೇಶಕನಾಗಿ ಅಪಾರವಾದ ಕೊಡುಗೆ ಸಲ್ಲಿಸಿ ಕನ್ನಡದ ಕೀರ್ತಿ ಪತಾಕೆಯನ್ನು ಹಾರಿಸಿರುವ ಕಿಚ್ಚ ಸುದೀಪ್ ಅವರು ಮುಂದಿನ ದಿನಗಳಲ್ಲಿ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.  

ಇದೇ ಸಂದರ್ಭದಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದ ಅಭಿಮಾನಿ ಬಳಗದ ಸಾಕಷ್ಟು ಸದಸ್ಯರು ರಕ್ತವನ್ನು ದಾನ ಮಾಡಿದರು. ನಂತರ ನಗರದ ಅಂದ ಮಕ್ಕಳ ಶಾಲೆ, ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಅನ್ನಸಂತರೆ​‍್ಣ ನೇರವೇರಿಸಿ ಬ್ರೆಡ್ ಹಾಲು ಹಣ್ಣು ವಿತರಿಸಿ ಸಾಮಾಜಿಕ ಕಳಕಳಿ ಮೆರೆದ ಸುದೀಪ್ ಅಭಿಮಾನಿ ಬಳಗದ ಸದಸ್ಯರು ತಮ್ಮ ನಾಯಕನ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಿದರು. ಹನುಮಂತಪ್ಪ ತಳವಾರ್, ಕೆಂಚಪ್ಪ ಮುಷ್ಟೂರ್ ನಾಯಕ್, ಬಸಣ್ಣ ತಳವಾರ್, ಲಕ್ಷ್ಮಣ, ಸಂತೋಷ್ ಅಜಯ್ ಹಿರೇಮಠ್ ಸೇರಿದಂತೆ  ಸುದೀಪ್ ಅಭಿಮಾನಿಗಳ ಬಳಗದ ನೂರಾರು ಅಭಿಮಾನಿಗಳು, ಕಾರ್ಯಕರ್ತರು   ಪಾಲ್ಗೊಂಡಿದ್ದರು. 


ಸುದ್ದಿ ಓದಿ