ಕಾಗವಾಡ

ಡಿ. 12ರಂದು ಖಿಳೆಗಾಂವ ಬಸವೇಶ್ವರ ಏತ ನೀರಾವರಿ ಯೋಜನೆಗೆ ಚಾಲನೆ: ಗುಂಗೆ

ಡಿ. 12ರಂದು ಖಿಳೆಗಾಂವ ಬಸವೇಶ್ವರ ಏತ ನೀರಾವರಿ ಯೋಜನೆಗೆ ಚಾಲನೆ: ಗುಂಗೆ

ಕಾಗವಾಡ 25: ಕಳೆದ ಅನೇಕ ವರ್ಷಗಳಿಂದ ಲಕ್ಷಾಂತರ ರೈತರು ಜಾತಕ ಪಕ್ಷಿಯಂತೆ ಕಾಯುತ್ತಿರುವ ಖಿಳೆಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ ಬರುವ ಡಿಸೆಂಬರ್ 12ರಂದು ಮುಖ್ಯಮಂತ್ರಿಗಳ ಉಪಸ್ಥಿತಿಯಲ್ಲಿ ಚಾಲನೆ ನೀಡಲಾಗುವುದೆಂದು ಕರ್ನಾಟಕ ನೀರಾವರಿ ನಿಗಮದ ನಿಯಮಿತ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ್  ಗುಂಗೆ ಹೇಳಿದರು.

ಬುಧವಾರ ಸಂಜೆ ಐನಾಪುರದ ಖಿಳೆಗಾಂವ ಬಸವೇಶ್ವರ ನೀರಾವರಿ ಯೋಜನೆ ಜಾಕ್ವೆಲ್ ಹೌಸದಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ್  ಗೂಂಗೆ ಮಾಹಿತಿ ನೀಡಿದರು.

ಖಿಳೆಗಾಂವ ಬಸವೇಶ್ವರ ಏತ ನೀರಾವರಿ ಯೋಜನೆಯ ಐನಾಪುರ್ ಜಾಕವೆಲ್(ಪಂಪಹೌಸ) ವರೆಗೆ ಏತ ನೀರಾವರಿ ಯೋಜನೆ ಕಾಮಗಾರಿ ಭರದಿಂದ ಸಾಗುತ್ತಿದೆ, ಆದರೂ ಕಳೆದ ಕರೋನ ಅವಧಿಯಲ್ಲಿ ಸ್ವಲ್ಪ ವ್ಯತ್ಯಾಸವಾಗಿತ್ತು. ಈಗ ಗಾಯತ್ರಿ ಪ್ರಾಜೆಕ್ಟ್ ಕಂಪನಿಯ ವಾಯ್ಸ್ ಪ್ರೆಸಿಡೆಂಟ್ ಜಿ.ವೆಂಕಟೇಶ್ವರ ಇವರ ಉಪಸ್ಥಿತಿಯಲ್ಲಿ ಸುಮಾರು ನಾಲ್ಕು ಗಂಟೆ ಚರ್ಚಿಸಿ ಯೋಜನೆಯ ಕಾಮಗಾರಿ ಬರದಿಂದ ಸಾಗಲು ಎಲ್ಲ ರೀತಿಯ ಸಹಕಾರ ನೀಡಲು ಆದೇಶಿಸಿದ್ದೇನೆ. ಈ ಕಾಮಗಾರಿ ಪ್ರಗತಿ ಬಗ್ಗೆ ಪ್ರತಿದಿನ ಸಂಜೆ ಫೋನ್ ಕಾನ್ಫರೆನ್ಸ್ ಮುಖಾಂತರ ಮಾಹಿತಿ ಪಡೆಯಲಾಗುವುದು, ದಿನನಿತ್ಯ ಕಾಮಗಾರಿಯ ಪ್ರಗತಿ ಬಗ್ಗೆ ಮಾಹಿತಿ ಪಡೆದು ನಿಗದಿಪಡಿಸಿದ ದಿನಾಂಕದವರೆಗೆ ಯೋಜನೆ ಪೂರ್ಣಗೊಳಿಸಲಾಗುವುದು, ಎಂದು ಮಲ್ಲಿಕಾರ್ಜುನ್ ಗುಂಗೆ ಪತ್ರಿಕಾಗೋಷ್ಠಿಯಲ್ಲಿ ಶಾಸಕ ಶ್ರೀಮಂತ ಪಾಟೀಲರಿಗೆ ಭರವಸೆ ನೀಡಿದರು.

ಕಾಗವಾಡ ಶಾಸಕ ಶ್ರೀಮಂತ ಪಾಟೀಲರು ಮಾಹಿತಿ ನೀಡುವಾಗ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ವೈಯಕ್ತಿಕವಾಗಿ ಯೋಜನೆಯ ಕಾಮಗಾರಿ ಬಗ್ಗೆ ಗಮನ ವಹಿಸಿದ್ದು ಇವರ ಆದೇಶ ಮೇರೆಗೆ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ್  ಗೂಂಗೆ ಇವರು ಸ್ಥಳಕ್ಕೆ ಬಂದು ಮಾಹಿತಿ ಪರಿಶೀಲಿಸಿ ಕಾಮಗಾರಿ ಬಗ್ಗೆ ಎಲ್ಲರಿಗೆ ಜವಾಬ್ದಾರಿ ಒಪ್ಪಿಸಿದ್ದಾರೆ. ಇವರ ಭರವಸೆದ ಮೇರೆಗೆ ಈ ಕಾಮಗಾರಿ ಬರದಿಂದ ಸಾಗುತ್ತಿದೆ ಎಂಬ ಆಸೆ ನನಗಿದೆ. ಎಂದು ಹೇಳಿ ಡಿಸೆಂಬರ್ 12 ರ ವರೆಗೆ ಯೋಜನೆ ಪೂರ್ಣಗೊಳಿಸಿ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಇವರ ಉಪಸ್ಥಿತಿಯಲ್ಲಿ ಈ ಯೋಜನೆಗೆ ಚಾಲನೆ ನೀಡುವುಲಾಗುವುದು ಎಂದು  ಹೇಳಿದರು.

ಸಭೆಯಲ್ಲಿ ಗಾಯತ್ರಿ ಪ್ರಾಜೆಕ್ಟ್ ವೈಸ್ ಪ್ರೆಸಿಡೆಂಟ್ಗಳಾದ ಜಿ.ವೆಂಕಟೇಶ್ವರ, ಅಧಿಕಾರಿಗಳಾದ ಕೆ.ರಾಜೇಶ್ ,ಬಿ.ಆರ.ರಾಥೋಡ್, ಎಸ್.ಎಸ್,ಶ್ರೀನಿವಾಸ, ಕೆ.ರವಿ, ರವಿಂದ್ರ ಅಕ್ಕಿ, ಆಶಿಶ್ ದೇವಧರ್, ಪ್ರವೀನ ಹುನಸಿಕಟ್ಟಿ, ಪ್ರಶಾಂತ ಪೋತದಾರ, ಬಸವರಾಜ ಗಲಗಲಿ, ಈ ಅಧಿಕಾರಿಗಳೊಂದಿಗೆ ಕೆಎಂಎಫ್ ಹಾಲು ಉತ್ಪಾದಕ ಸಂಸ್ಥೆಯ ಸಂಚಾಲಕ ಅಪ್ಪಾಸಾಹೇಬ ಅವತಾಡೆ, ದಾದಾ ಪಾಟೀಲ್, ರಾಮ ಶೆಡಿ,್ಡ ಮುರೇಗಪಾ ಮಗದುಮ, ರಾಜೇಂದ್ರ ಪೋತದಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು 

ಸುದ್ದಿ ಓದಿ