ರಾಣೆಬೆನ್ನೂರ

ಖನ್ನೂರ್ ವಿದ್ಯಾನಿಕೇತನ ಶಾಲೆ : ಕನಕದಾಸರ ಜಯಂತ್ಯೋತ್ಸವ

ಖನ್ನೂರ್ ವಿದ್ಯಾನಿಕೇತನ ಶಾಲೆ : ಕನಕದಾಸರ ಜಯಂತ್ಯೋತ್ಸವ

ರಾಣೇಬೆನ್ನೂರು05: ಕನಕದಾಸರು, ಈ ದೇಶ ಕಂಡ ಅಪರೂಪದ ದಾರ್ಶನಿಕರು, ತಮ್ಮ ಕೀರ್ತನೆಗಳ ಮೂಲಕ, ಸಮಾಜವನ್ನು ತಿದ್ದುವ ಕೆಲಸ ಮಾಡಿದ್ದಾರೆ ಅವರ ಆದರ್ಶ ವಿಚಾರಧಾರೆಗಳನ್ನು ನಾವೆಲ್ಲರೂ ಬದುಕಿನಲ್ಲಿ ಅಳವಡಿಸಿಕೊಂಡು ಸಾಗಬೇಕಾದ ಇಂದಿನ ಅಗತ್ಯವಿದೆ ಎಂದು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಹಾದೇವಪ್ಪ ಖನ್ನೂರ ಹೇಳಿದರು. ಅವರು ಇಲ್ಲಿನ ಖನ್ನೂರ ವಿದ್ಯಾನಿಕೇತನ ಶಾಲೆಯಲ್ಲಿ ನಡೆದ, ಸಂತ  ಕನಕದಾಸರ ಜಯಂತ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ  ಮಾತನಾಡಿದರು.     

ಕನಕದಾಸರು ಕೇವಲ ಕೀರ್ತನಕಾರರಲ್ಲ ಅವರೊಬ್ಬ ಮೇಧಾವಿ ದಂಡ ನಾಯಕರಾಗಿದ್ದರು. ಎಂದು ಇತಿಹಾಸವನ್ನು ಸ್ಮರಿಶಿ ಮಾತನಾಡಿದ ಅವರು, ಧರ್ಮ, ಆಚಾರ, ವಿಚಾರ  ಮತ್ತು ಸಂಸ್ಕಾರ ಅಳವಡಿಸಿಕೊಂಡು ಸಾಗಿದಾಗ ಮಾತ್ರ ಮನುಕುಲ ಅಭಿವೃದ್ಧಿ ಸಾಧಿಸಲು ಸಾಧ್ಯವಾಗುವುದು ಎಂದರು.      ಶಿಕ್ಷಕ ಮಹಾದೇವಪ್ಪ ಜಜ್ಜೂರಿ ಅವರು ಸಂತ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪ ನಮನ ಸಮರ​‍್ಿಸಿದರು. ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಸಮೀರಾ ಫರ್ನಾಂಡಿಸ್, ಶಿಕ್ಷಕರಾದ ಆಯಿಷಾ, ರೇವತಿ, ಪುಷ್ಪ, ಪ್ರಕಾಶ್ ಕೊಳ್ಳೇರ, ಸೇರಿದಂತೆ ಮತ್ತಿತರ ಶಿಕ್ಷಕರು, ಸಿಬ್ಬಂದಿ ಉಪಸ್ಥಿತರಿದ್ದರು 


ಸುದ್ದಿ ಓದಿ