ಸಿ.ವಾಯ್.ಮೆಣಶಿನಕಾಯಿಯವರಿಗೆ ಕೌಜಲಗಿ ನಿಂಗಮ್ಮ ಪ್ರಶಸ್ತಿ
ಬೈಲಹೊಂಗಲ 29: ವರದಿಗಾರ ಸಿ.ವಾಯ್.ಮೆಣಶಿನಕಾಯಿಯವರಿಗೆ ಬ್ಯಾಕೂಡ ಲಕ್ಕಮ್ಮದೇವಿ ಕಲಾ ಪೋಷಕ ಸಂಘದ ಕೌಜಲಗಿ ನಿಂಗಮ್ಮ ಪ್ರಶಸ್ತಿ ಲಭಿಸಿದೆ.
ದಿ.30 ರಂದು 10 ಘಂಟೆಗೆ ಮಹಾಲಿಂಗಪೂರದ ಕೌಜಲಗಿ ನಿಂಗಮ್ಮ ರಂಗಮಂದಿರದಲ್ಲಿ ನಡೆಯುವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕನ್ನಡ ನಾಡು,ನುಡಿ ಸಾಹಿತ್ಯ, ಪತ್ರಿಕೋದ್ಯಮ ರಂಗದಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಗಮನಿಸಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಮಹಾಲಿಂಗಪೂರದ ಸಹಜಾನಂದ ಸ್ವಾಮೀಜಿ ಸಾನಿಧ್ಯ ವಹಿಸುವರು. ತೇರದಾಳ ಶಾಸಕ ಸಿದ್ದು ಸವದಿ, ಪುರಸಭೆ ಅಧ್ಯಕ್ಷ ಬಸವರಾಜ ಹಿಟ್ಟಿನಮಮಠ, ಕಸಾಪ ಅಧ್ಯಕ್ಷ ಬಸವರಾಜ ಮೇಟಿ, ಬಿಡಿಸಿಸಿ ಬ್ಯಾಂಕ ನಿರ್ದೆಶಕ ಬಸನಗೌಡ ಪಾಟೀಲ, ಬಾಗಲಕೋಟೆ ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೆಶಕ ಕರಣಕುಮಾರ ಜೈನಾಪೂರ, ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆಂದು ಸಂಘಟನೆ ಅಧ್ಯಕ್ಷ ಸಿದ್ರಾಮ ನಿಲಜಗಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.