ರಾಣೆಬೆನ್ನೂರ

ಕಾಟೇನಹಳ್ಳಿ ಅವರು ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನ

ಕಾಟೇನಹಳ್ಳಿ ಅವರು ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನ

ರಾಣೇಬೆನ್ನೂರು 25 : ನಗರದ ಜಗದ್ಗುರು ಮೌನೇಶ್ವರ ಪ್ರೌಢಶಾಲೆಯ, ಕನ್ನಡ ಶಿಕ್ಷಕ, ಕೆ.ಎನ್‌. ಕಾಟೇನಹಳ್ಳಿ ಅವರು ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬೆಂಗಳೂರಿನ "ಜನಸಿರಿ ತಂಡ" ರಾಜ್ಯಮಟ್ಟದ ಶಿಕ್ಷಕರ ಹಬ್ಬ -2024, ಅತ್ಯುತ್ತಮ ಶಿಕ್ಷಕ- ಶಿಕ್ಷಕಿ ಪ್ರಶಸ್ತಿ ಪ್ರಧಾನ ಸಮಾರಂಭವು ಸೆಪ್ಟೆಂಬರ್ 28ರಂದು ಶನಿವಾರ ಪುಟ್ಟಣ್ಣ ಚೆಟ್ಟಿ ಪುರ ಭವನದಲ್ಲಿ ಟೌನ್ ಹಾಲ್ ಆಯೋಜಿಸಿದೆ.  

ಕಾಟೇನಹಳ್ಳಿ ಅವರ, ಶಿಕ್ಷಣ, ಕಲೆ, ಸಾಹಿತ್ಯ, ನಾಟಕ, ಸಾಂಸ್ಕೃತಿಕ  ಮತ್ತು ಸಾಮಾಜಿಕ ಸೇವೆಯನ್ನು ಪರಿಗಣಿಸಿರುವ" ಜನಸಿರಿ ತಂಡ"ವು ಗುರುತಿಸಿ, ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಿದೆ. ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತ, ಕೆ.ಎನ್‌. ಕಾಟೇನಹಳ್ಳಿ ಅವರಿಗೆ, ಮೌನೇಶ್ವರ ಸಮಿತಿಯ ಅಧ್ಯಕ್ಷರು,ಸದಸ್ಯರು, ಪ್ರೌಢಶಾಲೆಯ ಗುರು ಬಳಗ, ಮತ್ತು ಶಿಕ್ಷಕ ಸಂಘಟನೆಗಳು ಹಾರ್ದಿಕವಾಗಿ ಅಭಿನಂದಿಸಿವೆ. 


ಸುದ್ದಿ ಓದಿ