ಅಥಣಿ

ಕಾಶ್ಮೀರವನ್ನು ತೀರ್ಥ ಸ್ಥಳವನ್ನಾಗಿಸಿದಲ್ಲಿ ಕಾಶ್ಮೀರ ಸಮಸ್ಯೆ ಪರಿಹಾರ ಸಾಧ್ಯ

ಕಾಶ್ಮೀರವನ್ನು ತೀರ್ಥ ಸ್ಥಳವನ್ನಾಗಿಸಿದಲ್ಲಿ ಕಾಶ್ಮೀರ ಸಮಸ್ಯೆ ಪರಿಹಾರ ಸಾಧ್ಯ

ಪ್ರಜ್ಞಾ ಪ್ರವಾಹ ಸಂಘಟನೆಯ ಕ್ಷೇತ್ರಿಯ ಕಾರ್ಯದರ್ಶಿ ರಘುನಂದನ ಅಭಿಮತ: ವಿಶೇಷ ಉಪನ್ಯಾಸ ಕಾರ್ಯಕ್ರಮ 

ಅಥಣಿ 16: ಕಾಶ್ಮೀರವನ್ನು ಪ್ರವಾಸಿ ತಾಣವಾಗಿಸುವ ಬದಲಿಗೆ ಯಾತ್ರಾ ಅಥವಾ ತೀರ್ಥ ಸ್ಥಳವನ್ನಾಗಿಸಿದಲ್ಲಿ ಸ್ವಲ್ಪ ಮಟ್ಟಿಗಾದರೂ ಕಾಶ್ಮೀರ ಸಮಸ್ಯೆಯನ್ನು ಬಗೆ ಹರಿಸಲು ಸಾಧ್ಯವಾಗುತ್ತದೆ ಎಂದು ಪ್ರಜ್ಞಾ ಪ್ರವಾಹ ಸಂಘಟನೆಯ ಕ್ಷೇತ್ರಿಯ ಕಾರ್ಯದರ್ಶಿ ರಘುನಂದನ ಹೇಳಿದರು.  

ಅವರು ಸ್ಥಳೀಯ ಉತ್ತಿಷ್ಠ ಭಾರತ ವೇದಿಕೆ ಆಶ್ರಯದಲ್ಲಿ ಜಾಧವಜಿ ಶಿಕ್ಷಣ ಸಂಸ್ಥೆಯ ಕೆ.ಎ.ಲೋಕಾಪೂರ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.  

ಕಾಶ್ಮೀರ ಪೌರಾಣಿಕ ಕಾಲದಿಂದಲೂ ಆಧ್ಯಾತ್ಮ ಸಾಧನೆಯ ಹಾಗೂ ಜ್ಞಾನ ಸಂಪಾದನೆಯ ಸ್ಥಳವಾಗಿತ್ತು ಇದಕ್ಕಾಗಿಯೇ ಇಲ್ಲಿ ಅನೇಕ ಋಷಿ ಮುನಿಗಳ ತಪಸ್ಸು ಮಾಡಿದ್ದಾರೆ ಅಲ್ಲದೆ ಆದಿ ಶಂಕರಾಚಾರ್ಯರರು ಶಾರದಾ ಪೀಠವನ್ನೂ ಕೂಡ 8 ನೇ ಶತಮಾನದಲ್ಲಿ ಸ್ಥಾಪಿಸಿದ್ದಾರೆ. ಇಡೀ ಕಾಶ್ಮೀರದಲ್ಲಿ ಹೆಜ್ಜೆ ಹೆಜ್ಜೆಗೂ ದೇವಾಲಯಗಳಿವೆ ಇದಕ್ಕಾಗಿಯೇ ಪುರಾಣಗಳಲ್ಲಿ ಕಾಶ್ಮೀರಕ್ಕೆ ವಿಶೇಷ ಸ್ಥಾನ ಕಲ್ಪಿಸಲಾಗಿದೆ. ಮೊಘಲರ ದಾಳಿಯ ಮೊದಲು ಇದು ಪವಿತ್ರ ತೀರ್ಥ ಯಾತ್ರೆ ಸ್ಥಳವಾಗಿತ್ತು ದೇಶದ ಮೂಲೆ ಮೂಲೆಗಳಿಂದ ತೀರ್ಥ ಯಾತ್ರಿಗಳು ಯಾತ್ರೆ ಕೈಗೊಳ್ಳುತ್ತಿದ್ದರು ಆದರೆ ನಂತರದಲ್ಲಿ ನಡೆದ ದಾಳಿಗಳ ಪರಿಣಾಮ ಇಲ್ಲಿಯ ಪವಿತ್ರ ದೇವಸ್ಥಾನಗಳು ನಾಶವಾದವು ಎಂದ ಅವರು ನಂತರದಲ್ಲಿ ಪವಿತ್ರ ಯಾತ್ರಾ ಸ್ಥಳದ ಬದಲಾಗಿ ಕೇವಲ ಮಜಾ ಮಾಡುವ ಪ್ರವಾಸಿ ತಾಣವಾಗಿ ಮಾರ​‍್ಪಟಟಿತು ಎಂದರು.  

ಜ್ಞಾನ ಮತ್ತು ಆಧ್ಯಾತ್ಮದ ಸಂಕೇತದಂತಿದ್ದ ಕಾಶ್ಮೀರದ ಮೂಲ ನಿವಾಸಿಗಳಾದ ಪಂಡಿತರನ್ನು ಓಡಿಸಿದ ಹಾಗೂ ಮತಾಂತರ ಮಾಡಿದ ಪರಿಣಾಮ ಕೆಲ ವರ್ಷಗಳಲ್ಲಿಯೇ ಬಹು ಸಂಖ್ಯಾತರಾಗಿದ್ದ ಹಿಂದುಗಳು ಅಲ್ಪ ಸಂಖ್ಯಾತರಾದರಷ್ಟೇ ಅಲ್ಲ ದಾಳಿಖೋರರ ದೌರ್ಜನ್ಯ, ಅತ್ಯಾಚಾರದ ಪರಿಣಾಮ ನಿರಾಶ್ರಿತರಾಗಿ ಕಾಶ್ಮೀರ ಬಿಟ್ಟು ಹೊರಗೆ ಬಂದು ಬಿಕ್ಷುಕರಂತೆ ಆಶ್ರಯ ಪಡೆಯಬೇಕಾಯಿತು ಇದರಿಂದ ಕಾಶ್ಮೀರಕ್ಕೆ ತೆರಳುವವರ ಸಂಖ್ಯೆಯೇ ತೀರ ವೀರಳವಾಯಿತು ಎಂದ ಅವರು 2019 ರಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ 370 ಅನುಚ್ಛೇದ ರದ್ದು ಮಾಡಿದ ಪರಿಣಾಮ ಸ್ವಲ್ಪ ಮಟ್ಟಿಗೆ ಕಾಶ್ಮೀರದಲ್ಲಿ ಸಮಸ್ಯೆ ಕಡಿಮೆಯಾಗಿದೆ ಆದರೂ ದೇಶದ ಮೂಲೆ ಮೂಲೆಗಳಿಂದ ಹಿಂದುಗಳು ಕಾಶ್ಮೀರಕ್ಕೆ ತೀರ್ಥ ಯಾತ್ರೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಕಾಶ್ಮೀರಕ್ಕೆ ಪ್ರವಾಸ ಕೈಗೊಳ್ಳಬೇಕು ಆಗ ಮಾತ್ರ ಅಲ್ಲಿಯ ದೇವಸ್ಥಾನಗಳು ಅಭಿವೃದ್ಧಿಯಾಗಿ ಹಿಂದು ಧಾರ್ಮಿಕ ಪರಂಪರೆ ಬೆಳೆಯಲು ಸಾಧ್ಯವಾಗುತ್ತದೆ ಜೊತೆಗೆ ಕಾಶ್ಮೀರ ಸಮಸ್ಯೆ ಬಗೆ ಹರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದಂತಾಗುತ್ತದೆ ಎಂದು ಹೇಳಿದರು.  

ಕಾಶ್ಮೀರದಲ್ಲಿ ಮೊಟ್ಟ ಮೊದಲ ಬಾರಿಗೆ 8 ನೇ ಶತಮಾನದ ಸಂದರ್ಭದಲ್ಲಿ ಮೊಟ್ಟ ಮೊದಲ ಬಾದರಿಗೆ ಮೊಹಮ್ಮದ ಕಾಸೀಮ ಎನ್ನುವ ದಾಳಿಖೋರ ಆಕ್ರಮಣ ಮಾಡಿದಾಗ ಆಗಲೇ ದಾಳಿಯನ್ನು ಸಮರ್ಥವಾಗಿ ಎದುರಿಸಿ ಪ್ರಾರಂಭದಲ್ಲಿ ದಾಳಿಖೋರನನ್ನು ನಿಯಂತ್ರಿಸಿದ್ದರೆ ಸಮಸ್ಯೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿರಲಿಲ್ಲ ಆದರೆ ಅಂದು ನಮ್ಮವರೇ ಮಾಡಿದ ತಪ್ಪಿನಿಂದ ಕಾಶ್ಮೀರ ಸಮಸ್ಯೆ ಬೆಳೆಯುತ್ತಲೇ ಹೋಯಿತು ಮುಂದೆ ಅಬ್ದುಲ್ಲಾ ಕುಟುಂಬ ಕಾಶ್ಮೀರದಲ್ಲಿ ಅರಾಷ್ಟ್ರೀಯತೆಯನ್ನು ಬೆಳೆಸುತ್ತಲೇ ಹೋಯಿತು ಇದರಿಂದ ಕಾಶ್ಮೀರದಲ್ಲಿ ದಿನನಿತ್ಯ ಸಂಘರ್ಷಕ್ಕೆ ಕಾರಣವಾಯಿತು ಎಂದ ಅವರು ಸ್ವಾತಂತ್ರ್ಯದ ನಂತರದಲ್ಲಿ ಬಂದ ನೇಹರು ಸರಕಾರ ಅಂದಿನ ಕಾನೂನು ಸಚಿವರಾಗಿದ್ದ ಡಾ.ಅಂಬೇಡ್ಕರರು ಕೂಡ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕೊಡಲು ವಿರೋಧಿಸಿದ್ದರು ಆದರೆ ಅಂದಿನ ಪ್ರಧಾನಿ ಜವಾಹರಲಾಲ ನೇಹರು ವಿಶೇಷ ಸ್ಥಾನ ಕಲ್ಪಿಸಿದರು ಅಂದಿನಿಂದಲೇ ಕಾಶ್ಮೀರ ಸಮಸ್ಯೆ ಪ್ರಾರಂಭವಾಯಿತು ಎಂದರು.  

ವೇದಿಕೆಯಲ್ಲಿ ಕರ್ನಾಟಕ ಉತ್ತರ ಪ್ರಾಂತ ಸಹ ಸಂಘಚಾಲಕ ಅರವಿಂದರಾವ ದೇಶಪಾಂಡೆ ಹಾಗೂ ಕಾರ್ಯಕ್ರಮದಲ್ಲಿ ಉತ್ತಿಷ್ಠ ಭಾರತ ವೇದಿಕೆಯ ಭಾರತ ಕರ​‍್ೂರಮಠ, ಸಂಜಯ ನಾಯಿಕ, ಚಂದ್ರಕಾಂತ ಉಂಡೊಡಿ, ವಿಶಾಲ ದೇಶಪಾಂಡೆ, ಮಂಜುಶಾ ನಾಯಿಕ, ಡಾ.ವಿಶ್ವನಾಥ ಕುಲಕರ್ಣಿ, ಕುಮಾರ ಗಾಣಿಗೇರ, ವಿನಾಯಕ ಆಸಂಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ವೈಶಾಲಿ ಕುಲಕರ್ಣಿ ನಿರೂಪಿಸಿದರು, ಭಾರತ ಕರ​‍್ೂರಮಠ ಪ್ರಾಸ್ತಾವಿಕವಾಗಿ ಮಾತನಾಡಿದರು, ಮೃಣಾಲಿನಿ ದೇಶಪಾಂಡೆ ವಂದಿಸಿದರು. 


ಸುದ್ದಿ ಓದಿ