ರಾಣೆಬೆನ್ನೂರ

ಲಕ್ಷ್ಮಿಕಾಂತ್ ಹುಲಗೂರಗೆ ಕರುನಾಡ ಕಾಯಕ ರಾಜ್ಯ ಪ್ರಶಸ್ತಿ

ಲಕ್ಷ್ಮಿಕಾಂತ್ ಹುಲಗೂರಗೆ ಕರುನಾಡ ಕಾಯಕ ರಾಜ್ಯ ಪ್ರಶಸ್ತಿ

ರಾಣೇಬೆನ್ನೂರು : ಡಿ 10ಇಲ್ಲಿನ ವಾಣಿಜ್ಯೋದ್ಯಮಿ, ಕೃಷಿ ಬಿಜೋತ್ಪಾದಕ, ಲಕ್ಷ್ಮಿಕಾಂತ್ ಎಸ್ ಹುಲಗೂರು, ಅವರಿಗೆ, ಬಾಗಲಕೋಟೆ ನವನಗರ ಶ್ರೀ ಕಾಳಿದಾಸ ಶಿಕ್ಷಣ ಸಂಸ್ಥೆ, ಆವರಣದಲ್ಲಿ, ನಡೆದ, ಪತ್ರಿಕಾ ಸಮಾರಂಭದಲ್ಲಿ, ಕರುನಾಡ ಕಾಯಕ ಸನ್ಮಾನ -2023 ರಾಜ್ಯ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿದೆ.             

ಲಕ್ಷ್ಮಿಕಾಂತ್ ಅವರು, ತಮ್ಮ ಶ್ರೀ ಬನಶಂಕರಿ  ಸೀಡ್ಸ್‌ ಕಂಪನಿಯ, ಉದ್ಯಮದ ಮೂಲಕ, ಕಳೆದ ನಾಲ್ಕು ದಶಕಗಳ ಕಾಲ, ನಗರ, ಜಿಲ್ಲೆ ಮತ್ತು ರಾಜ್ಯವು  ಸೇರಿದಂತೆ  ಕಲೆ,ಸಾಹಿತ್ಯ, ಸಂಗೀತ, ನಾಟಕ, ಕೃಷಿ ,ಸಾಮಾಜಿಕ, ಮತ್ತು ಓದ್ಯೋಗಿಕ ಬೆಳವಣಿಗೆಗಾಗಿ ತಮ್ಮದೇ ಆದ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಅನುಪಮ ಸೇವೆಯನ್ನು ಗುರುತಿಸಿರುವ, ಮಾಧ್ಯಮವು ಈ ಪ್ರತಿಷ್ಠಿತ ರಾಜ್ಯ ಮಟ್ಟದ ಪ್ರಶಸ್ತಿಯನ್ನು ನೀಡಿ ಸಾರ್ವಜನಿಕವಾಗಿ ಗೌರವಿಸಿದೆ.              

ಅದ್ದೂರಿಯಾಗಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ, ಜಾನಪದ ಗಾಯಕ ಗುರುರಾಜ ಹೊಸಕೋಟೆ, ಪ್ರಧಾನ ಸಂಪಾದಕ ಮಂಜುನಾಥ ರಾಥೋಡ ಮತ್ತು ಗಣ್ಯರು ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ ಪುರಸ್ಕೃತ ಲಕ್ಷ್ಮಿಕಾಂತ್ ಹುಲಗೂರು ಅವರಿಗೆ ನಗರ ಮತ್ತು ಜಿಲ್ಲೆಯ, ಅನೇಕ ಸಾಂಸ್ಕೃತಿಕ ಸಂಘಟನೆಗಳು, ಗಣ್ಯರು, ಕೃಷಿ ಕಾಯಕಯೋಗಿಗಳು ಸಾಮಾಜಿಕ ಸೇವಾ ಕಾರ್ಯಕರ್ತರು ಹಾರ್ದಿಕವಾಗಿ ಅಭಿನಂದಿಸಿದ್ದಾರೆ. 


ಸುದ್ದಿ ಓದಿ