23ರಂದು ಸಿದ್ಧಾರೂಢ ಮಠದಲ್ಲಿ ಕಾರ್ತಿಕೋತ್ಸವ
ರಾಣಿಬೆನ್ನೂರ 15: ಸುಕ್ಷೇತ್ರ ತಾಲೂಕಿನ ಖಂಡೇರಾಯನಹಳ್ಳಿಯ ಸಿದ್ಧಾರೂಢ ಮಠದಲ್ಲಿ ಪ್ರತಿ ವರ್ಷದಂತೆ ಕಾರ್ತಿಕೋತ್ಸವವು ಡಿ. 23ರಂದು ಶನಿವಾರ ಸಂಜೆ 7 ಗಂಟೆಗ ಶ್ರೀಮಠದ ಪೀಠಾಧಿಪತಿ ಗುರು ನಾಗರಾಜಾನಂದ ಸ್ವಾಮಿಜಿಗಳವರ ದಿವ್ಯ ಸಾನಿಧ್ಯದಲ್ಲಿ ಜರುಗಲಿವೆ.
ಅಂದು ಬೆಳಗ್ಗೆ 4 ಗಂಟೆಗೆ ಬ್ರಾಹ್ಮಿ ಮೂಹೂರ್ತದಲ್ಲಿ ಸಿದ್ದಾರೂಢರ ಮೂರ್ತಿಗೆ ಅಭಿಷೇಕ, ಬಿಲ್ವಾರ್ಚನೆ, ವಿವಿಧ ಪುಷ್ಪಗಳ ಅಲಂಕಾರಗಳೊಂದಿಗೆ ಪೂಜೆ, ನಂತರ ಸಿದ್ಧಾರೂಢ ಮೂರ್ತಿಯ ಪಾಲಕಿ ಉತ್ಸವ ನಡೆಯಲಿದೆ. ಅಂದು ಸಂಜೆ 5 ಗಂಟೆಗ ಗಾಯತ್ರಿ ಹೋಮ, ಹವನ ಮತ್ತು ಪೂರ್ಣಾಹುತಿ, ಸಾಮೂಹಿಕ ಗುರುಸ್ತೊತ್ರ, ಮಂಗಳಾರತಿಯೊಂದಿಗೆ ಕಾರ್ತಿಕೋತ್ಸವ ಜರುಗಲಿದೆ. ಈ ಮಂಗಲಮಯ ಕಾರ್ಯಕ್ರಮದಲ್ಲಿ ಸದ್ಭಕ್ತರು ಪಾಲ್ಗೊಂಡು ಪುನೀತರಾಗಬೇಕು ಎಂದು ಶ್ರೀಮಠದ ಜನಾರ್ಧನ ಕಡೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.