ದೇಶದ ಸಂಸ್ಕೃತಿಯನ್ನು ಕಾವಿಧಾರಿಗಳು ಕಾಪಾಡುತ್ತಿದ್ದಾರೆ: ಮಹೇಶಾನಂದ ಸ್ವಾಮಿಜಿ
ಐನಾಪೂರದಲ್ಲಿ ಕಾರ್ತಿಕೋತ್ಸವ-ಪ್ರವಚನ;
ಕಾಗವಾಡ 06: ದೇಶವನ್ನು ಗಡಿ ಕಾಯುವ ಸೈನಿಕರು ಉಳಿಸಿದ್ದಾರೆ. ದೇಶದ ಮೇಲೆ ಹಲವಾರು ಆಕ್ರಮಣಗಳು ಆದರೂ ಸಹಿತ ನಾವು ಏಕೆ ಉಳಿದಿದ್ದೇವೆಂದರೇ ದೇಶದಲ್ಲಿ ಹೆಜ್ಜೆಹೆಜ್ಜೆಗೂ ಕೋಟಿ ಕೋಟಿ ಮಂದಿರಗಳು, ಅವುಗಳ ಮೇಲೆ ಸುಂದರವಾದ ಶಿಖರ ಮೇಲೆ ಸುಂದರವಾದ ಭಗವಾ ದ್ವಜಗಳು ಪುಣ್ಯಕ್ಷೇತ್ರಗಳು ಹಿಂದೂಗಳನ್ನು ಉಳಿಸಿವೆ. ಎಲ್ಲಿಯ ವರೆಗೆ ಕಾವಿಧಾರಿಗಳು ಈ ನೆಲದಲ್ಲಿ ಇರುತ್ತಾರೆಯೋ ಅಲ್ಲಿಯ ವರೆಗೆ ಹಿಂದು ಧರ್ಮ ನಾಶವಾಗುವದಿಲ್ಲವೆಂದು ಹಂಚಿನಾಳ ಭಕ್ತಿಯೋಗಾಶ್ರಮದ ಮಹೇಶಾನಂದ ಸ್ವಾಮಿಜಿ ಹೇಳಿದರು.
ಅವರು ಗುರುವಾರ ದಿ.05 ರಂದು ತಾಲೂಕಿನ ಐನಾಪುರ ಪಟ್ಟಣದ ಶ್ರೀ ಧರಿದೇವರ ಸೇವಾ ಸಮಿತಿ ಆಯೋಜಿಸಿದ್ದ 5 ದಿನಗಳ ಕಾರ್ತಿಕೋತ್ಸವ ಹಾಗೂ ಪ್ರವಚನ ಕಾರ್ಯಕ್ರಮವನ್ನು ದೀಪ ಬೆಳಗಿಸುವದರೊಂದಿಗೆ ಉದ್ಘಾಟಿಸಿ ಆರ್ಶಿವಚನ ನಿಡುತ್ತಾ ಮಾತನಾಡುತ್ತಿದ್ದರು. ಭಾರತ ದೇಶ ಏಕೆ ಮಹತ್ವ ಪಡೆದುಕೊಂಡಿದೆ ಎಂದರೆ..? ಇಲ್ಲಿ ಯಾವುದೇ ಜಾತಿ, ಮೇಲು ಕೀಳು ಸಣ್ಣವರು, ದೊಡ್ಡವರು ಎಂಬ ಭೇದ ಮರೆತು ನಾವೆಲ್ಲ ಹಿಂದುಗಳು ಬಂಧುಗಳು ಉಳಿಯಬೇಕು ಎಂದು ಸೇರಿದ್ದೇವೆ. ಶ್ರೀಮಂತ ಬಡವ ಎಂಬ ಭೇದ ಮರೆತು, ಭಕ್ತಿ ಶೃದ್ದೆಯಿಂದಾಗಿ ನಾವೆಲ್ಲ ಒಗ್ಗೂಡಿದ್ದೇವೆ. ಹಿಂದು ಸಂಸ್ಕತಿಯಲ್ಲಿ ಎಲ್ಲಿಯ ವರೆಗೆ ಹಿಂದುಗಳ ಸಹೋದರ ಭಾವದಿಂದ ಸುಖ ದುಃಖಗಳಲ್ಲಿ ಭಾಗವಹಿಸುತ್ತಾರೆಯೋ ಹಾಗೂ ಮಠ ಮಂದಿರಗಳು ಇರುತ್ತವೇಯೋ ಅಲ್ಲಿಯ ವರಗೂ ನಮ್ಮ ದೇಶ ಜಗತ್ತಿಗೆ ಗುರುವಾಗಿರುತ್ತದೆ ಎಂದರು.
ಈ ಸಂದರ್ಭದಲ್ಲಿ ದಾನಮಾಡಿದ ದಾನಿಗಳನ್ನು ಸತ್ಕರಿಸಲಾಯಿತು. ಐನಾಪುರ ಗುರುದೇವಾಶ್ರಮದ ಬಸವೇಶ್ವರ ಸ್ವಾಮೀಜಿ ದಿವ್ಯಸಾನಿಧ್ಯವ ವಹಿಸಿದ್ದರು.
ಈ ವೇಳೆ ಗ್ರಾ.ಪಂ. ಸದಸ್ಯ ಸುಭಾಷ ಪಾಟೀಲ, ಚಮನರಾವ ಪಾಟೀಲ, ಸುರೇಶ ಗಾಣಿಗೇರ, ಪ.ಪಂ. ಸದಸ್ಯ ಸಂಜು ಭಿರಡಿ, ರಾಕೇಶ ಕಾರ್ಚಿ, ಕೆಆರ್ಇಎಸ್ ಸಂಸ್ಥೆಯ ನಿರ್ದಶಕ ಉದಯ ನಿಡಗುಂದಿ, ವಿಜಯ ಪೋತದಾರ, ಅಣ್ಣಾಸಾಬ ಡೂಗನವರ, ರಾವಸಾಬ ಚೌಗಲಾ, ಬಾಳಾಸಾಬ ಪಾರಶೆಟ್ಟಿ, ಶ್ರೀಶೈಲ ಪಾರಶೆಟ್ಟಿ, ಅಶೋಕ ಡಿಗ್ರಜ, ಪ್ರವೀಣ ಖೋತ, ವಿಶ್ವನಾಥ ಪಾರಶೆಟ್ಟಿ, ತಮಣ್ಣಾ ಕಮತೆ, ರಾವಸಾಬ ಪಾಟೀಲ, ಅಶೋಕ ಡಿಗ್ರಜ, ಪ್ರಕಾಶ ಬಡಿಗೇರ, ಧರಿದೇವರ ಗಜಾನನ ಮಿತ್ರ ಮಂಡಳದ ಸದಸ್ಯರು, ಸೇವಾ ಸಮಿತಿ ಸದಸ್ಯರು, ಅಪಾರ ಭಕ್ತರು ಭಾಗವಹಿಸಿದರು. ಪಪಂ ಸದಸ್ಯ ತಮಣ್ಣಾ ಪಾರಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಮಾರಿ ಗುಂಡಾಳೆ ಪ್ರಾರ್ಥಿಸಿದರು. ಸುಕ್ರುಸಾಬ ಮುಲ್ಲಾ, ಗುರುನಾಥ ಸುತಾರ ಗವಾಯಿಗಳು ಸಂಗೀತ ಸೇವೆ ನೀಡಿದರು. ಮಹೇಶ ಸೊಲ್ಲಾಪುರ ನಿರೂಪಿಸಿದರು. ಸಂಗೀತಾ ಮಾಳಿ ಸ್ವಾಗತಿಸಿ, ವಂದಿಸಿದರು.