ಶಿಗ್ಗಾವ್

ಕಾರ್ತಿಕೋತ್ಸವ: ಮಹಾಂತ ಶ್ರೀಗಳಿಂದ ಎಣ್ಣೆದಾನ

ಕಾರ್ತಿಕೋತ್ಸವ: ಮಹಾಂತ ಶ್ರೀಗಳಿಂದ ಎಣ್ಣೆದಾನ

ಲೋಕದರ್ಶನ ವರದಿ

ಶಿಗ್ಗಾವಿ :  ಹಾರ, ತುರಾಯಿ, ಸನ್ಮಾನ, ಪ್ರಶಸ್ತಿಗಳಿಗಾಗಿ ನಾವು ಕೆಲಸ ಮಾಡದೇ, ನಮ್ಮ ಆತ್ಮ ಸಂತೃಪ್ತಿಗಾಗಿ ಸಮಾಜ ಸೇವೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೋಂಡಾಗ ಹಾರ, ತುರಾಯಿ, ಸನ್ಮಾನಗಳು ನಮ್ಮನ್ನರಸಿ ಬರಲಿವೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಯದೇವ ಅಗಡಿ ಹೇಳಿದರು.

     ಬಂಕಾಪೂರ ಪಟ್ಟಣದ ದೇಸಾಯಿಮಠದ ಆವರಣದಲ್ಲಿ ಕಾರ್ತಿ ಕೋತ್ಸವದ ಅಂಗವಾಗಿ ಮಹಾಂತ ಸ್ವಾಮಿಗಳವರಿಂದ ಎಣ್ಣೆದಾನ ಕಾರ್ಯಕ್ರಮದಲ್ಲಿ ಮಠದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಹಳ್ಳಿಗಳು ಆಧುನಿಕತೆಗೆ ಮಾರುಹೋಗಿ ಗತವೈಭವದ ಪರಂಪರೆಯನ್ನು ಮರೆ ಮಾಚುತ್ತಲಿವೆ. ಆ ಹಿನ್ನಲೆಯಲ್ಲಿ ನಮ್ಮ ಅಗಡಿ ತೋಟವನ್ನು ಔಷಧಿ ಗುಣವುಳ್ಳ ಸಸ್ಯ ಸಂವಧರ್ಿನಿ ಬೆಳವಣಿಗೆಯೊಂದಿಗೆ,  ಪ್ರಾಚಿನ ಪರಂಪರೆಯನ್ನು ಬಿಂಬಿಸುವ ಕುಟ್ಟುವ, ಬೀಸುವ, ಹಸು, ಕಂದಿಲು, ಕೆರೆ ಸೇರಿದಂತೆ ನೈಜ ಹಳ್ಳಿಯ ಸೊಗಡನ್ನು ಬಿಂಬಿಸುವ ಪ್ರಯತ್ನ ನಮ್ಮ ಪ್ರವಾಸಿ ತಾಣದ್ದಾಗಿದೆ ಎಂದು ಹೇಳಿದರು.

     ಸದಾಶಿವಪೇಟೆ ವಿರಕ್ತಮಠದ ಗದಿಗೇಶ್ವರ ಸ್ವಾಮಿಜಿ ಮಾತನಾಡಿ, ಮನುಷ್ಯನಿಗೆ ಹುಟ್ಟು ಆಕಸ್ಮೀಕವಾದರೂ ಸಾವು ಶಾಸ್ವತ ಅದರ ಮಧ್ಯದಲ್ಲಿರುವ ಮನುಸ್ಯನ ಜೀವನವನ್ನು ಸನ್ಮಾರ್ಗದತ್ತ ಕೋಂಡೋಯ್ಯಬೇಕಾದರೆ, ಶಿವ, ಶರಣರ ಸಾಂಗ್ಯತ್ಯ, ಧರ್ಮ ಬೋದನೆಯನ್ನು ಆಲಿಸಿ, ಪಾಲಿಸುವ ಅಗತ್ಯೆತೆ ಇದೆ ಎಂದು ಹೇಳಿದರು.     ಧಾರವಾಡ ಮುರಘಾಮಠದ ಮಲ್ಲಿಕಾಜರ್ುನ ಸ್ವಾಮಿಗಳು ಮಾತನಾಡಿ, ಭಕ್ತರ ಉದ್ದಾರವೇ ಶ್ರೀಮಠದ ಉದ್ದಾರವೆಂದು ಅರಿತು ದೇಸಾಯಿಮಠದ ಮಹಾಂತಸ್ವಾಮಿಗಳು, ಕಾರ್ತಿಕೋತ್ಸವವನ್ನು ಸಾಂಕೇತಿಕವಾಗಿ ದೀಪಾರಾಧನೆ ಮಾಡುವಮೂಲಕ ವೃಥಾ ಎಣ್ಣೆಯನ್ನು ಹಾಳು ಮಾಡದೇ ಬಡ, ಬಗ್ಗರಿಗೆ ದೀನ, ದಲಿತರಿಗೆ ಎಣ್ಣೆದಾನ ಮಾಡೂವ ಮೂಲಕ ಆಚರಿಸಿಕೊಳ್ಳುತ್ತಿರುವುದು ಅರ್ಥಪೂರ್ಣ ಆಚರಣೆಯಲ್ಲೋಂದಾಗಿದೆ ಎಂದು ಹೇಳಿದರು.

ದೇಸಾಯಿಮಠದ ಮಹಾಂತಸ್ವಾಮಿಗಳು ಸಭೆಯ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದ ಅವರು, ನಾನು ಬೇಡುವ ಸ್ವಾಮಿಯಲ್ಲ, ನೀಡುವ ಸ್ವಾಮಿ, ಭಕ್ತರು ಸ್ವಯಂ ಪ್ರೇರಣೆಯಿಂದ ನೀಡಿರುವ ದಾನವನ್ನು ದಾಸೋಹ ಧರ್ಮಬೋದನೆಗೆ ವ್ಯಯಿಸುತ್ತಿದ್ದೇನೆ ಎಂದರು. ಖ್ಯಾತ ವೈದ್ಯ ಡಾ.ಆರ್.ಎಸ್.ಅರಳೆಲೆಮಠ, ಪುರಸಭೆ ಮುಖ್ಯಾಧಿಕಾರಿ ರೇಣುಕಾ ದೇಸಾಯಿ, ಮೋಹನ ಮೆಣಸಿನಕಾಯಿ ಮಾತನಾಡಿದರು. 

    ಕಸಾಪ ಹೋಬಳಿ ಘಟಕದ ಅಧ್ಯಕ್ಷ ಎ.ಕೆ.ಆದವಾನಿಮಠ, ಗಂಗಣ್ಣ ಹುಲ್ಲೂರ, ಸಿ.ಆರ್.ದೇಸಾಯಿ, ಜಿ.ಕೆ.ಶೆಟ್ಟರ, ಅನಿಲ್ ದೇಸಾಯಿ, ಗಿರಿರಾಜ ದೇಸಾಯಿ, ಮಂಜುನಾಥ ಬ್ಯಾಹಟ್ಟಿ, ಯಲ್ಲಪ್ಪ ಸುಂಕದ, ಹುಚ್ಚಯ್ಯಸ್ವಾಮಿ ಹುಚ್ಚಯ್ಯನಮಠ, ಅಶೋಕ ನರೇಗಲ್, ಬಸವರಾಜ ಆಲದಕಟ್ಟಿ, ಮಲ್ಲಯ್ಯ ಹುಚ್ಚಯ್ಯನಮಠ ಸೇರಿದಂತೆ ಇತರರು ಇದ್ದರು. ಎಮ್.ಬಿ.ಉಂಕಿ ನಿರೂಪಿಸಿದರು 

ಸುದ್ದಿ ಓದಿ