ಇಂಡಿ

ಕಾರ್ತಿಕ ದೀಪೋತ್ಸವ ಕಾರ್ಯಕ್ರಮ

ಕಾರ್ತಿಕ ದೀಪೋತ್ಸವ ಕಾರ್ಯಕ್ರಮ

ಇಂಡಿ: ತಾಲೂಕಿನ ಲಚ್ಯಾಣದಲ್ಲಿ ಸಿದ್ದಲಿಂಗ ಮಹಾರಾಜರ ಕಮರಿಮಠದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಕಳೆದ ದೀಪಾವಳಿ ಅಮವಾಸ್ಯೆಯಿಂದ ಕಾರ್ತಿಕ ದೀಪೋತ್ಸವ ಆರಂಭಗೊಂಡಿದ್ದು ಈಗ ನಿತ್ಯ ಸಂಜೆ 6 ರಿಂದ ನಾನಾ ಭಕ್ತರು ತೈಲದ ದೀಪ ಬೆಳಗಿ ಭಕ್ತಿ ಸಮರ​‍್ಿಸುತ್ತಿರುವ ನೋಟ ಮಠಕ್ಕೆ ಬಂದ ಭಕ್ತರ ಗಮನ ಸೆಳೆಯುತ್ತಿದೆ.  

ಕಾರ್ತಿಕ ದೀಪೋತ್ಸದ ನಿಮಿತ್ಯ ಸ್ಥಳಿಯ ಹಾಗೂ ಸುತ್ತ ಮುತ್ತಲ ಗ್ರಾಮದ ಭಕ್ತರು ತಮ್ಮ ಮನೆಯಿಂದ ತೈಲ ತಂದು ಶ್ರದ್ಧಾ ಭಕ್ತಿಯಿಂದ ನೂರಾರು ದೀಪಗಳಿಗೆ ತೈಲ ಹಾಕಿ ಸಂಭ್ರಮಿಸುವ ನೋಟ ಒಂದೆಡೆಯಾದರೆ, ಮತ್ತೊಂದೆಡೆ ಮಠದ ತುಂಬ ತೈಲದ ದೀಪದ ಬೆಳಕು ಮಠದ ಅಂಗಳವನ್ನೆ ಕಂಗೊಳಿಸುವಂತೆ ಮಾಡಿದೆ. ಪರಿಣಾಮ ಈ ಸ್ಥಳವೀಗ ಮುದ್ದು ಮಕ್ಕಳ ಸಂಭ್ರಮದ ಕೇಂದ್ರಬಿಂದುವಾಗಿ ಪರಿಣಮಿಸಿದೆ. ಈ ಕಾರ್ತಿಕ ದೀಪೋತ್ಸವ ಸ್ಥಳಿಯ ಸಂಗನಬಸವೇಶ್ವರ ಐ.ಟಿ.ಐ ಕಾಲೇಜು ವಿದ್ಯಾರ್ಥಿಗಳು, ಸರಕಾರಿ ಪ್ರೌಢಶಾಲೆ ಸೇರಿದಂತೆ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ದೀಪೋತ್ಸವದಲ್ಲಿ ಪಾಲ್ಗೊಂಡಿದ್ದರು. 


ಸುದ್ದಿ ಓದಿ