ಬೈಲಹೊಂಗಲ

ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ

ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ

ಬೈಲಹೊಂಗಲ13: ದೀಪೋತ್ಸವವು ಅಜ್ಞಾನವೆಂಬ ಅಂಧಕಾರ ಅಳಿಸುತ್ತಾ ಮನದಲ್ಲಿ ಸುಜ್ಞಾನದ ದೀವಿಗೆಯನ್ನು ಹಚ್ಚುತ್ತದೆ ಎಂದು ಧಾರ್ಮಿಕ ದತ್ತಿ ಇಲಾಖೆ ನಿರ್ದೇಶಕ ಡಾ. ಮಹಾಂತೇಶ ಶಾಸ್ತ್ರೀ ಆರಾದ್ರಿಮಠ ಹೇಳಿದರು. 

ಅವರು ಸೋಮವಾರ ಸಂಜೆ ಪಟ್ಟಣದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕಾರ್ತೀಕ ಮಾಸ ಅಂಗವಾಗಿ ದೀಪೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಕಾರ್ತಿಕೋತ್ಸವ ಮಾಸದಲ್ಲಿ ದೀಪ ಬೆಳಗುವದರಿಂದ ನಮ್ಮಲ್ಲಿ ಧನಾತ್ಮಕ ಶಕ್ತಿ ಪ್ರಾಪ್ತವಾಗಿ ಸಮಸ್ಯೆಗಳಿಂದ ದೂರ ಮಾಡಬಲ್ಲದು. ಅದಕ್ಕಾಗಿ ನಾವೆಲ್ಲರೂ ಈ ಕಾರ್ತಿಕ ದೀಪೋತ್ಸವದಲ್ಲಿ ಭಾಗವಹಿಸಿ, ದೀಪದಿಂದ ದೀಪವನ್ನು ಬೆಳಗಿಸಿ, ಅದು ಪ್ರಜ್ವಲವಾಗಿ ನಾಡಿನಾದ್ಯಂತ ಶಾಂತಿ- ಸೌಹಾರ್ಧತೆ, ಐಕ್ಯತೆ, ಸಾಮರಸ್ಯತೆ, ಧರ್ಮ ಸಹಿಂಷ್ಣುತೆ ನಾವೆಲ್ಲರೂ ಒಂದೇ ಎಂಬ ಐಕ್ಯತೆಯ ಮಂತ್ರ ಜಪಿಸುತ್ತಾ, ಜೀವನದಲ್ಲಿ ಸುಖ- ಶಾಂತಿ, ನೆಮ್ಮದಿಯನ್ನು ದಯಪಾಲಿಸಲೆಂದು ದುರ್ಗಾಪರಮೇಶ್ವರಿ ದೇವಿಯನ್ನು ಪ್ರಾರ್ಥಿಸೋಣ ಎಂದರು. 

ಮುತೈದೆಯರಿಗೆ ಉಡಿ ತುಂಬುವುದು, ಭಕ್ತರಿಗೆ ಮಣ್ಣಿನ ದೀಪ ವಿತರಣೆ, ಅನ್ನಸಂತರೆ​‍್ಣ ಕಾರ್ಯಕ್ರಮ ಜರುಗಿತು. 

ಪ್ರೀತಿ ಆರಾದ್ರಿಮಠ, ಅನ್ನಪೂರ್ಣ ರೇಶ್ಮಿ, ರೂಪಾ ಪಾಟೀಲ, ಶಾಂತಮ್ಮ ಮಠಪತಿ, ನಿವೇದಿತಾ ರೆಡ್ಡಿ ಹಾಗೂ ಭಕ್ತರು ಇದ್ದರು. 


ಸುದ್ದಿ ಓದಿ