ಇಂಡಿ

ಕರ್ನಾಟಕ ರಾಜ್ಯೋತ್ಸವ : ಸಾಹಿತಿ, ಲೇಖಕಿ ಸಂಗೀತಾಗೆ ಸನ್ಮಾನ

ಕರ್ನಾಟಕ ರಾಜ್ಯೋತ್ಸವ : ಸಾಹಿತಿ, ಲೇಖಕಿ ಸಂಗೀತಾಗೆ ಸನ್ಮಾನ

ಇಂಡಿ: ಪಟ್ಟಣದ ಸಾಹಿತಿ, ಲೇಖಕಿ ಸಂಗೀತಾ ರಾಘವೇಂದ್ರ ಕುಲಕರ್ಣಿಯವರಿಗೆ 67ನೇ ಕರ್ನಾಟಕ ರಾಜ್ಯೋತ್ಸವ ನಿಮಿತ್ಯ ಇಂಡಿ ತಾಲೂಕಾ ಆಡಳಿತದ ಪರವಾಗಿ ಪೋಲೀಸ್ ಮೈದಾನದಲ್ಲಿ ಮಂಗಳವಾರ ಉಪವಿಭಾಗಾಧಿಕಾರಿ ರಾಮಚಂದ್ರ ಗಡದೆ, ತಹಶೀಲ್ದಾರ ನಾಗಯ್ಯ ಹೀರೇಮಠರವರು ಸತ್ಕರಿಸಿದರು. 

ತಹಸೀಲ್ದಾರ ನಾಗಯ್ಯ ಹಿರೇಮಠ ಮಾತನಾಡಿ, ಸಂಗೀತಾ ರಾಘವೇಂದ್ರ ಕುಲಕರ್ಣಿಯವರು ಕನ್ನಡ ಸಾಹಿತ್ಯ ಲೋಕಕ್ಕೆ ಈಗಾಗಲೇ 4 ಕೃತಿಗಳನ್ನು ಅರ​‍್ಿಸಿದ್ದಾರೆ ಹಾಗೂ ಕನ್ನಡ ವಿಷಯದಲ್ಲಿ ರಾಷ್ಟ್ರೀಯ, ಅಂತರಾಷ್ಟ್ರೀಯ ವಿಚಾರ ಸಂಕೀರ್ಣಗಳಲ್ಲಿ ಭಾಗವಹಿಸಿ ಉಪನ್ಯಾಸ ಮಂಡಿಸಿದ್ದಾರೆ ಹಾಗೂ ತಮ್ಮದೇ ಆದ ಪ್ರತಿಷ್ಠಾನದ ಮೂಲಕ ಕನ್ನಡ ನಾಡು-ನುಡಿ ಸೇವೆ ಸಲ್ಲಿಸುತ್ತಿದ್ದಾರೆಂದು ಅಭಿಪ್ರಾಯ ಪಟ್ಟರು.  

ತಾಲೂಕಾ ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ಸುನೀಲ್ ಮದ್ದಿನ್, ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ, ಡಿ.ಎ. ಮುಜಗೊಂಡ ಸೇರಿದಂತೆ ಶಾಲಾ-ಕಾಲೇಜಿನ ವಿದ್ಯಾರ್ಥಿ/ನಿಯರು, ಉಪನ್ಯಾಸಕರು ಹಾಗೂ ಕನ್ನಡ ಆಸಕ್ತರು ಇದ್ದರು. 


ಸುದ್ದಿ ಓದಿ