ಕರ್ನಾಟಕ ರಾಜೋತ್ಸವ: ಮಕ್ಕಳಿಗೆ ಕಲಿಕಾ ಸಾಮುಗ್ರಿ ವಿತರಣೆ
ಕನ್ನಡ ಪ್ರೇಮ ಮೆರದ ಜುಗೂಳ ಜೋಕರ್ಸ್ ತಂಡ
ಕಾಗವಾಡ 30: ಸದಾ ಒಂದಿಲ್ಲೊಂದು ಸಾಮಾಜಿಕ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಜುಗೂಳ ಜೋಕರ್ಸ ತಂಡದ ಸದಸ್ಯರು, ಮುಂಬರುವ ಕರ್ನಾಟಕ ರಾಜೋತ್ಸವದ ನಿಮಿತ್ಯ ಮಂಗಳವಾರ ದಿ. 29 ರಂದು ಜುಗೂಳ ಗ್ರಾಮದ ಕನ್ನಡ ಗಂಡು ಮಕ್ಕಳ ಶಾಲೆಯ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಿ, ಕನ್ನಡ ಪ್ರೇಮವನ್ನು ಮೆರೆದಿದ್ದಾರೆ.
ಇನ್ಸಾ-್ಟಗ್ರಾಮ್ ಸೊಸಿಯಲ್ ಮಿಡಿಯಾದಲ್ಲಿ ಸದಾ ಎಕ್ಟಿವ್ಹ್ ಆಗಿರುವ ಜುಗೂಳ ಜೋಕರ್ಸ ತಂಡವು, ತಾಲೂಕಿನ ಜುಗೂಳ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಪ್ರಸಿದ್ಧಿ ಹೊಂದಿದ್ದು, ಪ್ರತಿಬಾರಿಯೂ ವಿನೂತನ ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಜೊತೆಗೆ ಜನರಲ್ಲಿ ವಿವಿಧ ಕ್ಷೇತ್ರಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ.
ಅವರ ಕನ್ನಡ ಪ್ರೇಮಕ್ಕೆ ಈಗ ನ.1 ರಂದು ಕರ್ನಾಟಕ ರಾಜ್ಯೋತ್ಸವದ ನಿಮಿತ್ಯ ಕನ್ನಡ ಗಂಡು ಮಕ್ಕಳ ಶಾಲಾ ಮಕ್ಕಳಿಗೆ ಗ್ರಾಮದ ಸಜೀನ ಕುಮಟೋಳೆ ಮತ್ತು ರೈತಸಂಘ ಗಜಾನನ ಮಂಡಳ ಇವರ ಸಹಕಾರದೊಂದಿಗೆ ನೋಟ್‌ಬುಕ್, ಪೆನ್-ಪೆನ್ಸಿಲ್ ಮತ್ತು ಇತರೆ ಕಲಿಕಾ ಸಾಮಗ್ರಿಗಳನ್ನು ವಿತರಿಸಿದ್ದು, ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದ್ದು, ಜುಗೂಳ ಜೊಕರ್ಸ್ ತಂಡದ ಕಾರ್ಯವನ್ನು ಎಲ್ಲರೂ ಹಾಡಿ ಹೊಗಳುತ್ತಿದ್ದಾರೆ.
ಜುಗೂಳ ಜೊಕರ್ಸ್ ತಂಡವು ಇದೇ ರೀತಿಯಾಗಿ ಸಾಮಾಜಿಕ ಕಾರ್ಯಗಳನ್ನು ತಮ್ಮನ್ನು ತೊಡಗಿಸಿಕೊಂಡು, ಸಹಕಾರ ಅಪೇಕ್ಷೆಯಲ್ಲಿರುವರ ಆಶಾಕಿರಣವಾಗಿ ಹೊರಹೊಮ್ಮಲಿ. ಇನ್ನಷ್ಟು ಸಾಮಾಜಿಕ ಕಳಕಳಿಯ ಕಾರ್ಯಗಳು ಅವರಿಂದ ನಿರಂತರವಾಗಿರಲಿ ಎಂಬುದೇ ಗ್ರಾಮಸ್ಥರ ಆಶಯವಾಗಿದೆ.