ಬೈಲಹೊಂಗಲ

ಕರೋನಾ ನೇಕಾರನ ಮೇಲು ಕರಿನೆರಳು

ಕರೋನಾ ನೇಕಾರನ ಮೇಲು ಕರಿನೆರಳು

ಬೈಲಹೊಂಗಲ 25:  ತಾಲೂಕಿನ ವಕ್ಕುಂದ ಗ್ರಾಮದಲ್ಲಿ  ಸುಮಾರು 150 ನೇಕಾರ ಕುಟುಂಬಗಳು ವಾಸವಿದ್ದು, ಅವರೆಲ್ಲರೂ ನೇಕಾರಿಕೆಯನ್ನೇ ಅವಲಂಬಿಸಿದ್ದು  ಗ್ರಾಮೀಣ ಪ್ರದೇಶದಲ್ಲಿ ಅತಿ ಹೆಚ್ಚಾಗಿ ಹರಡುತ್ತಿರುವ  ಮಹಾಮಾರಿ ಕರೋನಾ ನೇಕಾರನ ಮೇಲು ಕರಿನೆರಳು ಚೆಲ್ಲಿದೆ.  ಬದುಕಿನ ಬವಣೆ ಜೊತೆ ಕುಟುಂಬ ನಿರ್ವಹಿಸುವುದು ಕಷ್ಟವಾಗಿದೆ ಎಂಬುವುದು ಇಲ್ಲಿನ ನೇಕಾರ ಸಮುದಾಯದ ಗೋಳು ಹಲವಾರು ವರ್ಷಗಳಿಂದ ನೇಕಾರಿಕೆಯನ್ನೆ ವೃತ್ತಿ ಮಾಡಿಕೊಂಡು ಬದುಕು ಸಾಗಿಸುತ್ತಿರುವ ಕುಟುಂಬಗಳ ಪರಿಸ್ಥಿತಿ ನೀರಿನ ಮೇಲಿನ ಗುಳ್ಳೆಯಂತೆ ಆಗಿವೆ. ವಿನೂತನ ಶೈಲಿಯಲ್ಲಿ ವಿವಿಧ ಮಾದರಿಗಳ ಸೀರೆಗಳನ್ನು ತಯಾರಿಸಿ ಜೀವನ ಸಾಗಿಸುತ್ತಾರೆ ಆದರೆ ಈ ಕರೋನಾ ಮಹಾಮಾರಿಯಿಂದ ಈ ಉದ್ಯಮವನ್ನು ಅವಲಂಬಿತವಾದ ನೇಕಾರ ಸಂಕಷ್ಟಕ್ಕೆ ಸಿಲುಕಿದ್ದಾನೆ. ಬಲು ಭರ್ಜರಿಯಾಗಿ ಮದುವೆ ಹಾಗೂ ಇನ್ನಿತರ ಶುಭಸಮಾರಂಭಗಳು ಹೆಚ್ಚಾಗಿ ನಡೆಯುವ ಇಂತಹ ಸಮಯದಲ್ಲಿಯೇ ಕರೋನಾ ಮಹಾಮಾರಿ ಬೆಂಬಿಡದಂತೆ ಕಾಡುತ್ತಿದೆ, ಕಳೆದ ಬಾರಿ ನೇಯ್ದ ಸೀರೆಗಳನ್ನು ಕೊಳ್ಳುವವರಿಲ್ಲದೆ ಸಾಕಷ್ಟು ಜನರು ತೀವ್ರ ಸಂಕಷ್ಟ ಅನುಭವಿಸಿದ್ದು ಮರೆಮಾಚುವ ಮೊದಲೇ ಮತ್ತೊಮ್ಮೆ ನೇಕಾರರ ಮೇಲೆ ಕರಿನೆರಳಿನ ಛಾಯೆ ಬಿದ್ದಿದೆ, ಕೆಲಸ ಮಾಡಲು ಕಚ್ಚಾ ವಸ್ತುಗಳ ಕೊರತೆ ಒಂದುಕಡೆಯಾದರೆ, ರೆಡಿಯಾದ ಸೀರೆಗಳ ಸಾಗಾಣಿಕೆ ಚಿಂತೆ ಒಂದುಕಡೆ  ನೇಕಾರಿಕೆ ಬಿಟ್ಟು ಬೇರೆ ಉದ್ಯೋಗ ಇವರಿಗೆ ವಿರಳ ಸರಕಾರ ಈಗಾಗಲೇ ಸಂದಿಗ್ಧ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಕಾಮರ್ಿಕರಿಗೆ ಹಾಗೂ ಇತರೆ ವರ್ಗದವರಿಗೆ ಸಹಾಯಧನವನ್ನು ಘೋಷಿಸಿದ ಹಾಗೆ ನೇಕಾರರಿಗೂ ಒಂದು ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ನೇಕಾರರ ಹಿತವನ್ನು ಕಾಯಬೇಕೆಂಬುದೇ ನೇಕಾರ ಸಮುದಾಯದ ಅಳಲು. 

  ಸರಕಾರ ನಮ್ಮನ್ನು ಸರಿಯಾಗಿ  ಪರಿಗಣನೆಗೆ ತೆಗೆದುಕೊಳ್ಳಬೇಕೆಂದು  ಮುಖಂಡರಾದ ಮಲ್ಲಾರೆಪ್ಪ ಢವಳೆ, ಶಂಕರ ಢವಳೆ, ಮಲ್ಲಿಕಾಜರ್ುನ ಢವಳೆ, ಬಿಜೆಪಿ ನೇಕಾರ ಪ್ರಕೋಷ್ಠ ಸದಸ್ಯ ಮಂಜು ಸಂಭೋಜಿ, ಬಸವರಾಜ ಢವಳೆ, ಮಂಜು ಬುಚಡಿ,  ಗಂಗಾಧರ ಢವಳೆ, ಮಾವುಲಿ ಢವಳೆ, ಪ್ರಕಾಶ ಢವಳೆ, ಫಕ್ಕೀರ ಕಾಂಬಳೆ, ರಾಜು ಬುಚಡಿ ಹಾಗೂ ಅನೇಕರು ಸಕರ್ಾರವನ್ನು ಒತ್ತಾಯಿಸಿದ್ದಾರೆ. ತಾಲೂಕಿನ ವಕ್ಕುಂದ ಗ್ರಾಮದಲ್ಲಿ ಕರೋನದಿಂದಾಗಿ ಮಗ್ಗಗಳು ನಿಂತಿರುವುದು  

ಸುದ್ದಿ ಓದಿ