ಕಾಗವಾಡ

ಯಾವುದೇ ಅಸ್ತ್ರ ಇಲ್ಲದೇ ಸದೆಬಡಿಯುವ ಕಲೆಯೇ ಕರಾಟೆ

ಯಾವುದೇ ಅಸ್ತ್ರ ಇಲ್ಲದೇ ಸದೆಬಡಿಯುವ ಕಲೆಯೇ ಕರಾಟೆ

ಸುರೇಶ ಚೌಗಲಾ ಹೇಳಿಕೆ: ಕರಾಟೆ ಕೇಂದ್ರ ಉದ್ಘಾಟನೆ, ಕಲರ್ ಬೆಲ್ಟ್ ವಿತರಣೆ ಕಾರ್ಯಕ್ರಮ

ಶೇಡಬಾಳ 26: ಕರಾಟೆ ಕಲಿಯುವುದರಿಂದ ಶರೀರ ಸದೃಢವಾಗುವುದರ ಜೊತೆಗೆ ಆಕಸ್ಮಿಕವಾಗಿ ನಮ್ಮ ಮೇಲೆ ಎರಗಿ ಬರುವ ವ್ಯಕ್ತಿಯನ್ನು ಯಾವುದೇ ಅಸ್ತ್ರ ಇಲ್ಲದೇ ಸದೆ ಬಡೆಯುವ ಕಲೆಯೇ ಕರಾಟೆಯಾಗಿದೆಯೆಂದು ಶಿರಗುಪ್ಪಿ ಗ್ರಾಮದ ರೈತ ಮುಖಂಡರಾದ ಸುರೇಶ ಚೌಗಲಾ ಹೇಳಿದರು.

ಅವರು ರವಿವಾರ ದಿ. 26 ರಂದು ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದ ಸಕರ್ಾರಿ ಕನ್ನಡ ಶಾಲೆಯ ಆವರಣದಲ್ಲಿ ಜಿಲ್ಲಾ ರಾಣಿ ಚೆನ್ನಮ್ಮಾ ಸೇಲ್ಫ್ ಡಿಫೇನ್ಸ್ ಮತ್ತು ಕರಾಟೆ ಸ್ಪೋಟ್ಸರ್್ ಅಸೋಶಿಯೇಶನ್ ಬೆಳಗಾವಿ ಇವರು ಆಯೋಜಿಸಿದ್ದ ಕರಾಟೆ ಕೇಂದ್ರ ಉದ್ಘಾಟನೆ ಹಾಗೂ ಕಲರ್ ಬೆಲ್ಟ್ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದರು. ಮುಂದೆ ಮಾತನಾಡುತ್ತ ಇಂದಿನ ದಿನಮಾನಗಳಲ್ಲಿ ಬಾಲಕಿಯರು, ವಿದ್ಯಾಥರ್ಿನಿಯರು, ಮಹಿಳೆಯರ ಮೇಲೆ ದೌರ್ಜನ್ಯ ಅತ್ಯಾಚಾರಗಳು ಹೆಚ್ಚಾಗುತ್ತಿದ್ದು, ಮಹಿಳೆಯರು ಸ್ವರಕ್ಷಣೆಗಾಗಿ ಕರಾಟೆ ಕಲಿಯುವುದು ಅತ್ಯವಶ್ಯವಾಗಿದೆ. ಈ ಕರಾಟೆ ಸಂಸ್ಥೆಯ ಅಧ್ಯಕ್ಷರಾದ ರಾಜು ಪಾಟೀಲ ಗ್ರಾಮೀಣ ಭಾಗದ ಪ್ರತಿ ಹಳ್ಳಿಗಳಲ್ಲಿ ಕರಾಟೆ ಕೇಂದ್ರಗಳನ್ನು ಸ್ಥಾಪಿಸಿ, ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಸದೃಢರನ್ನಾಗಿ ಮಾಡುತ್ತಿರುವುದು ಸಂತಸದ ವಿಷಯವಾಗಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು. ಎಂದು ಹೇಳಿದರು. ಸಂಸ್ಥಾಪಕ ಅಧ್ಯಕ್ಷ ಹಾಗೂ ತರಬೇತುದಾರರಾದ ರಾಜು ಪಾಟೀಲ ಮಾತನಾಡಿ, ನಗರ ಪ್ರದೇಶಗಳಲ್ಲಿ ರಾತ್ರಿ ಸಮಯದಲ್ಲಿ ಮಹಿಳೆಯರು ವಿದ್ಯಾಥರ್ಿನಿಯರು ಒಂಟಿಯಾಗಿ ಹೊರಗೆ ಹೋಗುವುದೆ ದುಸ್ತರವಾಗಿರುವ ಇಂದಿನ ದಿನಮಾನಗಳಲ್ಲಿ ಮಹಿಳೆಯರು ತಮ್ಮ ಮಾನ ಪ್ರಾಣ ರಕ್ಷಣೆಗಾಗಿ ಕರಾಟೆ ಕಲಿಯುವುದು ಅವಶ್ಯವಾಗಿದೆ. ಅದೇ ಕಾರಣದಿಂದ ಗ್ರಾಮೀಣ ಪ್ರದೇಶಗಳಲ್ಲಿನ ವಿದ್ಯಾಥರ್ಿನಿಯರಿಗೆ ಅನುಕೂಲವಾಗಲಿ ಎಂಭ ಉದ್ದೇಶದಿಂದ ಕರಾಟೆ ಟ್ರೇನಿಂಗ್ ಸ್ಕೂಲ್ ಪ್ರಾರಂಭಿಸಲಾಗಿದೆ. ಶಿರಗುಪ್ಪಿಯ ನೂತನ ಕರಾಟೆ ಕೇಂದ್ರದಲ್ಲಿ ಕರಾಟೆ ಗುರುಗಳಾದ ಗುರುಪ್ರಸಾದ ಅಶೋಕ ಲಠ್ಠೆ, ತರಬೇತುದಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ, ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾಥರ್ಿಗಳು ಇದರ ಲಾಭವನ್ನು ಪಡೆದುಕೊಳ್ಳುವಂತೆ ಕರೆ ನೀಡಿದರು. 

ದಿನ ಬೆಲ್ಟ್ ವಿತರಣಾ ಕಾರ್ಯಕ್ರಮದಲ್ಲಿ ಅಥಣಿ, ಮಂಗಸೂಳಿ, ಮುರಗುಂಡಿ, ಕಾಗವಾಡ, ಜುಗೂಳ, ಮೋಳೆ, ಕವಲಗುಡ್ಡ, ಚಿಕ್ಕೋಡಿ ತಾಲೂಕಿನ ಅಂಕಲಿ, ಮಾಂಜರಿ, ಯಡೂರ, ನಾಗರಾಳ, ನಿಪ್ಪಾಣಿ ತಾಲೂಕಿನ ಭೋಜ್, ರಾಯಬಾಗ ತಾಲೂಕಿನ ಬಾವನಸವದತ್ತಿ ಗ್ರಾಮಗಳಿಂದ ಆಗಮಿಸಿದ್ದ 230 ಕರಾಟೆ ಪಟುಗಳ ಪರೀಕ್ಷೆ ಜರುಗಿತು. ಈ ಪರೀಕ್ಷೆಂಲ್ಲಿ 230 ಕರಾಟೆ ಪಟುಗಳು ಉತ್ತರ್ಿಣರಾಗಿ, ಅತ್ಯುತ್ತಮ ಅಂಕ ಪಡೆದ ಕರಾಟೆ ಪಟುಗಳಿಗೆ ಏಲೊ ಬೆಲ್ಟ, ಆರೆಂಜ್ ಬೆಲ್ಟ, ಗ್ರೀನ್ ಬೆಲ್ಟ, ಬ್ಲೂ ಬೆಲ್ಟ, ಪರ್ಪಲ್ ಬೆಲ್ಟ, ಬ್ರೌನ ಬೆಲ್ಟಗಳನ್ನು ವಿತರಿಸಲಾಯಿತು. 

ಕಾರ್ಯಕ್ರಮದ ಅಂಗವಾಗಿ ಶಿರಗುಪ್ಪಿ  ಗ್ರಾಮದಲ್ಲಿ ಕರಾಟೆಯ ಮಹತ್ವ ಕುರಿತು ಜನಜಾಗೃತಿ ಮೂಡಿಸಲು ಭವ್ಯ ರ್ಯಾಲಿ ಏರ್ಪಡಿಸಲಾಗಿತ್ತು. 

ಶಿರಗುಪ್ಪಿ ಗ್ರಾ.ಪಂ. ಅಧ್ಯಕ್ಷೆ ಅಪಣರ್ಾ ಪಾಟೀಲ, ಸುರೇಶ ಚೌಗುಲೆ, ಕಮಲಾ ಪಾಟೀಲ, ಅಣ್ಣಾಸಾಹೇಬ ಪಾಟೀಲ, ರಾಜುಗೌಡಾ ಪಾಟೀಲ, ಸಚೀನ ಕಾಂಬಳೆ, ಕರಾಟೆ ಕಾರ್ಯದಶರ್ಿ ಮಂಜುನಾಥ ಭೋವಿ, ಗುರುಪ್ರಸಾದ ಲಠ್ಠೆ, ತರಬೇತುದಾರರಾದ ಕಿರಣ ಭಜಂತ್ರಿ, ಅನೀಲ ಭಜಂತ್ರಿ, ಶಂಕರ ರಾಯಮಾನೆ, ರೋಹಿತ ಮಾಳಿ, ಕುಮಾರ ಭಜಂತ್ರಿ, ರೋಶನ್ ನಂದಿವಾಲೆ, ರಾಹೂಲ ಪಾಟೀಲ, ಸುಭಾಶ ಇನಾಮಾದಾರ, ಸಂತೋಶ ಮೋಳೆ, ಅಕ್ಷತಾ ಪಾಟೀಲ, ಸ್ವಾತಿ ಕಾಂಬಳೆ, ಪೂಜಾ ಸುತಾರ, ಸ್ನೇಹಲತಾ ಚವ್ಹಾನ ಸೇರಿದಂತೆ ನೂರಾರು ಕರಾಟೆ ಪಟುಗಳು ಹಾಜರಿದ್ದರು. ಗುರುಪ್ರಸಾದ ಲಠ್ಠೆ ಸ್ವಾಗತಿಸಿ, ವಂದಿಸಿ, ನಿರೂಪಿಸಿದರು 

ಸುದ್ದಿ ಓದಿ