ಕರಾಟೆ ಸ್ಪರ್ಧೆ : ವಿಜೇತ ವಿದ್ಯಾರ್ಥಿಗಳಿಗೆ ಸನ್ಮಾನ
ಅಥಣಿ18: ಯಾವುದೇ ಆಯುಧಗಳಿಲ್ಲದೆ ನಮ್ಮನ್ನು ನಾವು ಸ್ವಯಂ ರಕ್ಷಿಸಿ ಕೊಳ್ಳಬೇಕಾದರೆ ಪ್ರತಿಯೊಬ್ಬರು ಕರಾಟೆಯನ್ನು ಕಡ್ಡಾಯವಾಗಿ ಕಲಿಯಬೇಕೆಂದು ಕರಾಟೆ ಶಿಕ್ಷಕ ಪ್ರಥಮ ಹೊನಕಾಂಡೆ ಹೇಳಿದರು.
ಸ್ಥಳೀಯ ಪಟ್ಟಣದಲ್ಲಿ ನೇಪಾಳದ ಕಠ್ಮಂಡುವಿನಲ್ಲಿ ನಡೆದ ಇಂಟನ್ರ್ಯಾಷನಲ್ ಕರಾಟೆ ಚಾಂಪಿಯನ್ಶಿಪ್ ನಲ್ಲಿ ಅಥಣಿ ನಗರದ ವಿದ್ಯಾರ್ಥಿಗಳಾದ ಜೀವನ ಲೋನಾರೆ, ಗೋಲ್ಡ್ ಮತ್ತು ಸಿಲ್ವರ್ ಮೆಡಲ್, ದ್ವಿತೀಯ ಸ್ಥಾನದಲ್ಲಿ ಪ್ರಥಮ ಚೋರಗೆ ಗೋಲ್ಡ್ ಮೇಡಲ್, ತೃತೀಯ ಸ್ಥಾನದಲ್ಲಿ ಓಂಕಾರ ಚೋರಗೆ ಬ್ರೌನ್ಸ್ ಮೆಡಲ್ ಪದಕ ಗೆದ್ದು ಅಥಣಿ ನಗರಕ್ಕೆ ಆಗಮಿಸಿದ ವಿದ್ಯಾರ್ಥಿಗಳನ್ನು ಪಾಲಕರಿಂದ ನಗರ ಗಣ್ಯರಿಂದ ಶಿಕ್ಷಕರಿಂದ ವಿಜ್ರಂಭಣೆಯಿಂದ ಸ್ವಾಗತಿಸಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಯಾವುದೇ ಸಂದರ್ಭದಲ್ಲಿಯೂ ಕೂಡ ನಮ್ಮನ್ನು ನಾವು ಸ್ವಯಂಪ್ರೇರಿತವಾಗಿ ರಕ್ಷಿಸಿಕೊಳ್ಳಬೇಕಾದರೆ ಪ್ರತಿಯೊಬ್ಬರು ಕರಾಟೆಯನ್ನು ಕಡ್ಡಾಯವಾಗಿ ಕಲಿತಾಗ ಮಾತ್ರ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ನಂತರ ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳು ಹಾಗೂ ಶಿಕ್ಷಣ ಪ್ರೇಮಿ ಸದಾಶಿವ ಚಿಕ್ಕಟ್ಟಿ ಮಾತನಾಡಿ ಕ್ರೀಡೆಗಳಲ್ಲಿ ಅತ್ಯುತ್ತಮ ಕ್ರೀಡೆ ಹಾಗೂ ಕ್ರೀಡೆಗಳ ಮುಖಾಂತರ ಶಾರೀರವನ್ನು ವೃದ್ಧಿಗೊಳಿಸುವ ಕ್ರೀಡೆ ಅದು ಕರಾಟೆ ಅಂತ ಕ್ರೀಡೆಯನ್ನು ಅಥಣಿ ನಗರದಾದ್ಯಂತ 150ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕರಾಟೆ ತರಬೇತಿ ನೀಡುವುದರ ಮುಖಾಂತರ ವಿದ್ಯಾರ್ಥಿಗಳನ್ನು ದೇಶ-ವಿದೇಶಗಳಲ್ಲಿ ನಡೆದ ಕ್ರೀಡಾಕೂಟ ಸ್ಪರ್ಧೆಯಲ್ಲಿ ಭಾಗವಹಿಸುವುದರ ಮುಖಾಂತರ ವಿದ್ಯಾರ್ಥಿಗಳಲ್ಲಿ ಮತ್ತು ಪಾಲಕರಲ್ಲಿ ಹೊಸ ಚೈತನ್ಯವನ್ನು ತುಂಬಿಸುತ್ತಿದ್ದಾರೆ ಶಿಕ್ಷಕರಿಗೂ ಮತ್ತು ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಕೂಡ ಧನ್ಯವಾದಗಳು ಅರ್ಪಿಸಿದರು.
ಇದೆ ಸಮಯದಲ್ಲಿ ನೇಪಾಳದಲ್ಲಿ ನಡೆದ ಕರಾಟೆ ಸ್ಪರ್ಧೆಯಲ್ಲಿ ಪದಕ ಗೆದ್ದ ವಿದ್ಯಾರ್ಥಿಗಳ ಪೋಷಕರು ಸಂಬಂಧಿಕರು ಉಪಸ್ಥಿತರಿದ್ದರು.