ಅಥಣಿ

ತಾಪಂ ಅಧಿಕಾರಿಯಾಗಿ ಕರಬಸಪ್ಪಗೋಳ ಅಧಿಕಾರ ಸ್ವೀಕಾರ

ತಾಪಂ ಅಧಿಕಾರಿಯಾಗಿ ಕರಬಸಪ್ಪಗೋಳ ಅಧಿಕಾರ ಸ್ವೀಕಾರ

ಅಥಣಿ 15: ಅಥಣಿ ತಾಲೂಕಾ ಪಂಚಾಯತನ ನೂತನ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಶೇಖರ ಕರಬಸಪ್ಪಗೋಳ ಅಧಿಕಾರ ಸ್ವೀಕರಿಸಿದರು. ಇದಕ್ಕೂ ಪೂರ್ವದಲ್ಲಿ ಶೇಖರ ಕರಬಸಪ್ಪಗೋಳ ಇವರು 1994-2000 ವರೆಗೆ  ಕರ್ನಾಟಕ ನೀರಾವರಿ ನಿಗಮದಲ್ಲಿ, 2000-2010 ರವರೆಗೆ ತಾಲೂಕಾ ಪಂಚಾಯತ ಹಾಗೂ ಜಿಲ್ಲಾ ಪಂಚಾಯತ ಇಲಾಖೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಇವರು 2010 ರಿಂದ ಇಲ್ಲಿಯವರೆಗೆ ಅಥಣಿಯ ಲೋಕೋಪಯೋಗಿ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಇವರು ತಾಲೂಕಾ ಪಂಚಾಯತನ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.  

ಅಧಿಕಾರ ಸ್ವೀಕರಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಇವರು, ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಪಂಚಾಯತ ಮೂಲಕ ಜನಪರ, ಅಭಿವೃದ್ಧಿ ಪರ ಯೋಜನೆಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಯತ್ನಿಸುತ್ತೇನೆ ಮತ್ತು ಸರಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ  ಕಾರ್ಯಪ್ರವೃತ್ತನಾಗುವೆ ಎಂದ ಅವರು ಗ್ರಾಮ ಪಂಚಾಯತ ಎಲ್ಲ ಸಿಬ್ಬಂದಿ ಹಾಗೂ ತಾಲೂಕಾ ಪಂಚಾಯತನ ಸಿಬ್ಬಂದಿಗಳು ತಮ್ಮ ಕಾರ್ಯಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.  

ನೂತನ ಅಧಿಕಾರಿಗಳಿಗೆ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಸಂಘದ ಪದಾಧಿಕಾರಿಗಳು, ವಿವಿಧ ಪಂಚಾಯತಗಳ ಅಧ್ಯಕ್ಷ, ಉಪಾಧ್ಯಕ್ಷರು ಸತ್ಕರಿಸಿದರು. 


ಸುದ್ದಿ ಓದಿ