ಹೊಳಗುಂದಿಯಲ್ಲಿ ಗಣೇಶ ಮೂರ್ತಿ ವಿಸರ್ಜನೆ ಕಣ್ಮನ ತಣಿಸಿದ ಕಾಂತಾರ ನೃತ್ಯ
ಹೂವಿನಹಡಗಲಿ 23: ಪಟ್ಟಣ ಸೇರಿದಂತೆ ತಾಲೂಕಿನ ನಾನಾ ಕಡೆಗಳಲ್ಲಿ ಸಂಘ,ಸಂಸ್ಥೆಗಳು ಪ್ರತಿಷ್ಠಾಪಿಸಿದ ಗಣೇಶ ಮೂರ್ತಿಗಳನ್ನು ಐದನೇ ದಿನವಾದ ಶುಕ್ರವಾರ ಶ್ರದ್ಧೆ ಭಕ್ತಿಯಿಂದ ವಿಸರ್ಜಿಸಲಾಯಿತು.
ತಾಲೂಕಿನ ಹೊಳಗುಂದಿ ಗ್ರಾಮದ ವಿಘ್ನೇಶ್ವರ ಯುವಕ ಸಂಘದ 49ನೇ ವರ್ಷದ ಗಣೇಶ ಮೂರ್ತಿ ವಿಸರ್ಜನೆಯಲ್ಲಿ 2022ರಲ್ಲಿ ಇಡೀ ದೇಶವೇ ಸ್ಯಾಂಡಲ್ ವುಡ್ ನತ್ತ ತಿರುಗಿನೋಡುವಂತೆ ಮಾಡಿ ಇತಿಹಾಸ ಸೃಷ್ಟಿಸಿದ “ಕಾಂತಾರ” ಸಿನಿಮಾ ದೈವ ನೃತ್ಯ ಪ್ರದರ್ಶಿಸಿದ ಸ್ಥಳೀಯ ಕಲಾವಿದರಾದ ಶಿಲ್ಪಿ ಬಡಿಗೇರ ವೀರೇಶ ಆಚಾರ್ಯ ಮತ್ತು ಗುರುಬಸವರಾಜ ಅವರು ಕಾಂತರ ವೇಶಭೂಷಣಗಳ ಮೂಲಕ ನೃತ್ಯ ನೆರೆದ ಕಲಾಭಿಮಾನಿಗಳ ಮನ ಸೂರೆಗೊಂಡಿತು.
ಈ ಬಾರಿ ಗಣೇಶನ ವಿಸರ್ಜನೆಯಲ್ಲಿ ಸಮಾಳ, ನಂದಿಕೋಲು, ಗೊಂಬೆ ಕುಣಿತ ಜತೆಗೆ ವಿಶಿಷ್ಟ ರೀತಿಯಲ್ಲಿ ರಥಶಿಲ್ಪಿ ವೀರೇಶ ಆಚಾರ್ಯ, ವೀರಗಾಸೆ ಕಲಾವಿದ ಗುರುಬಸವಾರಜ ಕಾಂತಾರ ದೈವ ಕಲೆ ನೃತ್ಯದ ನೋಡುಗರನ್ನು ಆಕರ್ಷಣೆಗೆ ಒಳಪಡಿಸಿದೆ, ಕಣ್ಮರೆಯಾಗುತ್ತಿರುವ ಜನಪದ ಕಲೆ ಕೈಚಳಕ ಪ್ರದರ್ಶನವನ್ನು ಮೆಚ್ಚುಗೆ ಪಾತ್ರವಾಯಿತು. ಗಣೇಶನ ವಿಸರ್ಜನೆಯಲ್ಲಿ ವಿಘ್ನೇಶ್ವರ ಯುವಕ ಸಂಘದದ ಪದಾಧಿಕಾರಿಗಳು,ಗ್ರಾಮಸ್ಥರು ಭಾಗವಹಿಸಿದ್ದರು. ನಂತರ ಅನ್ನಸಂತರೆ್ಣ ಆಯೋಜಿಸಲಾಗಿತ್ತು.