ಪ್ರತಿ ಹೆಜ್ಜೆಯಲ್ಲೂ ಕನ್ನಡತನವನ್ನು ಬೆಳೆಸಿಕೊಳ್ಳಬೇಕು: ಬಬಲಾದ
ಇಂಡಿ: ಕನ್ನಡಿಗರಾದ ನಾವು ಕನ್ನಡ ಭಾಷೆಯನ್ನು ಬಳಸಿ, ಬೆಳೆಸಿ ಪ್ರತಿ ಹೆಜ್ಜೆಯಲ್ಲೂ ಕನ್ನಡತನವನ್ನು ಬೆಳೆಸಿಕೊಳ್ಳಬೇಕು. ಭಾಷೆಯನ್ನು ಶುದ್ಧವಾಗಿ ಮಾತನಾಡಿ. ಭಾಷೆಯನ್ನು ಗೌರವಿಸೋಣ ಎಂದು ಹಿರೇರೂಗಿ ಗ್ರಾಪಂ ಪಿಡಿಓ ಬಸವರಾಜ ಬಬಲಾದ ಹೇಳಿದರು.
ಶುಕ್ರವಾರ ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್, ಕೆಜಿಎಸ್, ಯುಬಿಎಸ್ ಹಾಗೂ ಗ್ರಾಮ ಪಂಚಾಯತ ವತಿಯಿಂದ ಹಮ್ಮಿಕೊಂಡ ಕೋಟಿ ಕಂಠ ಗೀತ ಗಾಯನ ಕಾರ‌್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು.
ಇಂದಿನ ಜನಾಂಗಕ್ಕೆ ಸಮಯದ ಅಭಾವದಿಂದ ಸಾಹಿತ್ಯಾಭಿರುಚಿ ಕಡಿಮೆಗೊಳ್ಳುತ್ತಿದೆ. ಕನ್ನಡದಲ್ಲಿ ಓದುವ ಬರೆಯುವ ಪ್ರವೃತ್ತಿಯನ್ನು ಮಕ್ಕಳಲ್ಲಿ ಬೆಳೆಸಬೇಕು ಎಂದು ಹೇಳಿದರು.
ಆರು ಕನ್ನಡ ಗೀತೆಗಳನ್ನು ಹಾಡಲಾಯಿತು. ಶಿಕ್ಷಕ ಸಂತೋಷ ಬಂಡೆ ಸಂಕಲ್ಪ ವಿಧಿ ಬೋಧಿಸಿದರು. ಗ್ರಾ ಪಂ ಅಧ್ಯಕ್ಷ ರಾಜಶೇಖರ ಡಂಗಿ, ಗ್ರಾಪಂ ಗ್ರಾಪಂ ಸದಸ್ಯ ಸುನೀಲ ಗುಣಸಾಗರ, ಜಗನ್ನಾಥ ಬಾರಸಾಕಳೆ, ಇಬ್ರಾಹಿಂ ಬುಡಕಿ, ಶಿವಪ್ಪ ಪೂಜಾರಿ, ಅಕ್ಬರ ಕೊರಬು, ಶ್ರೀಧರ ಬಾಳಿ, ಶರಣಬಸಪ್ಪ ನಾಟೀಕಾರ, ನಿಂಗಪ್ಪ ಡಂಗಿ, ಎಸ್.ಡಿ.ಎಂ.ಸಿ ಅಧ್ಯಕ್ಷ ನಿಂಗಪ್ಪ ಡಂಗಿ, ಗದಿಗೆಪ್ಪ ಪೂಜಾರಿ, ಮುಖ್ಯ ಶಿಕ್ಷಕ ಅನಿಲ ಪತಂಗಿ, ಶಿಕ್ಷಕರಾದ ಎಸ್ ಎಂ ಪಂಚಮುಖಿ, ಎಸ್.ಎಂ ಮಕಾನದಾರ, ಎಸ್.ಆರ್. ಚಾಳೇಕಾರ, ಎಸ್.ಡಿ. ಬಿರಾದಾರ, ವಿ.ವೈ. ಪತ್ತಾರ, ಎಸ್.ಬಿ. ಕುಲಕರ್ಣಿ, ಎಂ.ಎಂ. ಪತ್ತಾರ, ಎಸ್.ಎನ್. ಡಂಗಿ, ಜೆ.ಸಿ. ಗುಣಕಿ, ಎಸ್. ಎಚ್. ಮೈದರಗಿ, ಎನ್.ಬಿ. ಚೌಧರಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.