ಕನ್ನಡಕ್ಕಾಗಿ ನಾವು ಗೀತ ಅಭಿಯಾನ ಯಶಸ್ವಿ
ಶೇಡಬಾಳ 28: ಕಾಗವಾಡ ಪಟ್ಟಣದಲ್ಲಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ನಡೆಸಲಾಗುತ್ತಿರುವ ಮಾತಾಡ ಮಾತಾಡ ಕನ್ನಡ " ಕನ್ನಡಕ್ಕಾಗಿ ನಾವು " ಗೀತ ಅಭಿಯಾನ ಯಶಸ್ವಿಯಾಗಿ ಜರುಗಿತು.
ಗುರುವಾರ ದಿ. 28 ರಂದು ಕಾಗವಾಡ ತಾಲೂಕಾಡಳಿತ ಆಯೋಜಿಸಿರುವ ಕನ್ನಡಕ್ಕಾಗಿ ನಾವು ಅಭಿಯಾನವು ಇಲ್ಲಿನ ಮಲ್ಲಿಕಾರ್ಜುನ ವಿದ್ಯಾಲಯದ ಸಭಾಂಗಣದಲ್ಲಿ ಮೂರು ಕನ್ನಡ ಗೀತೆಗಳನ್ನು ಹಾಡುವ ಮೂಲಕ ಸರಕಾರದ ಆದೇಶವನ್ನು ಅಚ್ಚುಕಟ್ಟಾಗಿ ನಡೆಸಲಾಯಿತು.
ಕಾಗವಾಡ ಮಲ್ಲಿಕಾರ್ಜುನ ವಿದ್ಯಾಲಯದ ಸಭಾಂಗನದಲ್ಲಿ ತಹಶೀಲ್ದಾರ ರಾಜೇಶ ಬುರ್ಲಿ ಯವರ ನೇತ್ರತ್ವದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು, ಖಾಸಗಿ ಸಂಸ್ಥೆಗಳು, ಕನ್ನಡಾಭಿಮಾನಿಗಳು, ಶಾಲಾ ವಿದ್ಯಾರ್ಥಿಗಳು ರಾಷ್ಟ್ರಕವಿ ಕುವೆಂಪು ಅವರ ಭಾರಿಸು ಕನ್ನಡ ಡಿಂಡಿಮವ, ನಿಸ್ಸಾರ ಅಹಮದ ಅವರ ಜೋಗದ ಸಿರಿ ಬೆಳಕಿನಲ್ಲಿ ಮತ್ತು ಹಂಸಲೇಖಾ ಅವರ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಗೀತೆಗಳನ್ನು ಹಾಡಿ ಕನ್ನಡ ನಾಡಿನ ಹಿರಿಮೆಯನ್ನು ಹೆಚ್ಚಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಅಧಿಕಾರಿಗಳಾದ ಸಿ ಎಮ್ ಸಾಂಗಲಿ ಅವರು ಕನ್ನಡದಲ್ಲಿ ಮಾತನಾಡುವ ಬರೆಯುವ ಸಂಕಲ್ಪವನ್ನು ಬೋಧನೆ ಮಾಡಿದರು.
ಈ ಸಮಯದಲ್ಲಿ ಕಾಗವಾಡ ತಹಶೀಲ್ದಾರ ರಾಜೇಶ ಬುರ್ಲಿ, ಇಓ ವೀರನಗೌಡಾ ಏಗನ್ನವರ, ಬಿಇಓ ಎಮ್ ಆರ್ ಮುಂಜೆ, ಸಿ ಎಮ್ ಸಾಂಗಲಿ, ಶಿರಸ್ತೆದಾರ ಆರ್. ಎಮ್. ಪಾಟೀಲ, ವಿದ್ಯಾಲಯದ ಅಧ್ಯಕ್ಷ ಜೋತಿಕುಮಾರ ಪಾಟೀಲ, ಸುಭಾಷ ಕಠಾರೆ, ಶಿವಾನಂದ ನವಿನಾಳ, ಕರವೇದ ಸಿದ್ದು ಒಡೆಯರ ಸೇರಿದಂತೆ ಅನೇಕರು ಇದ್ದರು.