ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿ ಹೆಚ್ಚು ಶ್ರೀಮಂತವಾಗಿದೆ; ಕೃಷ್ಣನಾಯ್ಕ್
ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿ ಹೆಚ್ಚು ಶ್ರೀಮಂತವಾಗಿದೆ; ಕೃಷ್ಣನಾಯ್ಕ್
ಹೂವಿನ ಹಡಗಲಿ 23: ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿ ಹೆಚ್ಚು ಶ್ರೀಮಂತವಾಗಿದೆ ಎಂದು ಶಾಸಕ ಎಲ್ ಕೃಷ್ಣನಾಯ್ಕ್ ಅಭಿಮತ ವ್ಯಕ್ತಪಡಿಸಿದರು.ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ತಾಲೂಕು ಆಡಳಿತ ವತಿಯಿಂದ ಕನ್ನಡ ರಾಜ್ಯೋತ್ಸವ ನಿಮಿತ್ತ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ರಥಯಾತ್ರೆಗೆ ಕನ್ನಡ ಬಾವುಟ ಹಿಡಿದು ತಾಲೂಕಿಗೆ ಸ್ವಾಗತಿಸಿ ಅವರು ಮಾತನಾಡಿದರು. ಮಂಡ್ಯದಲ್ಲಿ ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರದ ಸಲುವಾಗಿ ಕನ್ನಡ ರಥಯಾತ್ರೆ ಕನ್ನಡ ಸಾಹಿತ್ಯ ನಾಡು ನುಡಿ ಸಂಸ್ಕೃತಿ ಬಿಂಬಿಸುವ ಪ್ರತೀಕವಾಗಿದೆ ಎಂದು ಹೇಳಿದರು.
ಎಂಟು ಜ್ಞಾನಪೀಠ ಪ್ರಶಸ್ತಿ ಲಭಿಸಿರುವ ಕನ್ನಡ ಸಾಹಿತ್ಯ ವಿಶ್ವದಲ್ಲೇ ಶ್ರೇಷ್ಠ ಸ್ಥಾನಮಾನ ಹೊಂದಿದೆ ಎಂದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್ ಎಂ ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಪುರಸಭಾ ಮಾಜಿ ಅಧ್ಯಕ್ಷ ವಾರದ ಗೌಸ್ ಮೊಹಿದ್ದೀನ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಟಿ ಪಿ ವೀರೇಂದ್ರ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ ಪಿ ಎಂ ಅಶೋಕ್, ಕಸಾಪ ಮಾಜಿ ಅಧ್ಯಕ್ಷ ಎಚ್ ಜಿ ಪಾಟೀಲ್, ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ವಿ ಪೂಜಾರ, ಸಿ ಡಿ ಪಿ ಒ ರಾಮನಗೌಡ , ಕಾರ್ಯದರ್ಶಿ ಎಂ ಪಿ ಎಂ ಚನ್ನವೀರಯ್ಯ, ಚು ಸಾ ಪ ಅಧ್ಯಕ್ಷ ನಾಗರಾಜ ಮಲ್ಕಿಒಡೆಯರ್ ಅಂಗನವಾಡಿ ಫೆಡರೇಷನ್ ನ ವಿಜಯಲಕ್ಷ್ಮಿ ಇತರರು ಉಪಸ್ಥಿತರಿದ್ದರು. ಕನ್ನಡ ರಥಯಾತ್ರೆ ವಾಲ್ಮೀಕಿ ವೃತ್ತಕ್ಕೆ ಆಗಮಿಸಿದಾಗ ತುಂಗಭದ್ರಾ ಪ್ರೌಢಶಾಲೆ, ಲಿಟ್ಲ್ ಚಾಂಪ್ಸ್ ಪ್ರೌಢಶಾಲಾ ಮಕ್ಕಳು ಶಿಕ್ಷಕರು ಕನ್ನಡ ಬಾವುಟ ಹಿಡಿದು ಸ್ವಾಗತಿಸಿದರು.ಡಾ ಬಿ ಆರ್ ಅಂಬೇಡ್ಕರ್ ವೃತ್ತ, ಲಾಲ್ ಬಹಾದುರ್ ಶಾಸ್ತ್ರಿ ವೃತ್ತದ ಮಾರ್ಗವಾಗಿ ಪಟ್ಟಣದ ಮುಖ್ಯ ಬೀದಿಗಳಲ್ಲಿ ಸಂಚರಿಸಿತು.