ಕನ್ನಡ ಭಾಷೆ, ಸಂಸ್ಕೃತಿಗೆ ವಿಶೇಷ ಮಹತ್ವವಿದೆ: ಶಾಸಕ ವಿಶ್ವಾಸ ವೈದ್ಯ
ಸವದತ್ತಿ 01: ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಒಂದು ವಿಶೇಷವಾದ ಮಹತ್ವವಿದ್ದು, ರಾಜ್ಯದ ಅನೇಕ ಸಂಘಟನೆಗಳು ಇಂದು ಕನ್ನಡ ನಾಡಿನ ಸಂಪತ್ತನ್ನು ಉಳಿಸಿ ಬೆಳೆಸುವಲ್ಲಿ ಸಕ್ರೀಯವಾಗಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಇಲ್ಲಿನ ಎಸ್.ಕೆ.ಹೈಸ್ಕೂಲ ಮೈದಾನದಲ್ಲಿ ನಡೆದ 68ನೇ ಕರ್ನಾಟಕ ರಾಜ್ಯೋತ್ಸವ ಹಾಗೂ ಕರ್ನಾಟಕ ರಾಜ್ಯವೆಂದು ನಾಮಕರಣವಾದ 50ನೇ ವರ್ಷದ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಮ್ಮ ನೆಲ ಭಾಷೆ ಜಲದ ಬಗ್ಗೆ ನಿರಂತರ ಹೋರಾಟದೊಂದಿಗೆ ಅಖಂಡ ಕರ್ನಾಟಕದ ಅಭಿವೃದ್ಧಿಗೆ ನಾವೆಲ್ಲರೂ ಸಹಕಾರ ಅತ್ಯವಶ್ಯವಾಗಿದ್ದು, ಕನ್ನಡಪರ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದರು. ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಮುಖ್ಯಮಂತ್ರಿಗಳು ರಾಜ್ಯದ 46ಸಾವಿರ ಶಾಲೆಗಳಿಗೆ ಉಚಿತ ವಿದ್ಯುತ್ತ ಮತ್ತು ಕುಡಿಯುವ ನೀರನ್ನು ಪೂರೈಸುವ ಕಾರ್ಯಕ್ಕೆ ಚಾಲನೆ ನೀಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು. ಸವದತ್ತಿ ಯಲ್ಲಮ್ಮಾ ಮತಕ್ಷೇತ್ರದ ಅಭಿವೃದ್ದಿಯ ಜೊತೆಗೆ ನಗರದ ಸೌಂದರ್ಯಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಸವದತ್ತಿಯನ್ನು ಮಾದರಿ ಮತಕ್ಷೇತ್ರವನ್ನಾಗಿಸುವ ಗುರಿ ಹೊಂದಲಾಗಿದೆ ಎಂದರು.
ತಹಸೀಲ್ದಾರ ಮಲ್ಲಿಕಾರ್ಜುನ ಹೆಗ್ಗಣ್ಣವರ ಮಾತನಾಡಿ, 1956ರಲ್ಲಿ ರಚನೆಯಾದ ಮೈಸೂರ ರಾಜ್ಯ ಎಂಬ ಹೆಸರನ್ನು 1973ರಲ್ಲಿ ಕರ್ನಾಟಕ ರಾಜ್ಯ ಎಂದು ನಾಮಕರಣ ಮಾಡಲು ಗದಗದಲ್ಲಿ ನಡೆದ ಸಭೆಯಲ್ಲಿ ಮೊದಲ ಠರಾವು ಪಾಸ ಮಾಡಲಾಗಿರುವುದು ನಮ್ಮ ಭಾಗದ ಹೆಮ್ಮೆ ಎಂದರು.
ಉಪನ್ಯಾಸಕ ರಮೇಶ ಮುರಂಕರ ಕರ್ನಾಟಕ ರಾಜೋತ್ಸವ ಕುರಿತು ಉಪನ್ಯಾಸ ನೀಡಿದರು. ಸಮಾಜದ ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಡಾ.ವೈ.ಎಮ್.ಯಾಕೊಳ್ಳಿ, ಲಕ್ಷ್ಮೀ ಆರಿಬೆಂಚಿ, ಝಕೀರ ನದಾಫ, ವೈ.ಬಿ.ಕಡಕೋಳ, ರಾಜು ಬದಾಮಿ, ನಂದಕುಮಾರ ಚಂದರಗಿ, ಶಿವಾನಂದ ತಿಮ್ಮಾಪುರ, ಯಲ್ಲಪ್ಪ ಗೊರವನಕೊಳ್ಳ, ಬಾಳು ಹೊಸಮನಿ, ಮಧುಶ್ರೀ ಪವಾಡೆಪ್ಪನವರ, ಸಾಹಿಲ್ ನಾಯಕರ ಸೇರಿದಂತೆ ಅನೇಕ ಗಣ್ಯರನ್ನು ರಾಜ್ಯೋತ್ಸವದ ಅಂಗವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಎಪಿಎಮ್ಸಿ ಅಧ್ಯಕ್ಷ ಚಂದ್ರು ಪೂಜೇರ, ಮಾರುತಿ ಬಸಲಿಗುಂದಿ, ವೀರನಗೌಡ ಸಂಗಣ್ಣವರ, ತಾ.ಪಂ ಇಓ ಯಶವಂತಕುಮಾರ, ಗ್ರೇಡ-2 ತಹಸೀಲ್ದಾರ ಎಮ್.ವಿ.ಗುಂಡಪ್ಪಗೋಳ, ಸಿಪಿಐ ಮಂಜುನಾಥ ನಡುವಿನಮನಿ, ಪುರಸಭೆ ಸದಸ್ಯರಾದ ಬಾಪು ಚೂರಿಖಾನ, ದ್ಯಾಮಣ್ಣ ಸುತಗಟ್ಟಿ, ಮಲ್ಲಿಕಾರ್ಜುನ ಬೇವೂರ, ಡಾ.ವೈ.ಎಮ್.ಯಾಕೊಳ್ಳಿ, ಟಿಎಚ್ಓ ಡಾ.ಶ್ರೀಪಾದ ಸಬನಿಸ, ಮುಖ್ಯಾಧಿಕಾರಿ ಪ್ರಕಾಶ ಚನ್ನಪ್ಪನವರ, ವೈದ್ಯಾಧಿಕಾರಿ ಡಾ.ಎಮ್.ಎಚ್.ಮಲ್ಲನಗೌಡ್ರ, ಎಚ್.ಎ.ಕದ್ರಾಪುರ, ಕಿರಣ ಕುರಿ, ಗೀರೀಶ ಮುನವಳ್ಳಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ ದಂಡಿನ ಸ್ವಾಗತಿಸಿದರು. ಶಿವಾನಂದ ತಾರಿಹಾಳ ನಿರೂಪಿಸಿ ವಂದಿಸಿದರು.