ಯರಗಟ್ಟಿ

ಕನ್ನಡ ಭಾಷೆ, ನೆಲ, ಜಲ ಉಳಿಸಿ, ಬೆಳೆಸಿ: ಸುಭಾನಿ

ಕನ್ನಡ ಭಾಷೆ, ನೆಲ, ಜಲ ಉಳಿಸಿ, ಬೆಳೆಸಿ: ಸುಭಾನಿ

ಯರಗಟ್ಟಿ 02: ಕನ್ನಡಿಗರ ಸ್ವಾಭಿಮಾನದ ಸಂಕೇತವಾದ ರಾಜ್ಯೋತ್ಸವ ಮತ್ತು ಕನ್ನಡ ಭಾವುಟದ ಹಿಂದಿನ ಕತೆ ಮಾತ್ರ ರೋಚಕವಾಗಿದೆ, ಕನ್ನಡದ ನೆಲ, ಜಲ ಕನ್ನಡದ ಸ್ವಾಭಿಮಾನ ಕಾಪಾಡುವಲ್ಲಿ ಪ್ರತಿಯೋಬ್ಬ ಕನ್ನಡಿಗನ ಆದ್ಯ ಕರ್ತವ್ಯವಾಗಿದೆ ಎಂದು ಕರವೇ ತಾಲೂಕು ಉಪಾಧ್ಯಕ್ಷ ಸುಭಾನಿ ಮುಗಟಖಾನ ಹೇಳಿದರು. 

ಅವರು ಸ್ಥಳೀಯ ಸಾರ್ವಜನಿಕ ಬಸ್ ನಿಲ್ದಾಣ ಪಕ್ಕದಲ್ಲಿ 67ನೇ ಕರ್ನಾಟಕ ರಾಜ್ಯೋತ್ಸವದ ದ್ವಜಾರೋಹಣ ಕಾರ್ಯಕ್ರಮ ನೇರೆವೆರಿಸಿ ಮಾತನಾಡಿದರು, ಮೊದಲು ಕರ್ನಾಟಕ ರಾಜ್ಯ ರೂಪಗೊಂಡಾಗ ಒಟ್ಟು 19 ಜಿಲ್ಲೆಗಳನ್ನು ಒಳಗೊಂಡಿತ್ತು ಅಂದಿನಿಂದ ನವೆಂಬರ್ 1 ನ್ನು ಕರ್ನಾಟಕ ರಾಜ್ಯೋತ್ಸವ ದಿನವನ್ನಾಗಿ ಆಚರಿಸುವುದು ನಮ್ಮ ಹೆಮ್ಮೆ ಎಂದರು. 

ಕರ್ನಾಟಕ ರಕ್ಷಣಾ ವೇದಿಕೆ ಕಡಬಿ ಗ್ರಾಮ ಘಟಕದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶಾಲಾ ವಿದ್ಯಾರ್ಥಿಗಳ ಜಾಥಾದೊಂದಿಗೆ ಸಂಚರಿಸಿ ಬಸ್ ನಿಲ್ದಾಣದ ಪಕ್ಕದಲ್ಲಿ ತಾಯಿ ಕನ್ನಡಾಂಬೆ ಭಾವ ಚಿತ್ರಕ್ಕೆ ಗ್ರಾಮ ಘಟಕದ ಅಧ್ಯಕ್ಷ ಲಕ್ಷ್ಮಣ ಚಿಕ್ಕೊಡಿ ಪೂಜೆ ಸಲ್ಲಿಸಿದರು. 

ಸಂದರ್ಭದಲ್ಲಿ ಪಿಡಿಒ ಸುವರ್ಣಗೌರಿ ಕೋಣ್ಣೂರ. ಗ್ರಾಪಂ ಸದಸ್ಯರಾದ ಗಂಗಪ್ಪ ಮೀಶಿ, ಸಿದ್ದಪ್ಪ ಮುಕ್ಕನ್ನವರ, ಗ್ರಾಮ ಸಹಾಯಕ ಶೌಕತಲಿ ಸನದಿ, ಊರಿನ ಹಿರಿಯರು, ಶಾಲಾ ಮಕ್ಕಳು, ಶಿಕ್ಷಕರು ಇದ್ದರು. 


ಸುದ್ದಿ ಓದಿ