ರಾಣೆಬೆನ್ನೂರ

ಕನ್ನಡ ಸಂಸ್ಕೃತಿಯ ಮನಸ್ಸುಗಳಿಗೆ ಕನ್ನಡ ಸಾಹಿತ್ಯ ಪರಿಷತ್ತು ಭದ್ರಬುನಾದಿ: ಜಾಡರ

ಕನ್ನಡ ಸಂಸ್ಕೃತಿಯ ಮನಸ್ಸುಗಳಿಗೆ ಕನ್ನಡ ಸಾಹಿತ್ಯ ಪರಿಷತ್ತು ಭದ್ರಬುನಾದಿ: ಜಾಡರ

ರಾಣೇಬೆನ್ನೂರು 20:  ದೇಶದಲ್ಲಿ ಭಾಷಾವಾರು ಪ್ರಾಂತ್ಯಗಳ ಪುನರ್ವಿಂಗಡಣೆಯಾಗುವ ಮೊದಲೇ ಕನ್ನಡ ಮಾತನಾಡುವ, ಕನ್ನಡ ಸಂಸ್ಕೃತಿಯ ಮನಸುಗಳಿಗೆ ಕನ್ನಡ ಸಾಹಿತ್ಯ, ಭಾಷೆ ಸಂರಕ್ಷಿಸುವ  ಸಂಸ್ಥೆಯ ಅವಶ್ಯಕತೆಯನ್ನು ಮನಗಂಡ ಅಂದಿನ ಮೈಸೂರು ಅರಸರಾದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರೊಂದಿಗೆ ಭಾರತರತ್ನ ಸರ್‌. ಎಂ. ವಿಶ್ವೇಶ್ವರಯ್ಯನವರು "ಕನ್ನಡ ಸಾಹಿತ್ಯ ಪರಿಷತ್ತು" ಸ್ಥಾಪನೆ ಮಾಡಿ ಕನ್ನಡಿಗರ ಏಕತೆಗೆ, ನಾಡ ಪ್ರೇಮ, ಕೈಗಾರಿಕೆ, ಮಾತೃಭಾಷಾ ಬೆಳವಣಿಗೆಗೆ ಶ್ರಮಿಸಿದ್ದಾರೆ ಎಂದು ತಾಲೂಕಾ ಕಸಾಪ ಸಂಘಟನಾ ಕಾರ್ಯದರ್ಶಿ ಎಚ್‌.ಎಚ್‌.ಜಾಡರ ಹೇಳಿದರು.  

ವಾಗೀಶ ನಗರದ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಆಯೋಜಿಸಲಾಗಿದ್ದ, ಸರ್ ಎಂ ವಿಶ್ವೇಶ್ವರಯ್ಯ ಅವರ ಸಂಸ್ಮರಣ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ  ಮಾತನಾಡಿದರು. ವಿಶ್ವೇಶ್ವರಯ್ಯನವರು ಈ ದೇಶ ಕಂಡ ಅದ್ಭುತ ವಿಜ್ಞಾನಿ,ಭಾರತ ದೇಶದ ಪವಿತ್ರ ಭೂಮಿಯಲ್ಲಿ ಜನಿಸಿದ ಪುಣ್ಯ ಪುರುಷರಲ್ಲಿ ಓರ್ವರಾಗಿದ್ದಾರೆ ಕನ್ನಡ ನಾಡಿನ ಕೀರ್ತಿ ಪತಾಕೆಯನ್ನು ವಿಶ್ವದ ಮಟ್ಟದಲ್ಲಿ ಹೆಚ್ಚಿಸಿದ ಕೀರ್ತಿ ಅವರಿಗೂ ಸಾಸಲುತ್ತದೆ  ಎಂದ ಅವರುಕನ್ನಂಬಾಡಿಗೆ ಆಣೆಕಟ್ಟು ನಿರ್ಮಾಣ ಮಾಡಿ ಕರುನಾಡಿನ ಕೃಷಿಗೆ ಪೂರಕವಾದ ನೀರಿನ ವ್ಯವಸ್ಥೆಗೆ ಕಾರಣರಾಗಿ ರೈತರಿಗೆ ಪ್ರೀತಿಪಾತ್ರರಾಗಿದ್ದರು ಎಂದರು. ಅಧ್ಯಕ್ಷತೆ ವಹಿಸಿದ್ದ ತಾಲೂಕಾ  ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರೇಶ ಜಂಬಿಗಿ ಅವರು, ಕನ್ನಡ ನಾಡು,ನುಡಿ ನೆಲ,ಜಲ, ಭಾಷೆ ಮತ್ತು ಕನ್ನಡ ಸಂಸ್ಕೃತಿಯ ವಿಷಯವಾಗಿ ಧಕ್ಕೆ ಬಂದಾಗ , ಅದರ ರಕ್ಷಣೆಗೆ ಕಸಾಪ ಸದಾ ಮುಂದಾಗುತ್ತದೆ. ಕನ್ನಡಿಗರು ನೀರಾಭಿಮಾನಿಗಳಾಗದೇ ಎಂದೆಂದಿಗೂ ಸ್ವಾಭಿಮಾನಿಗಳಾಗಿ ಕನ್ನಡ ನಾಡು, ನುಡಿ, ನೆಲ,ಜಲ ಭಾಷೆಗೆ ಅದಕ್ಕೆ ಬಾರದ ರೀತಿಯಲ್ಲಿ ಅದರ ರಕ್ಷಣೆಗೆ ಮುಂದಾಗಬೇಕಾದ ಇಂದಿನ ಅಗತ್ಯವಿದೆ ಎಂದರು.  ಜಿ. ಜಿ.ಹೊಟ್ಟಿಗೌಡ್ರ , ಪ್ರಭಾಕರ ಎನ್ ಶಿಗ್ಲಿ, ಮಾಜಿ ಅಧ್ಯಕ್ಷ ಎ.ಬಿ. ರತ್ನಮ್ಮ,  ವ್ಹಿ.ಎನ್‌. ಸುಧೀರ್, ಚಂದ್ರಶೇಖರ ಮಡಿವಾಳರ  ಸೇರಿದಂತೆ ಕಸಾಪ ಸದಸ್ಯರು, ಗಣ್ಯರು ಉಪಸ್ಥಿತರಿದ್ದರು. ಶಿಕ್ಷಕಿ ಮಂಗಳ ಹಿರೇಮಠ ಸಂಗಡಿಗರು ಪ್ರಾರ್ಥಿಸಿದರು.  ಕಾರ್ಯದರ್ಶಿ ಜಗದೀಶ್ ಮಳಿಮಠ ಸ್ವಾಗತಿಸಿದರು. ಇಂದಿರಾ ಬಾರಂಗಿ ನಿರೂಪಿಸಿ, ನಿರ್ಮಲಾ ಲಮಾಣಿ ವಂದಿಸಿದರು. 


ಸುದ್ದಿ ಓದಿ