ರಾಣೆಬೆನ್ನೂರ

ಕನ್ನಡ ನಾಡು ನುಡಿ ಸಂಸ್ಕೃತಿ ನಮ್ಮ ಅವಿಭಾಜ್ಯ ಅಂಗ: ಡಾ. ದೇವಗಿರಿಮಠ

ಕನ್ನಡ ನಾಡು ನುಡಿ ಸಂಸ್ಕೃತಿ ನಮ್ಮ ಅವಿಭಾಜ್ಯ ಅಂಗ: ಡಾ. ದೇವಗಿರಿಮಠ

ರಾಣೇಬೆನ್ನೂರು 05: ಡಾ.ರಾಜಕುಮಾರ ಅವರು ಈ ನಾಡು ಕಂಡ ಅಪ್ರತಿಮ ನಟನಾ ಚತುರ. ಅವರ ಚಿತ್ರಗಳು ಸಮಾಜಕ್ಕೆ ಅನೇಕ ರೀತಿಯಲ್ಲಿ ಮಹತ್ವಪೂರ್ಣ ಸಂದೇಶವನ್ನು ನೀಡುವುದರ ಜೊತೆಗೆ ಅವಿಭಕ್ತ ಕುಟುಂಬ ಪರಂಪರೆ ಮುಂದುವರೆಸಿಕೊಂಡು ಹೋಗುವ ಸಂದೇಶವನ್ನು ನೀಡಿವೆ. ಅಂತಹ ಮಹಾನ್ ನಟ ನಮ್ಮೊಂದಿಗೆ ಇಂದು ಇರದೆ ಇದ್ದರೂ ಅವರು ಅಭಿನಯಿಸಿದ ಚಿತ್ರಗಳು ಇಂದಿಗೂ ಜೀವಂತವಾಗಿವೆ ಎಂದು ಗಾಯಕ ಡಾ. ಗಣೇಶ ದೇವಗಿರಿಮಠ ಹೇಳಿದರು. 

ಅವರು ಇಲ್ಲಿನ ವಾಗೀಶ ನಗರದ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಸಾಹಿತ್ಯ ಪರಿಷತ್ತು, ಸ್ವಾ,ಕರವೇ ವೇದಿಕೆ ಆಯೋಜಿಸಿದ್ದ ಡಾ. ರಾಜಕುಮಾರ ಜನ್ಮ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಸಮಾಜಕ್ಕೆ ಸಂದೇಶಭರಿತ ಚಿತ್ರಗಳು ಇಂದು ಮರೆಯಾಗುತ್ತಿದ್ದು ಯುವ ಜನಾಂಗದಲ್ಲಿ ನೈತಿಕತೆ ಕಾಣದಂತಾಗಿದೆ. ಇತಿಹಾಸದ ಚಲನಚಿತ್ರಗಳು ಪುನಃ ಇಂದು ಬರಬೇಕಾಗಿದೆ ಎಂದ ಅವರು, ತಮ್ಮ ಜೀವಿತದ ಕಾಲದಲ್ಲಿ ಎಲ್ಲರಿಗೂ ಮಾದರಿಯಾಗಿ ಇತರೆ ನಟ-ನಟಿಯರಿಗೆ ನಟನಾ ಕೌಶಲ್ಯತೆಯನ್ನು ಪ್ರತಿಬಿಂಬಿಸಿ ಮರೆಯಾದ ಮಾಣಿಕ್ಯ ಈ ನಾಡಿನಲ್ಲಿ ಪುನಃ ಜನ್ಮ ತಾಳಬೇಕಾಗಿದೆ ಎಂದರು. 

ಕಾರ್ಯಕ್ರಮದ ನಿಮಿತ್ತ ಸ್ವರ ನಮನ ಸುಮಧುರ ಗೀತೆಗಳ ರಸಸಂಜೆಯಲ್ಲಿ 30ಕ್ಕೂ ಹೆಚ್ಚು ಹಿರಿಯ ಕಿರಿಯ ಗಾಯಕ ಗಾಯಕಿಯರು ತಮ್ಮ ಕಂಠ ಸಿರಿಯಿಂದ ಡಾ. ರಾಜ್ ಅಭಿನಯದ ಚಲನಚಿತ್ರ ಗೀತೆಗಳನ್ನು ಹಾಡುವುದರ ಮೂಲಕ ಸ್ಮರಣೆ ಮಾಡಿದರು. 

ವೇದಿಕೆಯಲ್ಲಿ ನಿತ್ಯಾನಂದ ಕುಂದಾಪುರ, ಪ್ರಭಾಕರ ಶಿಗ್ಲಿ, ಚಂದ್ರಶೇಖರ ಮಡಿವಾಳರ, ರಮೇಶ ಬಡಕರಿಯಪ್ಪನವರ, ಬಿ.ಪಿ.ಶಿಡೇನೂರ, ಮಾರುತಿ ತಳವಾರ, ಎ.ಬಿ.ರತ್ನಮ್ಮ, ಜಯಶ್ರೀ ಜಂಬಿಗಿ, ಸುಜಿತ್ ಜಂಬಿಗಿ, ಗೀತಾ ಜಂಬಿಗಿ, ಕರಿಬಸಪ್ಪ ಜಂಬಿಗಿ, ವೆಂಕಟೇಶ್ ಕಾಕಿ, ರತ್ನಾ ಪುನೀತ, ನಯನಾ ಗೋಂದಕರ, ಹೆಚ್‌.ಎನ್‌. ದೇವಕುಮಾರ, ಶಂಕ್ರ​‍್ಪ ಕಾಕಿ, ಶಿವಣ್ಣ ಬಣಕಾರ, ವಾಸಪ್ಪ ಜೋಗಾರ, ಮಹ್ಮದ್ ರಫೀಕ ಖಾಜಿ, ಭಾರತಿ ಏಕಬೋಟೆ, ಸುರೇಶ್ ಜ್ಯೋತಿಬಣ್ಣದ, ಲಕ್ಕಪ್ಪ ಚಂದನ ಮೊದಲಾದವರು ಉಪಸ್ಥಿತರಿದ್ದರು.  

ಸ್ವರ ನಮನದಲ್ಲಿ ವಿಜಯ ಬಳಿಗಾರ, ಸಂಜು ಮಹೇಂದ್ರಕರ, ಸುಮಿತ್ರಾ ಮಹೇಂದ್ರಕರ, ಡಾ. ಅನಿತಾ, ಡಾ.ಆನಂದ, ಡಾ. ಅರುಣಕುಮಾರ ಚಂದನ, ಶೋಭಾ ದೇವಗಿರಿಮಠ, ಡಾ. ಶಿವಾನಂದ ಹಿತ್ತಲಮನಿ, ಎಲ್‌.ಜಿ.ಸುನೀಲ, ರೇಖಾ ಗುಳೇದ, ಹೆಚ್‌.ಎಸ್‌.ಮುದಿಗೌಡ್ರ, ಪ್ರಕಾಶ್ ಗಚ್ಚಿನಮಠ, ಅನಸೂಯಾ ರಾಠೋಡ, ವೀಣಾ ಬೋಸ್ಲೆ, ಉಷಾ ಪಾಂಡುರಂಗಿ ಸೇರಿದಂತೆ ಮತ್ತಿತರರು ತಮ್ಮ ಪ್ರತಿಭೆ ಮೆರೆದರು. 


ಸುದ್ದಿ ಓದಿ