ಕನ್ನಡಕ್ಕೆ ಹೋರಾಡು ಕನ್ನಡದ ಕಂದ: ಬಸವೇಶ್ವರ ಮಹಾ ಸ್ವಾಮಿಜಿ
ಕಾಗವಾಡ : ಕನ್ನಡ ನಾಡು- ನುಡಿ ಭಾಷೆ, ಆಚಾರ- ವಿಚಾರ ನಮ್ಮ ಕನ್ನಡ ಮಾತೆಯ ಸಂಸ್ಕೃತಿಯ ಹಿರಿಮೆ ಪ್ರತಿಯೊಬ್ಬ ಕನ್ನಡಿಗನ ಮೈ ಮನಸ್ಸುಗಳಲ್ಲಿ ತುಂಬಿ ಹರಿಯಲಿ ಕನ್ನಡದ ಕೀರ್ತಿ ಹಬ್ಬಲಿ ಎಂದು ಗುರು ದೇವಾ ಆಶ್ರಮದ ಬಸವೇಶ್ವರ ಮಹಾ ಸ್ವಾಮಿಜಿ ಅಭಿಮತವನ್ನು ವ್ಯಕ್ತಪಡಿಸಿದರು.
ಅವರು ಕಾಗವಾಡ ತಾಲೂಕಿನ ಕೃಷ್ಣಾ ಕಿತ್ತೂರ ಗ್ರಾಮದಲ್ಲಿ ಇತ್ತೀಚಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಹಾಗೂ ಸಪ್ತಸ್ವರ ಸಂಗೀತ ಕಲಾ ಬಳಗ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಉತ್ಸವದಲ್ಲಿ ಕನ್ನಡಕೆ ಹೋರಾಡು ಕನ್ನಡದ ಕಂದ ಎಂದು ಹೇಳುತ್ತಾ ಕನ್ನಡದ ಕಂಪು ಎಲ್ಲಡೆ ಪಸರಿಸಲಿ ಎಂದು ನುಡಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಕಾಂತ ಕಾಂಬಳೆ ಉದ್ಘಾಟಿಸಿದರು ಮಾತನಾಡಿದರು. ಅಧ್ಯಕ್ಷತೆಯನ್ನು ಅಥಣಿ ಪ ಪೂ ಕಾಡಸಿದ್ದೇಶ್ವರ ಮಹಾಸ್ವಾಮಿಗಳು ವಹಿಸಿದ್ದರು. ಕನ್ನಡದ ಹುಚ್ಚುರಾಯ್ ಎಂದು ಹೆಸರುವಾಸಿಯಾದ ಶೇಡಬಾಳದ ಎಂ ಡಿ ಅಲಾಸೇಯವರು, ಕನ್ನಡದ ಶ್ರೇಷ್ಠ ಸಾಹಿತಿಗಳಾದ ಸಂಜಯ ಕುರಣೆ, ಆನಂದ್ ಹಕ್ಕೆನ್ನವರ, ಧರ್ಮೆಂದ್ರ ದಡ್ಡಿ ಸುರೇಶ ವಾಘಮೋಡೆ, ಪರುಶುರಾಮ ಅವಳೇ, ಕುಮಾರ ಗಸ್ತಿ ಯವರು ಉಪನ್ಯಾಸವನ್ನು ನೀಡಿದರು. ಶಾಲಾ ಮಕ್ಕಳಿಗಾಗಿ ಭಾಷಣ ಸ್ಪರ್ಧೆ, ಪ್ರಭಂದ ಸ್ಪರ್ಧೆ, ಗಾಯನ ಸ್ಪರ್ಧೆ, ರಂಗೋಲಿ ಸ್ಪರ್ಧೆ ಮುಂತಾದ ಸ್ಪರ್ಧೆಗಳನ್ನು ಹಮ್ಮಿಕೊಳಾಗಿತ್ತು. ಹಾಗೂ ವಿವಿಧ ಗ್ರಾಮಗಳಿಂದ ಆಗಮಿಸಿ ಮಹಾನ ಕವಿಗಳಿಂದ ಕವಿಗೋಷ್ಠಿ, ಚರ್ಚಾ ಕೂಟ, ವಿಚಾರ ಸಂಕಿರಣ ಕಾರ್ಯಕ್ರಮಗಳು ಜರುಗಿದವು.
ಕಾರ್ಯಕ್ರಮದಲ್ಲಿ ಶ್ರೀ ಮಹಾಲಕ್ಷ್ಮಿ ದೇವಿ ಜಾತ್ರಾ ಕಮಿಟಿ ಎಲ್ಲ ಸದಸ್ಯರು, ಶ್ರೀಶೈಲ್ ಪಾದಯಾತ್ರಾ ಕಮಿಟಿಯ ಎಲ್ಲ ಸದಸ್ಯರು ಹಾಗೂ ಗ್ರಾಮದ ಶಂಕರ ಸತ್ತಿಕರ, ವಿಶ್ವನಾಥ ಪಾಟೀಲ್, ಪರಗೌಡ ಪಾಟೀಲ್, ಪರುಶುರಾಮ ನಾಯಿಕ ಅಶೋಕ ಇಂಚಲಕರಂಜಿ, ರಾಜು ಮದನೆ ಸಾರಿಕಾ ನಾಯಿಕ್. ಮಹಾದೇವ ಸತ್ತಿಕರ ಉಪಸ್ಥಿತರಿದ್ದರು. ಇದೆ ಸಂಧರ್ಭದಲ್ಲಿ ಕನ್ನಡಪರ ಹೋರಾಟಗಾರರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಹಾಂತೇಶ ದರೂರ ಸ್ವಾಗತಿಸಿದರು. ಸಂಸ್ಥೆಯ ಅಧ್ಯಕ್ಷರಾದ ವೀಣಾ ಕಿಡದಾಳ ವಂದಿಸಿದರು. ಕಾಡಪ್ಪ ಬಸರಗಿ ನಿರೂಪಸಿದರು.
ವರದಿ ಮನೋಜ್ ಪಾಟಣಕರ್