ಮಹಾರಾಷ್ಟ್ರ ರಾಜ್ಯಪಾಲರನ್ನು ಭೇಟಿಯಾದ ಕಂಗನಾ ರಣಾವತ್
ಮುಂಬೈ, ಸೆಪ್ಟೆಂಬರ್ 13:ಮಹಾರಾಷ್ಟ್ರದ ಶಿವಸೇನಾ ನೇತೃತ್ವದ ಸರ್ಕಾರದೊಂದಿಗಿನ ಘರ್ಷಣೆಗೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಕಂಗನಾ ರಣಾವತ್ ಭಾನುವಾರ ಮಹಾರಾಷ್ಟ್ರ ರಜ್ಯಪಾಲ ಭಗತ್ ಸಿಂಗ್ ಕೋಷ್ಯಾರಿಯನ್ನು ಭೇಟಿಯಾದರು.
ಈ ಭೇಟಿ ವೇಳೆ ಅವರು ರಾಜ್ಯದಲ್ಲಿ ಕೆಲ ದಿನಗಳ ಹಿಂದೆ ನಡೆದ ಬೆಳವಣಿಗೆ, ಸರ್ಕಾರದ ಮಿತಿ ಮೀರಿದ ವರ್ತನೆ ಕುರಿತು ವಿವರಿಸಿದ್ದಾರೆ ಎನ್ನಲಾಗಿದೆ.
ಈ ಸಂದರ್ಭದಲ್ಲಿ ಅವರೊಂದಿಗೆ ಸಹೋದರಿ ರಂಗೋಲಿ ಕೂಡ ಇದ್ದರು ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಕಂಗನಾ ರಣಾವತ್ ಸರ್ಕಾರದ ವಿರುದ್ಧ ನೀಡಿರುವ ಹೇಳಿಕೆಗಳಿಗೆ ಜನಪ್ರತಿನಿಧಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ನಡುವೆ, ಬಿಎಂಸಿ ಕಂಗನಾ ಕಚೇರಿ ಕಟ್ಟಡವನ್ನು ಕೂಡ ನೆಲಸಮಗೊಳಿಸಲು ಮುಂದಾಗಿತ್ತು. ಇದಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.