ಮನರಂಜನೆ

ಕಂಗನಾ ರಣಾವತ್‌ಗೆ ಮಹಾರಾಷ್ಟ್ರದಲ್ಲಿ ವಾಸಿಸುವ ಹಕ್ಕಿಲ್ಲ; ಅನಿಲ್‌ ದೇಶ್‌ಮುಖ್‌

ಕಂಗನಾ ರಣಾವತ್‌ಗೆ ಮಹಾರಾಷ್ಟ್ರದಲ್ಲಿ ವಾಸಿಸುವ ಹಕ್ಕಿಲ್ಲ; ಅನಿಲ್‌ ದೇಶ್‌ಮುಖ್‌

ಮುಂಬೈ,  ಸೆಪ್ಟೆಂಬರ್ 4: ಮುಂಬೈ ಪೊಲೀಸರ ವಿರುದ್ಧ ಹೇಳಿಕೆ ನೀಡಿರುವ ಬಾಲಿವುಡ್‌ 'ಕ್ವೀನ್‌'  ಕಂಗನಾ ರಣಾವತ್‌ ಅವರಿಗೆ ಮುಂಬೈ ಮಾತ್ರವಲ್ಲ, ಮಹಾರಾಷ್ಟ್ರದಲ್ಲಿ ಕೂಡ ನೆಲೆಸಲು  ಹಕ್ಕಿಲ್ಲ ಎಂದು ಅಲ್ಲಿನ ಗೃಹ ಸಚಿವ ಅನಿಲ್‌ ದೇಶ್‌ಮುಖ್‌ ಶುಕ್ರವಾರ ಹೇಳಿಕೆ  ನೀಡಿದ್ದಾರೆ

ಮುಂಬೈ ಪೊಲೀಸರ ವಿರುದ್ಧದ ಟ್ವೀಟ್‌ಗಳಿಗೆ ಕಂಗನಾ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ತಮ್ಮ  ಟ್ವೀಟ್‌ನಲ್ಲಿ ಅವರು, "ಮುಂಬೈ ಪೊಲೀಸರನ್ನು ಸ್ಕಾಟ್‌ಲೆಂಡ್‌ ಪಡೆಗೆ  ಹೋಲಿಸಲಾಗುತ್ತದೆ. ಆದರೆ, ಕೆಲವರು ಅವರನ್ನು ಗುರಿಯಾಗಿಸಲು ಯತ್ನಿಸುತ್ತಿದ್ದಾರೆ. ಓರ್ವ  ಐಪಿಎಸ್‌ ಅಧಿಕಾರಿ ಇದರ ವಿರುದ್ಧ ನ್ಯಾಯಾಲಯಕ್ಕೂ ಅರ್ಜಿ ಸಲ್ಲಿಸಿದ್ದಾರೆ.ಪೊಲೀಸರ  ಬಗೆಗಿನ ಕಂಗನಾ ಅವರ ಹೇಳಿಕೆ ನಂತರ, ಆಕೆಗೆ ಮುಂಬೈ ಅಥವಾ ಮಹಾರಾಷ್ಟ್ರದಲ್ಲಿ ವಾಸಿಸಲು  ಹಕ್ಕಿಲ್ಲ" ಎಂದಿದ್ದಾರೆ.

ಸುಶಾಂತ್‌ ಸಿಂಗ್‌ ರಾಜಪೂತ್‌ ಪ್ರಕರಣದಲ್ಲಿ  ಬಾಲಿವುಡ್‌ ನಟರ ವಿರುದ್ದ ಕಿಡಿಕಾರಿದ್ದ ಕಂಗನಾ, ಎರಡು ದಿನಗಳ ಹಿಂದೆ, ತಮಗೆ ಮಾಫಿಯಾ  ಗೂಂಡಾಗಳಿಗಿಂತ ಮುಂಬೈ ಪೊಲೀಸರ ಭಯವಿದೆ ಎಂದಿದ್ದರು. 

ಬಾಲಿವುಡ್‌ ಡ್ರಗ್‌  ಮಾಫಿಯಾ ಹೊರಗೆಳೆಯಲು ಕಂಗನಾ ಸಿದ್ಧರಿದ್ದಾರೆ. ಆಕೆಗೆ ರಕ್ಷಣೆ ನಿಡಬೇಕು ಎಂದು ಬಿಜೆಪಿ  ಶಾಸಕ ರಾಮ್‌ ಕದಮ್‌ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆಗೆ ಪತ್ ಬರೆದಿದ್ದರು. \\

ಇದಕ್ಕೆ  ಪ್ರತಿಕ್ರಿಯಿಸಿ ಟ್ವೀಟ್‌ ಮಾಡಿದ್ದ ಕಂಗನಾ, "ನಿಮ್ಮ ಕಾಳಜಿಗೆ ಧನ್ಯವಾದಗಳು ಸರ್‌.  ನನಗೆ ಮುಂಬೈನಲ್ಲಿ ಮಾಫಿಯಾ ಗೂಂಡಾಗಳಿಗಿಂತ ಮುಂಬೈ ಪೊಲೀಸರ ಭಯವಿದೆ. ನನಗೆ ಹಿಮಾಚಲ  ಪ್ರದೇಶ ಸರ್ಕಾರ ಇಲ್ಲವೇ ಕೇಂದ್ರದಿಂದ ನೇರವಾಗಿ ರಕ್ಷಣೆ ಬೇಕು. ಮುಂಬೈ  ಪೊಲೀಸರದ್ದಲ್ಲ"  ಎಂದಿದ್ದರು. 

ಇದಕ್ಕೆ ಶಿವಸೇನಾ ನಾಯಕ ಸಂಜಯ್‌ ರಾವತ್‌  ತಮ್ಮ ಸಾಮ್ನ ಸಂಪಾದಕೀಯದಲ್ಲಿ, ಕಂಗನಾ ಹೇಳಿಕೆ ನಾಚಿಕೆಗೇಡು. ಆಕೆ ಈ ಬೃಹತ್‌ ನಗರದಲ್ಲಿ  ಜೀವನ ಕಂಡುಕೊಂಡಿದ್ದು, ಮುಂಬೈ ಪೊಲೀಸರನ್ನು ದೂರುತ್ತಿದ್ದಾರೆ ಎಂದು ಆರೋಪಿಸಿದ್ದರು. 

ನಾವು  ಆಕೆಯನ್ನು ಮುಂಬೈಗೆ ಆಗಮಿಸದಂತೆ ಮನವಿ ಮಾಡುತ್ತಿದ್ದೇವೆ. ಇದು ಮುಂಬೈ ಪೊಲೀಸರಿಗೆ  ಮಾಡಿದ ಅವಮಾನ. ಗೃಹ ಸಚಿವಾಲಯ ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದಿದ್ದರು. 

ಇದಕ್ಕೆ  ಪ್ರತಿಕ್ರಿಯಿಸಿದ್ದ ಕಂಗನಾ, "ಶಿವಸೇನೆಯ ಸಂಜಯ್‌ ರಾವತ್‌ ಅವರು ನನಗೆ ಮುಂಬೈಗೆ  ಮರಳದಂತೆ ಬಹಿರಂಗ ಬೆದರಿಕೆ ಹಾಕಿದ್ದಾರೆ. ಮುಂಬೈ ಏಕೆ ಪಾಕ್‌ ಆಕ್ರಮಿತ ಕಾಶ್ಮೀರದಂತೆ  ಭಾಸವಾಗುತ್ತಿದೆ" ಎಂದು ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಾರೆ.

ಸುದ್ದಿ ಓದಿ