ಕನಕದಾಸರು ಸಾಮಾಜಿಕ ಅಸಮತೋಲನ ತೊಡೆದುಹಾಕಲು ಪರಿಶ್ರಮಿಸಿದ ಮಾಹಾನ್ ಸಂತಕವಿ: ದ್ಯಾಮನಕೊಪ್ಪ
ಶಿಗ್ಗಾವಿ : ಮಹಾ ಮಾನವತಾವದಿಯಾದ ಕನಕದಾಸರು ಸಾಮಾಜಿಕ ಅಸಮತೋಲನ ತೊಡೆದುಹಾಕಲು ಪರಿಶ್ರಮಿಸಿದ ಮಾಹಾನ್ ಸಂತಕವಿ. ಕಾಲಜ್ಞಾನಿಯಾದ ಕನಕದಾಸರು ಜಗತ್ತಿನಲ್ಲಿ ಯುದ್ಧವೇ ಇರಬಾರದು ಯುದ್ಧ ಎಂಬುದು ಮಾನವಕುಲವನ್ನು ನಾಶ ಮಾಡುವ ಭಯಂಕರ ಹೆಮ್ಮಾರಿ ಎಂದು ಪ್ರಾಚಾರ್ಯ ನಾಗರಾಜ ದ್ಯಾಮನಕೊಪ್ಪ ಹೇಳಿದರು
ಇಂದು ಪಟ್ಟಣದ ಶ್ರೀ ಚನ್ನಪ್ಪ ಕುನ್ನೂರ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಜರುಗಿದ ಕನಕದಾಸರ 535 ಜಯಂತೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಮಾಜದಲ್ಲಿ ಮನೆಮಾಡಿದ ವರ್ಗಸಂಘರ್ಷವನ್ನು ಕಿತ್ತುಹಾಕಿ ಸಮಾನತೆಯ ಸಮಾಜದ ಕನಸು ಕಂಡ ಕನಕದಾಸರು ಕುಲ ಕುಲವೆಂದು ಹೊಡೆದಾಡುವ ಅಣ್ಣಗಳೀರ ನಿಮ್ಮ ಕುಲದ ನೆಲೆಯನೇನಾದರು ಬಲ್ಲಿರಾ? ಎಂದು ಪ್ರಶ್ನಿಸುವ ಮೂಲಕ ಸಮಾಜ ವ್ಯವಸ್ಥೆಯಲ್ಲಿ ಜಾತಿ ತಾರತಮ್ಯವನ್ನು ಆಮೂಲಾಗ್ರವಾಗಿ ತೆಗೆದು ಹಾಕಲು ಪ್ರಯತ್ನಸಿದ ಮಹಾನ್ ಸಂತ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಪ್ರೌಢ ಶಾಲಾ ಮುಖ್ಯೋಪಾಧ್ಯಾಯಿನಿ ಜಿ. ಎಂ. ಅರಗೋಳ ಅವರು ಕನಕದಾಸರು ಬಹು ಅಮೂಲ್ಯ ಹಾಗೂ ಸಾರ್ವಕಾಲಿಕ ಮೌಲ್ಯಗಳನ್ನೊಳಗೊಂಡ ಹಲವಾರು ಕೃತಿಗಳನ್ನು ರಚಿಸುವ ಮೂಲಕ ಕನ್ನಡ ಸಾಹಿತ್ಯಕ್ಕೆ ತಮ್ಮದೆ ಆದ ವಿಶಿಷ್ಠ ಕೊಡುಗೆ ಸಲ್ಲಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಮುಖ್ಯೋಪಾಧ್ಯಾಯ ಸಿ. ಟಿ ಪಾಟೀಲ, ಉಪನ್ಯಾಸಕ ಡಾ. ಕೆ. ಎಸ್. ಬರದೇಲಿ, ಶಿಕ್ಷಕಿ ಆರ್. ವ್ಹಿ. ಹಿರೇಗೌಡ್ರ, ಶಿಕ್ಷಕ ಎಂ. ಎ. ಗಾಣಿಗೇರ ಹಾಗೂ ಅನೇಕ ವಿದ್ಯಾಥರ್ಿಗಳು ಕನಕದಾಸರ ಜೀವನ ಕುರಿತು ಮಾತನಾಡಿದರು. ಶಿಕ್ಷಕ ಕೆ. ಜಿ. ಮಲ್ಲೂರ ಸ್ವಾಗತಿಸಿದರು, ಶಿಕ್ಷಕಿ ಡಿ. ಎ. ವಡ್ಡರ ವಂದಿಸಿದರು. ಉಪನ್ಯಾಸಕ ಕೆ. ಬಸಣ್ಣಾ ಕಾರ್ಯಕ್ರಮ ನಿರೂಪಿಸಿದರು.