ಯರಗಟ್ಟಿ

ನಾಡಿಗೆ ಕನಕದಾಸರ ಕೊಡುಗೆ ಅಪಾರ: ಬಡಿಗೇರ

ನಾಡಿಗೆ ಕನಕದಾಸರ ಕೊಡುಗೆ ಅಪಾರ: ಬಡಿಗೇರ

ಯರಗಟ್ಟಿ 11: ಇಡೀ ಮನುಕುಲದ ಜನಾಂಗಕ್ಕೆ ಒಳಿತನ್ನು ಸಾರುವ ಮೂಲಕ ನಾಡಿಗೆ ಅಪಾರ ಕೊಡುಗೆಯನ್ನು ಕನಕದಾಸರು ನೀಡಿದ್ದಾರೆ. ಅವರನ್ನು ಯಾವುದೇ ಜಾತಿಗೆ ಸೀಮಿತಗೊಳಿಸಬಾರದು ಎಂದು ಗ್ರಾಪಂ ಕಾರ್ಯದರ್ಶಿ ಸತೀಶ ಬಡಿಗೇರ ಹೇಳಿದರು. 

ಸಮೀಪದ ತಲ್ಲೂರ ಗ್ರಾಮ ಪಂಚಾಯತ ಸಭಾ ಭವನದಲ್ಲಿ ಶುಕ್ರವಾರ ಆಯೋಜಿಸಿದ ಕನಕದಾಸ ಜಯಂತಿ ನಿಮಿತ್ಯ ಕನಕದಾಸರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. 

ಗ್ರಾಪಂ ಅಧ್ಯಕ್ಷ ಬಸವರಾಜ ಕಡಬಿ, ಉಪಾಧ್ಯಕ್ಷ ಗಂಗವ್ವ ವನ್ನೂರ, ಪಿಡಿಒ ಎ.ಬಿ.ಬಂಗಾರಿ, ಮಲ್ಲಿಕಾರ್ಜುನ ಕಡಬಿ, ಶಿವಾನಂದ ಮಲಕ್ಕನ್ನವರ, ಗಂಗವ್ವ ನಾಯ್ಕರ, ಬಸನಾಯ್ಕ ಚಿಕಾಕಿ, ಸುಭಾನಿ ಕುದರಿ, ರಮೇಶ ನರಿ, ರಾಜಶೇಖರ ಅಣ್ಣಿಗೇರಿ, ವಿಠ್ಠಲ ಬಡಿಗೇರ, ಮಹಾಂತೇಶ ಸಾಲಿ, ಮಹೇಶ ಇಟ್ನಾಳ ಹಾಗೂ ಸಿಬ್ಬಂದಿ ಇದ್ದರು. 

ಸೋಮಾಪೂರ ಸರಕಾರಿ ಶಾಲೆಯಲ್ಲಿ 

ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಕನಕದಾಸರ ಜಯಂತಿ ಆಚರಿಸಲಾಯಿತು. ಮುಖ್ಯೋಪಾಧ್ಯಯ ಎಸ್‌.ಎಸ್‌.ಅಣ್ಣಗೇರಿ ಕನಕದಾಸರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿದರು. ಶಿಕ್ಷಕ ಎ.ಆರ್‌.ಹಂಚಿನಮನಿ, ಎಚ್‌.ಬಿ.ಜಮಾದಾರ, ಪಿ.ಎಸ್‌.ಗೋದಿ ಹಾಗೂ ಸಿಬ್ಬಂದಿ ಇದ್ದರು. 


ಸುದ್ದಿ ಓದಿ