ಧಾರವಾಡ - ಹುಬ್ಬಳ್ಳಿ

ಅಸ್ಪೃಶ್ಯತೆ ವಿರುದ್ಧ ಸಮರ ಸಾರಿದ ಕನಕದಾಸರು : ಡಾ. ಅಜಿತ ಪ್ರಸಾದ

ಅಸ್ಪೃಶ್ಯತೆ ವಿರುದ್ಧ ಸಮರ ಸಾರಿದ ಕನಕದಾಸರು  : ಡಾ. ಅಜಿತ ಪ್ರಸಾದ

ಅಸ್ಪೃಶ್ಯತೆ ವಿರುದ್ಧ ಸಮರ ಸಾರಿದ ಕನಕದಾಸರು  : ಡಾ. ಅಜಿತ ಪ್ರಸಾದ

ದಾರವಾಢ 19 : ದಾಸ ಪಂಕ್ತಿಯಲ್ಲಿ ಭಕ್ತಿಮಾರ್ಗವನ್ನು ತೋರಿಸಿದ ಕರ್ನಾಟಕದ ಶ್ರೇಷ್ಠ ಸಂತ ಹಾಗೂ ಹರಿದಾಸರು ಕನಕದಾಸರು. ದಾಸ ಸಾಹಿತ್ಯಕ್ಕೆ ಪರಿಪೂರ್ಣತೆಯನ್ನು ನೀಡಿ, ಮೆರುಗನ್ನು ತಂದ ಶ್ರೇಷ್ಠ ಕವಿ. ಕೀರ್ತನರಾರರಾಗಿ, ತತ್ವಜ್ಞಾನಿಯಾಗಿ, ಸಂತರಾಗಿ, ದಾರ್ಶನಿಕರಾಗಿ, ಸಂಗೀತಕಾರರಾಗಿ ಕರ್ನಾಟಕದ ಸಾಂಸ್ಕೃತಿಕ ಪರಂಪರೆಗೆ ಅನನ್ಯ ಕೊಡುಗೆಯನ್ನು ನೀಡಿದ್ದಾರೆ. ಕನಕದಾಸರ ಕೀರ್ತನೆಗಳು ಭಕ್ತಿ, ವೈರಾಗ್ಯ, ಭಜನೆಗಳು ಜನರಲ್ಲಿ ತಿಳುವಳಿಕೆಯನ್ನು ನೀಡುವದಲ್ಲದೇ, ಸಮಾಜದ ತಾರತಮ್ಯಗಳ ವಿರುದ್ಧ ಸಮರ ಸಾರುವಂತವು. ಮಡಿವಂತಿಕೆಯ ಬಗ್ಗೆ ತಮ್ಮ ಕೀರ್ತನೆಗಳಲ್ಲಿ ಪ್ರತಿರೋಧಿಸಿದ್ದಾರೆ. ಅಂದಿನ ಸಮಾಜದ ಸ್ಥಿತಿಗತಿಗಳನ್ನು ತಿದ್ದುವ ಪ್ರಯತ್ನ ಮಾಡಿದ್ದಾರೆ ಎಂದು ಜೆ.ಎಸ್‌.ಎಸ್ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆ, ಜೆ.ಎಸ್‌.ಎಸ್ ಐ.ಟಿ.ಐ ಕಾಲೇಜು ಮತ್ತು ಜೆ.ಎಸ್‌.ಎಸ್ ಎಂ.ಸಿ.ಎ ಕಾಲೇಜು ಇವುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ  ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಭಕ್ತ ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದರವರು ಮಾತನಾಡುತ್ತಿದ್ದರು.  

ಕನಕದಾಸರು ಹುಟ್ಟಿದ್ದು ಕರ್ನಾಟಕದ ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಬಾಡ ಗ್ರಾಮದಲ್ಲಿ ಸೇನಾ ಮುಖ್ಯಸ್ಥ ಬೀರನಾಯಕ ಮತ್ತು ಪತ್ನಿ ಬಚ್ಚಮ್ಮ ದಂಪತಿಗೆ ಕುರುಬ ಕುಟುಂಬದಲ್ಲಿ ಜನಿಸಿದರು. ಸಕಲ ಶಸ್ತ್ರಾಸ್ತ್ರ ವಿದ್ಯೆ ಕಲಿತು ಬಂಕಾಪುರ ಪ್ರಾಂತ್ಯದ ಸಾಮಾಜ್ಯದಲ್ಲಿ ದಂಡನಾಯಕರಾಗಿದ್ದ ಕನಕದಾಸರು ಯುದ್ಧಗಳಲ್ಲಿ ಆದ ಸಾವು-ನೋವು ಇನ್ನಿತರ ಕಾರಣಗಳಿಂದಾಗಿ ನಾಯಕತ್ವವನ್ನು ತ್ಯಜಿಸಿ ವೈರಾಗ್ಯದಿಂದ ದಾಸ ಪಂಕ್ತಿಗೆ ಶರಣಾದರು. ಚಿಕ್ಕಂದಿನಿಂದಲೂ ಕನಕದಾಸರು ಕುಖ್ಯಾತ ಜಾತಿ ವ್ಯವಸ್ಥೆ ಮತ್ತು ಅಸ್ಪೃಶ್ಯತೆಯ ಬಾಧೆಗಳನ್ನು ಎದುರಿಸಬೇಕಾಯಿತು ಮತ್ತು ತಮ್ಮ ಕವನಗಳ ಮೂಲಕ ದುಷ್ಟತನದ ವಿರುದ್ಧ ಹೋರಾಡಿದರು.  

ಕನಕದಾಸರ ವ್ಯಾಸರಾಯರ ಮೆಚ್ಚಿನ ಶಿಷ್ಯರಾಗಿದ್ದರು. ಪುರಂದರದಾಸರ ಸಮಕಾಲೀನರು. ಕನಕದಾಸರಿಂದ ರಚಿಸಲ್ಪಟ್ಟ 316 ಕೀರ್ತನೆಗಳು ನಮಗೆ ಲಭ್ಯವಿದ್ದು, ಇನ್ನಿತರ ಸಾಹಿತ್ಯವನ್ನು ನಾವು ಕಾಣಬಹುದು. ಅವರು ತಮ್ಮ ರಚನೆಗಳಿಗೆ ಸರಳವಾದ ಕನ್ನಡ ಭಾಷೆಯನ್ನು ಬಳಸಿದರು. ಕನಕದಾಸರು ಕೀರ್ತನೆಗಳು, ಸುಳಾದಿಗಳು, ಉಗಾಭೋಗಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಅರ​‍್ಿಸಿದ್ದು, ರಚಿಸಿದ ಮೋಹನತರಂಗಿಣಿ, ನಳಚರಿತ್ರೆ, ರಾಮಧಾನ್ಯ ಚರಿತೆ, ಹರಿಭಕ್ತಿಸಾರ, ನರಸಿಂಹಸ್ತವಸ್ತೋತ್ರ ಕಾವ್ಯಕೃತಿಗಳು ಸಾಹಿತ್ಯ ಲೋಕದಲ್ಲೆ ಸಂಚಲನ ಸೃಷ್ಟಿಸಿವೆ ಹಾಗೂ ಇತಿಹಾಸಕಾರರಿಗೆ ಅಧ್ಯಯನ ಮಾಡಲು ಅನುಕೂಲ ಮಾಡಿಕೊಟ್ಟಿವೆ. ಕರ್ನಾಟಕ ಸಂಗೀತದ ಬೆಳವಣಿಗೆ ಕಾಣಿಕೆಯನ್ನಿತ್ತವರು ಈ ಅಶ್ವಿನಿ ದೇವತೆಗಳಾದ ಕನಕದಾಸರು ಹಾಗೂ ಪುರಂದರದಾಸರು. ಯಾವುದೇ ಆಸೆ ಆಮೀಷಗಳಿಲ್ಲದೇ ಸಮಾಜದ ಒಳಿತಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಕನಕದಾಸರು ಹಾಗೂ ಕೀರ್ತನೆಗಳು ಧನ ಕನಕಗಳಿಗಿಂತ ಶ್ರೇಷ್ಟ ಎಂದು ಅಭಿಪ್ರಾಯಪಟ್ಟರು.ಈ ಸಂದರ್ಭದಲ್ಲಿ ಧೀರೇಂಧ್ರ ತಂಗೋಡ ಕನಕದಾಸರ ದಾಸ ಪದವನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಡಾ. ಆರ್‌. ವಿ ಚಿಟಗುಪ್ಪಿ ನಿರೂಪಿಸಿದರು. .ಎನ್‌.ಎಲ್ ಪುಡಕಲಕಟ್ಟಿ,  ಜ್ಯೋತಿ ಅಕ್ಕಿ, ಮಂಜುನಾಥ ಪೂಜಾರ, ಶ್ರೀಕಾಂತ ರಾಗಿಕಲ್ಲಾಪೂರ,  ಭಲಭೀಮ ಹಾವನೂರ, . ರಜನಿ ತಾಳಿಕೋಟಿ,  ಸ್ಮೀತಾ ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ