ವಿಜೃಂಭನೆಯಿಂದ ಕನಕದಾಸರ ಜಯಂತಿ ಆಚರಣೆ
ಶೇಡಬಾಳ 12: ಶೇಡಬಾಳ ಪಟ್ಟಣದಲ್ಲಿ ಶುಕ್ರವಾರ ದಿ. 11 ರಂದು ನಭೂತೋ-ನಭವಿಷ್ಯತೋ ಎನ್ನುವಂತೆ ಕುರುಬು ಸಮಾಜ ಕನಕದಾಸರ ಜಯಂತಿಯನ್ನು ವಿಜೃಂಭನೆಯಿಂದ ಆಚರಿಸಿದರು.
ವಾಹನದ ಮೇಲೆ ಕನಕದಾಸರ ಭಾವಚಿತ್ರಕ್ಕೆ ಗಣ್ಯ ಮಾನ್ಯರು ಪೂಜೆ ಸಲ್ಲಿಸಿ, ಭವ್ಯ ಮೆರೆವಣಿಗೆಗೆ ಚಾಲನೆ ನೀಡಿದರು. ವಿವಿಧ ಡೊಳ್ಳುವಾದಕ ಕಲಾ ತಂಡಗಳು ಮೆರವಣಿ ಮುಂದೆ ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸಿ, ಗ್ರಾಮಸ್ಥರನ್ನು ಮಂತ್ರಮುಗ್ಧಗೊಳಿಸಿದರು. ಇಲ್ಲಿನ ಬೀರೋಬಾ ದೇವಸ್ಥಾನದಿಂದ ಪ್ರಾರಂಭವಾದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ದೇವಸ್ಥಾನಕ್ಕೆ ಬಂದು ಮುಕ್ತಾಯಗೊಂಡಿತು. ಸುಮಾರು 6 ಗಂಟೆಗಳ ಕಾಲ ಮೆರವಣಿಗೆ ಸಾಗಿತು.
ಮೆರವಣಿಗೆಯಲ್ಲಿ ಜಲಕುಂಭ ಹೊತ್ತ ಮಹಿಳೆಯರು, ಕುರುಬ ಸಮಾಜದ ಯುವಕರು, ಕನಕದಾಸರಿಗೆ ಜೈಘೋಷ ಮೊಳಗಿಸುತ್ತ ತಮ್ಮ ಭಕ್ತಯನ್ನು ಪ್ರದರ್ಶಿಸಿದರು. ಕಾರ್ಯಕ್ರಮದ ಅಂಗವಾಗಿ ಕುರುಬ ಸಮಾಜ ಮಹಾಪ್ರಸಾದ ವ್ಯವಸ್ಥೆಯನ್ನು ಕಲ್ಪಿಸಿದ್ದರು. ಈ ಸಮಯದಲ್ಲಿ ಎಲ್ಲ ಸಮಾಜದ ಮುಖಂಡರು, ಮಹಿಳೆಯರು, ಕಲಾತಂಡದ ಸದಸ್ಯರು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.