ಭಕ್ತ ದಾಸ ಶ್ರೇಷ್ಠ ಶ್ರೀ ಕನಕದಾಸರ, ವೀರವನಿತೆ ಒನಕೆ ಓಬವ್ವ ನವರ ಜಯಂತೋತ್ಸವ
ಸಿರುಗುಪ್ಪ -ಕರ್ನಾಟಕ ಸರ್ಕಾರ ತಾಲ್ಲೂಕು ಆಡಳಿತ ಹಿಂದುಳಿದ ವರ್ಗಗಳ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಹ ಭಾಗಿತ್ವದಲ್ಲಿ ನಗರದ ತಾಲ್ಲೂಕು ಕ್ರೀಡಾಂಗಣದಿಂದ ಮುಖ್ಯ ರಸ್ತೆ ಮೂಲಕ ಭಕ್ತ ದಾಸ ಶ್ರೇಷ್ಠ ಶ್ರೀ ಕನಕದಾಸರ 535ನೇ ಮತ್ತು ವೀರವನಿತೆ ಒನಕೆ ಓಬವ್ವ ನವರ ಜಯಂತೋತ್ಸವ ಹಾಗೂ ವಿವಿಧ ಮಹನೀಯರ ಭಾವ ಸ್ತಬ್ದ ಚಿತ್ರಗಳ ಭವ್ಯ ಮೆರವಣಿಗೆ ಶಾಸಕ ಎಂ ಎಸ್ ಸೋಮಲಿಂಗಪ್ಪ ಚಾಲನೆ ನೀಡಿದರು .ಕುರುಬರ ಸಂಘದ ಅಧ್ಯಕ್ಷ ದಮ್ಮು ರು ಸೋಮಪ್ಪ, ಸಾಮಾಜಿಕ ಸುಧಾರಕ ಸಾಕ್ಷರತಾ ಅಬ್ದುಲ್ ನಬಿ, ಗೌರಯ್ಯ, ಸೀನಪ್ಪ, ಬಿಸಿಎಂ ಅಧಿಕಾರಿ ಗಾದಿಲಿಂಗಪ್ಪ, ತಾಲ್ಲೂಕು ಮಟ್ಟದ ಅಧಿಕಾರಿಗಳು ಜನ ಪ್ರತಿನಿಧಿಗಳು ಸಮುದಾಯದವರು ಭವ್ಯ ಮೆರವಣಿಗೆಯಲ್ಲಿ ಭಾಗವಹಿಸಿದ್ದರು .