ದಿ.18 ರಂದು ಕನಕ ಜಯಂತಿ ಆಚರಣೆ
ಧಾರವಾಡ,12- ಮನಸೂರ ಶ್ರೀ ರೇವಣಸಿದ್ಧೇಶ್ವರ ಮಹಾಮಠ ಪೀಠಾಧ್ಯಕ್ಷ ಪೂಜ್ಯ ಡಾಽಽ ಬಸವರಾಜ ದೇವರು ಕನಕ ಜಯಂತಿ ಅರ್ಥಪೂರ್ಣವಾಗಿ ಆಚರಿಸಲು ಧಾರವಾಡ ಜಿಲ್ಲಾ ಸಮುದಾಯ ಬಾಂಧವರು ದಿ.18 ರಂದು ಕನಕ ಜಯಂತಿದಂದು ತಮ್ಮ ಓಣಿಗಳಲ್ಲಿ ಹಾಗೂ ಮನೆಯ ಮುಂದೆ ಮತ್ತು ಸಾರ್ವಜನಿಕವಾಗಿ ಕನಕ ಜಯಂತಿ ಆಚರಿಸಲು ಶ್ರೀಗಳು ವಿನಂತಿಸಿದ್ದಾರೆ.
ಧಾರವಾಡ ಜಿಲ್ಲಾಡಳಿತ : ಧಾರವಾಡ ಜಿಲ್ಲಾಡಳಿತವು ಕನಕ ಜಯಂತಿ ಆಚರಿಸುತ್ತಿದ್ದು ಈ ಸಲದ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಶಾಸಕರು ಜನಪ್ರತಿನಿಧಿಗಳು ಅಧಿಕಾರಿವರ್ಗ ಸಮುದಾಯದ ಬಂಧುಗಳು ಕಡ್ಡಾಯವಾಗಿ ಉಪಸ್ಥಿತರಿದ್ದು ಕನಕಜಯಂತಿಯನ್ನು ಆಚರಿಸಲು ಶ್ರೀಗಳು ವಿನಂತಿಸಿದ್ದಾರೆ.