ಹೂವಿನ ಹಡಗಲಿ

ಪ್ರತಿಭೆ ಅರಳಲು ಕಲೋತ್ಸವ ಸಹಕಾರಿ: ಮಹೇಶ್ ಪೂಜಾರ

ಪ್ರತಿಭೆ ಅರಳಲು ಕಲೋತ್ಸವ ಸಹಕಾರಿ: ಮಹೇಶ್ ಪೂಜಾರ

ಹೂವಿನ ಹಡಗಲಿ 09: ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಅನಾವರಣಕ್ಕೆ ಪ್ರತಿಭಾ ಕಾರಂಜಿ  ಸಹಕಾರಿ ಆಗಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ವಿ ಪೂಜಾರ ಹೇಳಿದರು.  

ಪಟ್ಟಣದ ಜಿ ಪಿ ಜಿ ಪ್ರೌಢಶಾಲೆಯಲ್ಲಿ ಗುರುವಾರ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಆಯೋಜಿಸಿದ್ದ 2023-24 ನೇ ಸಾಲಿನ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.  

ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಮಕ್ಕಳ ಬೌದ್ಧಿಕ ವಿಕಾಸಕ್ಕೆ ಅಗತ್ಯ. ಮಕ್ಕಳಿಗೆ ಪೋಷಕರು ಶಿಕ್ಷಕರು ಅವರ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿರಿ. ನಿರ್ಣಾಯಕರು ನ್ಯಾಯಸಮ್ಮತ ತೀರ​‍್ು ನೀಡಬೇಕು. ಮಕ್ಕಳ ತಯಾರಿಗೆ ಶಿಕ್ಷಕರು ಪೋಷಕರು ಸಹಕಾರ ನೀಡಿದ್ದಾರೆ ಎಂದರು.  

ಕ್ಷೇತ್ರ ಸಮನ್ವಯಾಧಿಕಾರಿ ಎ ಕೋಟೆಪ್ಪ ಮಾತನಾಡಿ  ರಾಜ್ಯ ಮಟ್ಟದಲ್ಲಿ ಯಶಸ್ಸು ಗಳಿಸಿರಿ ಎಂದರು.  

ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿ ಹನುಮಂತಪ್ಪ, ದೈಹಿಕ ಅಧೀಕ್ಷಕರಾದ ಮುಸ್ತಫಾ ಎಸ್, ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಂ ಶಿವಲಿಂಗಪ್ಪ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆನಂದ್ ಉತ್ತಂಗಿ, ಕಾರ್ಯದರ್ಶಿ ಪಿ ಯೇಸು,ಜಿ ಪಿ ಜಿ ಪ ಪೂ ಕಾಲೇಜಿನ ಪ್ರಾಂಶುಪಾಲ ಕೋರಿ ಹಾಲೇಶ್, ಸಹ ಕಾರ್ಯದರ್ಶಿ ಶಿವಕುಮಾರ್ ಗಡ್ಡಿ , ಶೇಕ್ ಅಹ್ಮದ್, ಎ ಎಸ್ ಸಿದ್ದಮ್ಮ ಇತರರು ಉಪಸ್ಥಿತರಿದ್ದರು.  

ಜಿ ಪಿ ಜಿ ಪ್ರೌಢಶಾಲೆಯ ಉಪ ಪ್ರಾಂಶುಪಾಲ ಪಿ ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಸಂಗೀತ ಶಿಕ್ಷಕಿ ಅರ್ಚನಾ ಜೋಷಿ ಹಾಗೂ ಮಕ್ಕಳು ಪ್ರಾರ್ಥಿಸಿದರು.  

ಪ್ರತಿಭಾ ಕಾರಂಜಿ: ಭಾಷಣ, ಕಂಠಪಾಠ, ಆಶು ಭಾಷಣ, ಚರ್ಚಾ ಸ್ಪರ್ಧೆ, ಕ್ವಿಜ್, ಜಾನಪದ ನೃತ್ಯ, ಛದ್ಮವೇಷ, ಕವ್ವಾಲಿ  

ವಿವಿಧ ಸ್ಪರ್ಧೆಗಳು ಜರುಗಿದವು. ಇ ಸಿ ಒ ಮಿಟ್ಯಾನಾಯ್ಕ ಎಚ್ ಮಲ್ಲಿಕಾರ್ಜುನ ನಿರ್ವಹಿಸಿದರು. 


ಸುದ್ದಿ ಓದಿ