ಕಲ್ಲಂಡಗಿ ಲಾಭದಾಯಕ ಬೆಳೆ : ಶಿವಶಂಕರ ಮೂರ್ತಿ
ಇಂಡಿ 01: ಕಲ್ಲಂಗಡಿ ಬೆಳೆಗೆ ಒಂದು ಎಕರೆಗೆ ಅಂದಾಜು 50 ಸಾವಿರ ರೂ ಖರ್ಚಾಗುತ್ತದೆ. ಮತ್ತು ಲಾಭ ಅಂದಾಜು ಎರಡು ಲಕ್ಷ ರೂ ಬರುತ್ತದೆ ಎಂದು ಹಿರಿಯ ವಿಜ್ಞಾನಿ ಮತ್ತು ಕೆವಿಕೆ ಮುಖ್ಯಸ್ಥ ಡಾ. ಶಿವಶಂಕರ ಮೂರ್ತಿ ಹೇಳಿದರು. ತಾಲೂಕಿನ ಹಿರೇರೂಗಿ ಗ್ರಾಮದಲ್ಲಿ ಮಹಾದೇವ ಕೊಟಗೊಂಡ ಇವರ ತೋಟದಲ್ಲಿ ನಡೆದ ಕಲ್ಲಂಡಗಿ ಕ್ಷೇತ್ರೋತ್ಸವ ಕಾರ‌್ಯಕ್ರಮದಲ್ಲಿ ಅವರು ಮಾತನಾಡಿದರು.
ಕಲ್ಲಂಡಗಿ ಬೆಳೆಯ ಸುಧಾರಿತ ಬೇಸಾಯ ನೂತನ ತಳಿಗಳ ಮಾಹಿತಿ ನೀಡಿ, ಕೃಷಿಯಲ್ಲಾದ ಕಾರ‌್ಯವೈಖರಿ ಮತ್ತು ಸಿಗುವ ಸೌಲಭ್ಯಗಳ ಬಗ್ಗೆ ಮಾತನಾಡಿದರು. ಹೀನಾ ಎಂ.ಎಸ್. ಕಲ್ಲಂಡಗಿ ಬೆಳೆಗೆ ಬರುವ ರೋಗ ಮತ್ತು ಕೀಟಗಳ ನಿರ್ವಹಣೆ ಕುರಿತು ಮಾತನಾಡಿದರು. ಉಮೇಶ ಹಲಸಂಗಿ, ಶಿವಣ್ಣ ಜನಗೊಂಡ, ಮಲ್ಲಿಕಾರ್ಜುನ ಮಠ, ಮಹಾಂತೇಶ ಸವದಿ, ರವಿಕಾಂತ ಹಲಸಂಗಿ, ಶ್ರೀಧರ ಮಾಶ್ಯಾಳ, ರಮೇಶ ಪೂಜಾರಿ, ಬೀರ್ಪ ಬಿರಾದಾರ ಮತ್ತಿತರಿದ್ದರು.