ರಾಣೆಬೆನ್ನೂರ

ಪರಶುರಾಮ ವಿಠ್ಠಪ್ಪ ಕಲಿವಾಳಗೆ ಕಲಾ ಸೇವಾ ರತ್ನ ರಾಷ್ಟ್ರ ಪ್ರಶಸ್ತಿ ಪುರಸ್ಕಾರ

ಪರಶುರಾಮ ವಿಠ್ಠಪ್ಪ  ಕಲಿವಾಳಗೆ ಕಲಾ ಸೇವಾ ರತ್ನ ರಾಷ್ಟ್ರ ಪ್ರಶಸ್ತಿ ಪುರಸ್ಕಾರ

ರಾಣಿಬೆನ್ನೂರ 24 : ತಾಲೂಕಿನ ಮಾಕನೂರ ಗ್ರಾಮದ ನಿವಾಸಿ ಹಾಗೂ ಹಾಲಿವಸ್ತಿ ಗೋವಾದಲ್ಲಿ ಅಭಿಯಂತರಾಗಿ ಸೇವೆ ಸಲ್ಲಿಸುತ್ತಿರುವ ಪರಶುರಾಮ ವಿಠ್ಠಪ್ಪ  ಕಲಿವಾಳ ಇವರು ಕನ್ನಡ ಸಾಹಿತ್ಯ ಪರಿಷತ್ ಮೂಲಕ ಕನ್ನಡ ಉಳುವಿಗಾಗಿ ಮತ್ತು ಕನ್ನಡಪರ ಸಂಘಟನೆಗಳನ್ನು ಸಂಘಟಿಸಿ ಶ್ರಮಿಸುತ್ತಿರುವುದನ್ನು ಗುರುತಿಸಿ, ಸ್ನೇಹ ಯುವ ಸಾಂಸ್ಕೃತಿಕ ಸಂಘ (ರಿ) ಬೆಂಗಳೂರ ಮತ್ತು ಭಾರತೀಯ ಕಲೆ ಸಾಹಿತ್ಯ ಸಾಂಸ್ಕೃತಿಕ ಸಂಘಟನಾ ಸಂಸ್ಥೆ ನವದೇಹಲಿ ಇವರ ವತಿಯಿಂದ ಕಲಾ ಸೇವಾ ರತ್ನ ರಾಷ್ಟ್ರ ಪ್ರಶಸ್ತಿಯನ್ನು ಜುಲೈ. 27 ರಂದು ಸಂಜೆ 5 ಗಂಟೆಗೆ ದೇಹಲಿಯ ಆರ್‌.ಕೆ.ಪುರಂ 12ನೇಯ ಸೆಕ್ಟ್‌ರನ ಕರ್ನಾಟಕ ಸಂಘದಲ್ಲಿ ಸ್ವೀಕರಿಸಲಿದ್ದಾರೆ ಎಂದು ಸ್ನೇಹ ಯುವ ಸಾಂಸ್ಕೃತಿಕ ಸಂಘದ  ಅಧ್ಯಕ್ಷ ರಂಜಿತಕುಮಾರ ಎಂ. ತಿಳಿಸಿದ್ದಾರೆ. 


ಸುದ್ದಿ ಓದಿ