ರಾಣೆಬೆನ್ನೂರ

ರಶುರಾಮ ವಿಠ್ಠಪ್ಪ ಕಲಿವಾಳ ಇವರಿಗೆ ಕಲಾ ಸೇವಾ ರತ್ನ ರಾಷ್ಟ್ರ ಪ್ರಶಸ್ತಿ ಪುರಸ್ಕಾರ

ರಶುರಾಮ ವಿಠ್ಠಪ್ಪ ಕಲಿವಾಳ ಇವರಿಗೆ ಕಲಾ ಸೇವಾ ರತ್ನ ರಾಷ್ಟ್ರ ಪ್ರಶಸ್ತಿ ಪುರಸ್ಕಾರ

ರಾಣಿಬೆನ್ನೂರ 31 : ಸಾಹಿತ್ಯ ಪರಿಷತ್ ಮೂಲಕ ಕನ್ನಡ ಉಳುವಿಗಾಗಿ ಮತ್ತು ಕನ್ನಡಪರ ಸಂಘಟನೆಗಳನ್ನು ಸಂಘಟಿಸಿ ಶ್ರಮಿಸುತ್ತಿರುವುದನ್ನು ಗುರುತಿಸಿ, ತಾಲೂಕಿನ ಮಾಕನೂರ ಗ್ರಾಮದ ನಿವಾಸಿ ಹಾಗೂ ಹಾಲಿವಸ್ತಿ ಗೋವಾದಲ್ಲಿ ಅಭಿಯಂತರಾಗಿ ಸೇವೆ ಸಲ್ಲಿಸುತ್ತಿರುವ ಪರಶುರಾಮ ವಿಠ್ಠಪ್ಪ ಕಲಿವಾಳ ಇವರಿಗೆ ಕಲಾ ಸೇವಾ ರತ್ನ ರಾಷ್ಟ್ರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. 

ಜುಲೈ. 27 ರಂದು  ದೇಹಲಿಯ ಆರ್‌. ಕೆ. ಪುರಂ 12ನೇಯ ಸೆಕ್ಟ್‌ರನ ಕರ್ನಾಟಕ ಸಂಘದ ಭವನದಲ್ಲಿ ಕನ್ನಡ ಸ್ನೇಹ ಯುವ ಸಾಂಸ್ಕೃತಿಕ ಸಂಘ (ರಿ) ಬೆಂಗಳೂರ ಮತ್ತು ಭಾರತೀಯ ಕಲೆ ಸಾಹಿತ್ಯ ಸಾಂಸ್ಕೃತಿಕ ಸಂಘಟನಾ ಸಂಸ್ಥೆ ನವದೇಹಲಿ ಇವರ ವತಿಯಿಂದ ಕಲಾ ಸೇವಾ ರತ್ನ ರಾಷ್ಟ್ರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. 

ನವದೇಹಲಿ ಸಂಘದ ಅಧ್ಯಕ್ಷ ಪಿ.ಎಂ. ನಾಗರಾಜ, ಉಪಾಧ್ಯಕ್ಷೆ ಪೂಜಾರಾವ್, ಕರ್ನಾಟಕ ಸಂಘದ  ಅಧ್ಯಕ್ಷ ರಂಜಿತಕುಮಾರ ಎಂ.,  ವಿದ್ವಾನ ಸಾಗರ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ