ಕೈವಾರ ಯೋಗಿ ನಾರೇಯಣ ಜಯಂತೋತ್ಸವ
ರಾಣೇಬೆನ್ನೂರು : ಕೈವಾರ ಯೋಗಿನಾರೇಯಣ ಯತೀಂದ್ರರು ಕಾಲಜ್ಞಾನ ನೀಡುವ ಮೂಲಕ ಲೋಕೋದ್ದಾರ ವಾಡಿದ್ದಾರೆ. ಯತೀಂದ್ರರು ಸಮಾಜ ಸುಧಾರಕರಾಗಿದ್ದು ಸಮಾನತೆಗಾಗಿ ತಮ್ಮ ಜೀವಿತದ ಕೊನೆಯವರೆಗೂ ಬೋಧಿಸಿದ ಮಹಾನ್ ಯೋಗಿಯಾಗಿದ್ದಾರೇ, ಎಂದು ಬಲಿಜ ಸಮಾಜದ ಅಧ್ಯಕ್ಷ ಮಲ್ಲೇಶಪ್ಪ ಕುಂಕುಮಗಾರ್ ಹೇಳಿದರು.
ಅವರು ಗುರುವಾರ ಇಲ್ಲಿನ ತಹ ಶೀಲ್ದಾರ್ ಕಚೇರಿಯ, ಸಭಾಭವನದಲ್ಲಿ ತಾಲೂಕ ಆಡಳಿತ ಮತ್ತು ತಾಲೂಕಾ ಬಲಿಜ ಸಮಾಜ ಸಂಯುಕ್ತವಾಗಿ ಆಯೋಜಿಸಿದ್ದ ಯೋಗಿ ಯತಿಂದ್ರರ 297 ನೇ ಜಯಂತೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಶ್ರಮಿಕ ಸಮುದಾಯ ಇದಾಗಿದ್ದು, ಸಮಾನತೆಗಾಗಿ ಶ್ರಮಿಸಬೇಕಾಗಿದೆ. ಸರ್ಕಾರ ಕೂಡಲೇ ಈ ಸಮುದಾಯಕ್ಕೆ 2ಎ ಮೀಸಲಾತಿ ನೀಡುವುದರ ಮೂಲಕ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಯೋಗಿ ನಾರೇಯಣ ಯತೀಂದ್ರರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಉಪತಹಸಿಲ್ದಾರ್ ವೀಣಾ ಕಲ್ಲಮ್ಮನವರ್ ಅವರು ಮಾತನಾಡಿ, ಈ ದೇಶದ ಇತಿಹಾಸದಲ್ಲಿ, ಶರಣರು, ದಾರ್ಷನಿಕರು, ತತ್ವಜ್ಞಾನಿಗಳು, ಸಂತಶರಣರು ತಮ್ಮ ಬದುಕಿನದ್ದಕ್ಕೂ, ಸರ್ವ ಜನಾಂಗದ ಒಳಿತಿಗಾಗಿ ಶ್ರಮಿಸಿದವರಾಗಿದ್ದಾರೆ ಅಂತಹ ಯೋಗಿಗಳ ಬದುಕು, ಭಾವ ಮತ್ತು ಅವರ ಸಾತ್ವಿಕ ಸಂದೇಶ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಸಾಗಬೇಕಾದ ಅಗತ್ಯವಿದೆ ಎಂದರು. ಸಮಾಜದ ಇನ್ನೋರ್ವ ನಾಯಕ ಕೆ ಜಿ ದಿವಾಕರ ಮೂರ್ತಿ ಅವರು ತಾತಾ ಕೈವಾರ ಯೋಗಿ ನಾರೇಯಣ ಮಹಾತ್ಮರ ಜೀವನ, ಸಾಧನೆ, ಆಧ್ಯಾತ್ಮಿಕ ಬದುಕು ಕುರಿತು ಉಪನ್ಯಾಸ ನೀಡಿದರು.
ತಾಲೂಕ ಆಡಳಿತದ ಮಂಜುನಾಥ್ ಬೆನ್ನೂರುಮಠ, ಬಸವರಾಜ ಕಾಂಬಳೆ, ಬಲಿಜ ಸಮಾಜದ ಮುಖಂಡರಾದ, ಉಪಾಧ್ಯಕ್ಷ ರವಿ ಕಿರಗೇರಿ, ಕಾರ್ಯದರ್ಶಿ ಭೀಮರಾಜ್ ಕುಂಕುಮಗಾರ್, ಖಜಾಂಚಿ ಗಣೇಶ್ ಕುಂಕುಮಗಾರ್, ದೇವರಾಜ ಕಿರಗೇರಿ, ಹಾಲಪ್ಪ ಕುಂಕುಮಗಾರ, ಮಂಜುನಾಥ ಕುಂಕುಮಗಾರ, ಬಸವಂತಪ್ಪ ಸಿರಿಗೇರಿ, ಶ್ರೀನಿವಾಸ ಕುಂಕುಮಗಾರ, ರಾಮಣ್ಣ ಕುಂಕುಮಗಾರ, ರಮೇಶ್ ಗುತ್ತಲ, ಹರೀಶ್ ಚವ್ಹಾಣ, ಮಂಜುನಾಥ ಗುತ್ತಲ, ನಾಗರಾಜ ಕುಂಕುಮಗಾರ, ಯಲ್ಲಪ್ಪ ಕುಂಕುಮಗಾರ, ಈಶ್ವರ ಕುಂಕುಮಗಾರ್, ತಮ್ಮಣ್ಣ ನೆಗಳೂರ್ ಸೇರಿದಂತೆ ಸಮಾಜದ ಮತ್ತಿತರಗಣ್ಯರು, ಯುವಕರು ನಾಯಕರು ಉಪಸ್ಥಿತರಿದ್ದರು.