ಕೈಲಾಸ ರಥಯಾತ್ರೆ ಕೊಡುಗೆ ಗಾಂಧೀಜಿ ಕಂಡ ರಾಮ ರಾಜ್ಯದ ಕನಸು ನನಸಾಗಿಲ್ಲ: ಪಾಟೀಲ್
ರಾಣೆಬೆನ್ನೂರು ?3: ದೇಶಕ್ಕೆ ಸ್ವಾತಂತ್ರ್ಯವನ್ನು ಸಿಕ್ಕಿದೆ, ಆದರೆ ಗಾಂಧೀಜಿ ಕಂಡ ರಾಮ ರಾಜ್ಯದ ಕನಸು ಇದುವರೆಗೂ ನನಸಾಗದೆ ಇರುವುದು ಅತ್ಯಂತ ವಿಷಾದಕರ ಸಂಗತಿಯಾಗಿದೆ ಎಂದು ವಾ, ಕ, ಸಾ, ಸಂಸ್ಥೆ ನಿರ್ದೇಶಕ ಸಂತೋಷಮಾರ್ ಪಾಟೀಲ್ ಹೇಳಿದರು. ರವಿವಾರ ತಾಲೂಕಿನ ಮೇಡ್ಲೇರಿ ಗ್ರಾಮದಲ್ಲಿ, ನಡೆದ ಜನಶಕ್ತಿ ಟ್ರಸ್ಟ್, ಸಂತೋಷ್ ಕುಮಾರ್ ಪಾಟೀಲ್ ಅಭಿಮಾನಿ ಬಳಗವು ಕೊಡಮಾಡಿದ ಕೈಲಾಸ ರಥಯಾತ್ರೆ ವಾಹನ, ಮತ್ತು ಗಾಂಧೀಜಿ ಪುತ್ತಳಿ ಮೇಲ್ಛಾವಣಿ ರಕ್ಷಣಾ ಕವಚ, ಲೋಕಾರ್ಪಣೆಗೊಳಿಸಿ ಮಾತನಾಡಿದರು. ಮೇಡ್ಲೆರಿ ಗ್ರಾಮಕ್ಕೂ ನಮ್ಮ ಪಾಟೀಲ್ ಕುಟುಂಬಕ್ಕೂ ನೂರಾರು ವರ್ಷಗಳ ಇತಿಹಾಸವಿದೆ. ಇಲ್ಲಿನ ಹಿರಿಯರಾಗಿದ್ದ ಚಂದ್ರಪ್ಪ ಬಾರ್ಕ್ ಮತ್ತು ಸೋಮಲಿಂಗಪ್ಪ ಸೇರಿ ಗ್ರಾಮದಲ್ಲಿನ ಅನೇಕ ಹಿರಿಯ ರಾಜಕಾರಣಿಗಳ,ರಾಜಕೀಯ.ಸಂಪರ್ಕ ಒಡನಾಟದಲ್ಲಿ, ಐ ಹೆಚ್ ಪಾಟೀಲ್ ಅವರು ತತ್ವ ಸಿದ್ಧಾಂತದ ರಾಜಕಾರಣ ಮಾಡಿದವರಾಗಿದ್ದಾರೆ ಎಂದರು.
ಗ್ರಾಮಕ್ಕೆ ಅವಸ್ಯ ಮತ್ತು ಅಗತ್ಯ ಬೇಕಾಗಿರುವ ಕೈಲಾಸ ರಥಯಾತ್ರೆ ಕೊಡುಗಿಯಾಗಿ.ಕೊಟ್ಟಿದ್ದೇವೆ ಹೊರತು, ಯಾವುದೇ ರಾಜಕೀಯ ಹಿತಾಶಕ್ತಿ ತಾವು ಹೊಂದಿಲ್ಲ ಎಂದು ಸ್ಪಷ್ಟಪಡಿಸಿದರು. ಬೀರೇಶ್ವರ ಸ್ವಾಮಿಯ ಆಶ್ರಯದಲ್ಲಿರುವ, ಗ್ರಾಮದ ಜನತೆ ಮುಗ್ಧರು, ಶ್ರಮಿಕರು, ನಾಡಿನಲ್ಲಿರುವ ಬಹುತೇಕ ಗ್ರಾಮೀಣ ಪ್ರದೇಶಗಳು ಅಭಿವೃದ್ಧಿ ಕಂಡಿವೆ. ಆದರೆ ಗ್ರಾಮ ಇನ್ನು ಹಿಂದೆ ಉಳಿದಿದೆ. ತಮ್ಮೆಲ್ಲರ ಉಪಯೋಗವನ್ನು ಪಡೆದ ರಾಜಕಾರಣಿಗಳು, ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದರಲ್ಲಿ ವಿಫಲರಾಗಿದ್ದಾರೆ. ಬದಲಾವಣೆ ಬೇಕಾಗಿದೆ, ಜನರ ತೀರ್ಮಾನ ನಿರ್ಧಾರ ವಾಗಿದೆ. ಭವಿಷ್ಯದ ಚುನಾವಣೆಯಲ್ಲಿ ಅವಕಾಶ ಕಲ್ಪಿಸಲು, ಮುಂದಾಗಬೇಕು ಎಂದ ಅವರು ತಾವು ತಾಲೂಕಿನ ಶಾಸಕರಾದಲ್ಲಿ, ಗೌರವಯುತವಾಗಿ ಶವ ಸಾಗಿಸಲು, ಸಾವು ಕಂಡವರನ್ನು ಗೌರವ ಮುಕ್ತಿ ನೀಡಲು, ಎಲ್ಲಕಡೆಯೂ ಕೈಲಾಸ ರಥಯಾತ್ರೆಯನ್ನು ನೀಡುವ ಸಂಕಲ್ಪ ತಮ್ಮದಾಗಿದೆ ಎಂದರು.
ಗ್ರಾಮ ಪಂಚಾಯತ್ ಅಧ್ಯಕ್ಷ ಶಾಂತಮ್ಮ ತಳವಾರ್, ಕಾರ್ಯಕ್ರಮ ಉದ್ಘಾಟಿಸಿದರು. ಸದಸ್ಯ ಮಲ್ಲಪ್ಪ ಬಡಪ್ಪಳವರ್, ಚಂದ್ರು ಪೂಜಾರ್, ಎಂ.ಸಿ.ಹಾವೇರಿ, ಸುರೇಶ್ ಕೂನಬೇವು, ದಿಳ್ಳೆಪ್ಪಾ ಹಾವೇರಿ, ಜ್ಯೋತಿ ಕಣವಿ, ಮತ್ತಿತರರು ಮಾತನಾಡಿದರು. ಕಾರ್ಯಕ್ರಮದಲ್ಲಿ ಗಣ್ಯರಾದ ಲಕ್ಷ್ಮಪ್ಪ ಕುರುಬರ, ದುರ್ಗಪ್ಪ ಪೂಜಾರ್, ನಾಗರಾಜ್ ಗೊಂಗಟ್ಟಿ, ದಿಳ್ಳೆಪ್ಪಾ ಆನ್ವೇರಿ, ಸುರೇಶ್ ಬಿರಾಳ, ರಾಮಚಂದ್ರಪ್ಪ ಬಾರ್ಕ್, ರುದ್ರಪ್ಪ ಲಮಾಣಿ, ನಜೀರುದ್ದೀನ್ ಸಾಬ್ ಚಿಕ್ಕಲಗಾರ, ಗುಲಾಬ್ ಸಾಬ್ ಮಾಳಗಿಮನಿ, ಶಿವಾಜಪ್ಪ ತುಮ್ಮಿನಕಟ್ಟಿ, ಗೀತಾ ಚಕ್ರಸಾಲಿ ಕರಿಯವ್ವ ಕುರುಡಪ್ಪನವರ್, ನಾಗಪ್ಪ ದಿಳ್ಳೆಪ್ಪನವರ, ನಾಗಪ್ಪ ಹಕಾರಿ, ಯುವರಾಜ ಭಾರಾಟಕ್ಕೆ, ಶೋಭಾ ಹುಲ್ಲತ್ತಿ, ಮತ್ತು ಗ್ರಾಮದ ಆನೇಕ ಮುಖಂಡರು, ಯುವಕರನ್ನು ಸನ್ಮಾನಿಸಿ ಗೌರವಿಸಲಾಯಿತು. ನಿವೇದಿತಾ ಪಾಟೀಲ್ ಸಂಗಡಿಗರು ಪ್ರಾರ್ಥಿಸಿದರು. ನಾಗರಾಜ್ ಹೊನ್ನತ್ತಿ ಸ್ವಾಗತಿಸಿದರು. ಮಾರುತಿ ತಳವಾರ್ ನಿರೂಪಿಸಿ, ವಂದಿಸಿದರು. ಸಮಾರಂಭಕ್ಕೂ ಮುನ್ನ ಪಾಟೀಲ್ ಅವರ ಅಭಿಮಾನಿ ಬಳಗದ ನೂರಾರು ಕಾರ್ಯಕರ್ತರು ಸಂತೋಷ್ ಕುಮಾರ್ ಮತ್ತು ಗಣ್ಯರನ್ನು ವಾದ್ಯ ವೈಭವದೊಂದಿಗೆ ಬರಮಾಡಿಕೊಂಡರು