ಕಾಗವಾಡ-ಮೊಳವಾಡ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆ: ಶಾಸಕ ಶ್ರೀಮಂತ ಪಾಟೀಲ್
ಕಾಗವಾಡ: ಕಾಗವಾಡ ಕ್ಷೇತ್ರದಲ್ಲಿ ಎಲ್ಲ ಗ್ರಾಮಗಳಲ್ಲಿ ಎಸ್ಸಿ-ಎಸ್ಟಿ ಕಾಲೋನಿಗಳಲ್ಲಿ ವಿಶೇಷ ಅನುದಾನವನ್ನು ಮಂಜೂರುಗೊಳಿಸಿ ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದೇನೆ. ಕಾಗವಾಡದಲ್ಲಿ ಈಗಾಗಲೇ 1.30 ಕೋಟಿ ರೂ ವೆಚ್ಚು ಮಾಡಿ ಬಸವನಗರದಲ್ಲಿ ಚರಂಡಿ ಕಾಮಗಾರಿ ಕೈಗೊಂಡಿದ್ದು ಈಗ ಮತ್ತು 1 ಕೋಟಿ ರೂ. ಅನುದಾನ ಮಂಜೂರು ಗೊಳಿಸಿದ್ದೇನೆ ಎಂದು ಶಾಸಕ ಶ್ರೀಮಂತ ಪಾಟೀಲ್ ಹೇಳಿದರು.
ಗುರುವಾರ ಬೆಳಗ್ಗೆ ಕಾಗವಾಡದಲ್ಲಿ ಸರ್ಕಾರದ ಸನ್ 2021-22 ನೇ ಸಾಲಿನ ಎಸ್ಎಸ್ಪಿ ಯೋಜನೆ ಅಡಿಯಲ್ಲಿ 1 ಕೋಟಿ ರೂ. ಎಸ್ಸಿ ಸಮಾಜದ ಓಣಿಗಳಲ್ಲಿ ರಸ್ತೆ ಚರಂಡಿ ಮತ್ತು ಇತರ ಅಭಿವೃದ್ಧಿ ಕಾಮಗಾರಿಗಾಗಿ ಬಳಸುವ ಅನುದಾನ ಮಂಜೂರುಗೊಳಿಸುಕೊಂಡಿದಾರೆ. ಈ ಕಾಮಗಾರಿಗೆ ಶಾಸಕರು ಚಾಲನೆ ನೀಡಿದರು.
ಶಾಸಕರು ಮಂದೆವರಿದು ಹೇಳುವಾಗ ಕಾಗವಾಡ ಎಸ್ಸಿ ಓಣಿಗಳಲ್ಲಿ ಇನ್ನುಳಿದ ಕಾಮಗಾರಿಗಳನ್ನು 2.50 ಕೋಟಿ ರೂ. ಅವಶ್ಯಕತೆ ಈ ಅನುದಾನವನ್ನು ಮಂಜೂರುಗೊಳಿಸಿ ಬೇಡಿಕೆ ಈಡೇರಿಸುತ್ತೇನೆ ಎಂದು ಭರವಸೆ ನೀಡಿದರು.
ಕಾಗವಾಡ ಕ್ಷೇತ್ರ ಶಾಸಕ ಶ್ರೀಮಂತ ಪಾಟೀಲ್ ಇವರು ತಮ್ಮ ಶಾಸಕರ ವಿಶೇಶ ಅನುದಾನದಿಂದ ಕಾಗವಾಡದ ಎಸ್ಸಿ ಕಾಲೋನಿ ಹತ್ತಿರ ಇರುವ ಕಾಗವಾಡ ಮುಳವಾಡ ರಸ್ತೆ ಅಭಿವೃದ್ಧಿಗಾಗಿ 1 ಕೋಟಿ ರೂ. ಅನುದಾನ ಮಂಜೂರು ಗೊಳಿಸಿ ಕಾಮಗಾರಿಗೆ ಚಾಲನೆ ನೀಡಿದರು.
ದಲಿತ ಸಮಾಜದ ಮುಖಂಡರಾದ ಪ್ರಕಾಶ ಧೊಂಡಾರೆ ಮಾತನಾಡಿ ಕಾಗವಾಡ ಕ್ಷೇತ್ರದ ಜನತೆ ಶ್ರೀಮಂತ ಪಾಟೀಲ್ ಇವರನ್ನು ಶಾಸಕರಾಗಿ ಕಂಡಿದ್ದು ಪುಣ್ಯವಂತರು. ಇವರಿಗೆ ದಲಿತರಲ್ಲಿ ಈ ರೀತಿ ದಲಿತರ ಓಣಿಗಳ ಅಭಿವೃದ್ಧಿಗಾಗಿ ಅನುದಾನ ದೊರೆತಿರಲಿಲ್ಲ. ಈಗ ಕೋಟಿ, ಕೋಟಿ, ರು. ಗಳಷ್ಟು. ನಮ್ಮ ಓಣಿಗಳಲ್ಲಿ ರಸ್ತೆ, ಚರಂಡಿ, ಶುದ್ಧ ಕುಡಿಯುವ ನೀರು ಇನ್ನಿತರ ಯೋಜನೆಗಳು ಪೂರೈಸುತ್ತಿದ್ದಾರೆ ನಾವು ಧನ್ಯರಾದೆವೆಂದು ಶಾಸಕರಿಗೆ ವ್ಯಕ್ತಪಡಿಸಿ ಅವರನ್ನು ಸನ್ಮಾನಿಸಿದರು.
ಸಮಾರಂಭದಲ್ಲಿ ಗ್ರಾಮದ ಮುಖಂಡರಾದ ಸುಭಾಶ ಕಠಾರೆ, ಬಾಳು ಕಾಂಬಳೆ, ವಿಶಾಲ ಧೊಂಡಾರೆ, ದೀಪಕ್ಕೆ ಕಾಂಬಳೆ, ಅವಿನಾಶ್ ದೇವನೇ, ಜನಾಬಾಯಿ ಕಾಂಬಳೆ, ವಿಠ್ಠಲ್ ಪವಾರ್, ಪ್ರಕಾಶ್ ಪಾಟೀಲ್, ವಿನಾಯಕ್ ಚೌಗುಲೆ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳಾದ ಜೆ.ಎ. ಹಿರೇಮಠ್, ಆರ್.ಪಿ ಅವತಾಡೆ ಗುತ್ತಿಗೆದಾರರಾದ ರಾಜು ಅಳಬಾಲ. ಸೇರಿದಂತೆ ಅನೇಕರು ಇದ್ದರು.
ಫೋಟೋ ಶೀರ್ಷಿಕೆ: 03 ಕಾಗವಾಡ 01 ಕಾಗವಾಡ ಪಟಣದ ಎಸ್ಸಿ ಸಮಾಜದ ಕಾಲೋನಿ ಹತ್ತಿರದ ಕಾಗವಾಡ-ಮೊಳವಾಡ ರಸ್ತೆ ಅಭಿವೃದ್ಧಿಗಾಗಿ ಒಂದು ಕೋಟಿ ರೂ. ಅನುದಾನ ಮಂಜೂರು ಗೊಳಿಸಿ ಶಾಸಕ ಶ್ರೀಮಂತ ಪಾಟೀಲರು ಕಾಮಗಾರಿಗೆ ಚಾಲನೆ ನೀಡುತ್ತಿರುವಾಗ.