ಸಂಭ್ರಮದಿಂದ ಕಾಗನೂರು ಶಿವಲಿಂಗೇಶ್ವರ ರಥೋತ್ಸವ
ಹೂವಿನಹಡಗಲಿ ಫೆ.28: ತಾಲೂಕಿನ ಕಾಗನೂರು ಗ್ರಾಮದಲ್ಲಿ ಸೋಮವಾರ ಸಂಜೆ 5.30ಕ್ಕೆ ಶಿವಲಿಂಗೇಶ್ವರ ಸ್ವಾಮಿ ರಥೋತ್ಸವ ಸಡಗರ ಸಂಭ್ರಮದಿಂದ ಜರುಗಿತು. ದೇವಸ್ಥಾನದಿಂದ ಸ್ವಾಮಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯ ಭವ್ಯ ಮೆರವಣಿಗೆಯಲ್ಲಿ ಕರೆತಂದು ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ರಥ ಪೂಜೆ,ಮಹಾಮಂಗಳಾರತಿ ನೆರವೇರಿಸುತ್ತಿದ್ದಂತೆ ಹರ ಹರ ಮಹಾದೇವ ಭಕ್ತರ ಜಯಘೋಷ,ಹರ್ಷೋದ್ಘಾರ ನಡುವೆ ರಥೋತ್ಸವ ನಡೆಯಿತು. ರಥ ಬೀದಿಯಲ್ಲಿ ನೆರೆದಿದ್ದ ಭಕ್ತರು ರಥಕ್ಕೆ ಬಾಳೆಹಣ್ಣು ಎಸೆದು ಭಕ್ತಿಯಿಂದ ಕೈ ಮುಗಿದರು.ಸಮಾಳ,ನಂದಿಕೋಲು ಮಂಗಳ ವಾಧ್ಯಗಳು ವಿಜೃಂಭಣೆಯಿಂದ ರಥೋತ್ಸವಕ್ಕೆ ಮೆರಗು ತಂದಿದ್ದವು.ಕಾಗನೂರು ಸುತ್ತಮುತ್ತಲ ಗ್ರಾಮಗಳ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿ ಸ್ವಾಮಿಯ ದರ್ಶನ ಪಡೆದರು.ಪುರದ ಸಿದ್ದವೀರೇಶ ಶಿವಾಚಾರ್ಯ ಸ್ವಾಮೀಜಿ, ಹಂಪಸಾಗರ ಶಿವಲಿಂಗ ರುದ್ರಮುನಿ ಸ್ವಾಮೀಜಿ, ಚೌಕಿಮಠದ ಗಾಡಿ ತಾತಾ, ಎ.ಎಂ.ಹಾಲಯ್ಯ ಶಾಸ್ತ್ರಿ, ಜಿ.ಎಂ.ಗುರುಪಾದಸ್ವಾಮಿ ಇದ್ದರು.