ಕಾಗವಾಡ

ಶಿರಗುಪ್ಪಿ ಪಿಕೆಪಿಎಸ್ ಅಧ್ಯಕ್ಷರಾಗಿ ಕಾಡಗೌಡ ಪಾಟೀಲ ಆಯ್ಕೆ

ಶಿರಗುಪ್ಪಿ ಪಿಕೆಪಿಎಸ್ ಅಧ್ಯಕ್ಷರಾಗಿ ಕಾಡಗೌಡ ಪಾಟೀಲ ಆಯ್ಕೆ

ಶೇಡಬಾಳ 25: ಸಮೀಪದ ಶಿರಗುಪ್ಪಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಕಾಡಗೌಡ ಬಸಗೌಡ ಪಾಟೀಲ ಹಾಗೂ ಉಪಾಧ್ಯಕ್ಷರಾಗಿ ರಾಜೀವ ಬಾಪು ಚೌಗುಲೆ ಅವಿರೋಧ ಆಯ್ಕೆಗೊಂಡರು.

ಗುರುವಾರ ದಿ. 25 ರಂದು ಸಂಘದ ಕಾರ್ಯಾಲಯದಲ್ಲಿ ಜರುಗಿದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. 

ಚುನಾವಣಾಧಿಕಾರಿಯಾಗಿ ಮಂಜುನಾಥ ಎಮ್ ಪಾಟೀಲ ಕಾರ್ಯ ನಿರ್ವಹಿಸಿದರು.

ನಂತರ ಜರುಗಿದ ಸಭೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಅಭಯ ಅಕಿವಾಟೆ ಹಾಗೂ ಇತರ ಸದಸ್ಯರು ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಸನ್ಮಾನಿಸಿದರು. 

ಈ ವೇಳೆ ಅಭಯಕುಮಾರ ಅಕಿವಾಟೆ, ರುದ್ರಗೌಡ ಪಾಟೀಲ, ಸಂದೀಪ ಕಾತ್ರಾಳೆ, ಜಿನೇಂದ್ರ ಕುರುಂದವಾಡೆ, ಕಲ್ಲಪ್ಪ ಚಂದೂರೆ, ಅಬ್ದುಲ ಬಲಬಂಡ, ಸುವರ್ಣಾ ಮೊನೆ, ಸುಮಿತ್ರಾ ಹೇಮಗಿರೆ, ಪ್ರಭಾಕರ ಕಾಂಬಳೆ ಮತ್ತು ಕಾರ್ಯದರ್ಶಿ ಶ್ರೇಣಿಕ ಮಾಂಗುರೆ ಇತರ ಸಿಬ್ಬಂದಿಯವರಾದ ಪದಮಣ್ಣ ಉಗಾರೆ, ಪ್ರಮೋದ ಅಕಿವಾಟೆ, ರುದ್ರಗೌಡ ಪಾಟೀಲ, ಸಾಗರ ಉಮರಾಣೆ, ವಿಜಯ ಗಿರಗಾಂವೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಸುದ್ದಿ ಓದಿ