ಕಾಗವಾಡ

ಕಬಡ್ಡಿ ಪಂದ್ಯಾವಳಿ: ಚಿಂಚಲಿ ಮಾಯಕ್ಕಾ ದೇವಿ ತಂಡ ಪ್ರಥಮ

ಕಬಡ್ಡಿ ಪಂದ್ಯಾವಳಿ: ಚಿಂಚಲಿ ಮಾಯಕ್ಕಾ ದೇವಿ ತಂಡ ಪ್ರಥಮ

ಕಾಗವಾಡ 13: ತಾಲೂಕಿನ ಉಗಾರ ಖುರ್ದ ಪಟ್ಟಣದ ಲಕ್ಷ್ಮೀದೇವಿ ಜಾತ್ರೆ ನಿಮಿತ್ಯವಾಗಿ ಪುರುಷರ ಮತ್ತು ಮಹಿಳಾ, ಮುಕ್ತ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯಲ್ಲಿ ರಾಯಬಾಗ ತಾಲೂಕಿನ ಚಿಂಚಲಿ ಮಾಯಕ್ಕಾ ದೇವಿ ತಂಡ ಪ್ರಥಮ ಸ್ಥಾನ ಗಿಟ್ಟಿಸಿಕೊಂಡು 30 ಸಾವಿರ ರೂ. ಬಹುಮಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. 

ಗುರುವಾರ ಸಂಜೆ ಅಂತಿಮ ಸ್ಪರ್ಧೆ ಜರುಗಿದವು. ಇದರಲ್ಲಿ ದ್ವಿತೀಯ ಸ್ಥಾನ ರಾಯಬಾಗ ತಾಲೂಕಿನ ಕಂಕಣವಾಡಿ ಗ್ರಾಮದ ತಂಡ ಪಡೆದುಕೊಂಡರೆ ತೃತೀಯ ಸ್ಥಾನ ಐನಾಪುರ ತಂಡ ಪಡೆದುಕೊಂಡಿದೆ. ಸ್ಪರ್ಧೆಯಲ್ಲಿ ವಿಜೇತ ತಂಡಗಳಿಗೆ ಪ್ರಥಮ 30 ಸಾವಿರ ರೂ. ಕಾಗವಾಡ ಶಾಸಕ ಶ್ರೀಮಂತ ಪಾಟೀಲರಿಂದ, ದ್ವಿತೀಯ ಬಹುಮಾನ 25 ಸಾವಿರ ರೂ. ಮಾಜಿ ಸಚಿವ ಹಾಗೂ ಶಾಸಕ ರಮೇಶ ಜಾರಕಿಹೊಳಿಯವರಿಂದ, ತೃತೀಯ ಬಹುಮಾನ 15 ಸಾವಿರ ರೂ. ಉಗಾರ ಬುದ್ರುಕ ಗ್ರಾಮ ಪಂಚಾಯತಿ ಅಧ್ಯಕ್ಷ ಅಣ್ಣಾಗೌಡ ಪಾಟೀಲ ಹಾಗೂ ಚತುರ್ಥ ಬಹುಮಾನ 10 ಸಾವಿರ ರೂ. ಕೊಲ್ಹಾಪುರದ ಮಾಜಿ ಸಂಸದ ಧನಂಜಯ ಮಹಾಡಿಕ್ ಇವರು ನೀಡಿದ್ದಾರೆ. 

ಪಂದ್ಯಾವಳಿಯ ನಿರ್ಣಾಯಕರಾಗಿ ಪಿ.ಎನ್‌.ಅಲಗೂರ, ಎಂ.ಕೆ.ಶಿರಗುಪ್ಪಿ, ಬಿ.ಜಿ.ಬಾನೆ ಇವರು ಕಾರ್ಯನಿರ್ವಹಿಸಿದ್ದರು. 

ಹೊನಲು ಬೆಳಕಿನ ಪಂದ್ಯಾವಳಿಯಲ್ಲಿ ಮಹಾರಾಷ್ಟ್ರ, ಕರ್ನಾಟಕ, ಗೋವಾ ರಾಜ್ಯಗಳಿಂದ 25 ತಂಡಗಳು ಸ್ಪರ್ಧಿಸಿದವು. ಇದೇ ರೀತಿ ಮಹಿಳಾ ತಂಡಗಳ ಸ್ಪರ್ಧೆಯೂ ಜರುಗಿದವು. ಸ್ಪರ್ಧೆ ಯಶಸ್ವಿಗೊಳಿಸಲು ಲಕ್ಷ್ಮೀ ಕ್ರೀಡಾ ಮತ್ತು ಸಾಮಾಜಿಕ ಕಮೀಟಿ ಅಧ್ಯಕ್ಷ ರಾಕೇಶ ಪಾಟೀಲ, ಸುಜಯ ಫರಾಕಟ್ಟೆ, ಸದಾಶಿವ ಶಿಂಗೆ, ಅಶೋಕ ಕಾಂಬಳೆ, ಪ್ರತಾಪ ಜತ್ರಾಟೆ, ಸಾಗರ ಭಾನುಶೆ, ಈಕ್ಬಾಲ್ ಇನಾಮದಾರ, ವಿನಾಯಕ ಕಾಮೇರಿ, ಸೇರಿದಂತೆ ಅನೇಕ ಯುವಕರು ವಿಶೇಷವಾಗಿ ಶ್ರಮಿಸಿದರು. 

ಇದೇ ರೀತಿ ಉಗಾರ ಗ್ರಾಮದಲ್ಲಿ ಓಟದ ಸ್ಪರ್ಧೆ, ಸೈಕಲ್ ಶರ್ಯತ್ತು ಮತ್ತು ಜಾನುವಾರಗಳ ಪ್ರದರ್ಶನ, ಮಧ್ಯಾಹ್ನ ಎಲ್ಲ ಸದ್ಭಕ್ತರಿಗೆ ಮಹಾಪ್ರಸಾದ ಹಂಚುವ ಕಾರ್ಯಕ್ರಮ ನೆರವೇರಿತು. ಸಂಜೆ ಯಶಸ್ವಿ ಸ್ಪರ್ಧಕರಿಗೆ ಬಹುಮಾನ ವಿತರಿಸಲಾಯಿತು. ಈ ವೇಳೆ ಶಿದ್ದಗೌಡ ಕಾಗೆ, ವಿಲಾಸ ಪಾಟೀಲ, ವಿಜಯ ಥೋರುಶೆ, ಪ್ರಫೂಲ್ ಥೋರುಶೆ, ರಾಕೇಶ ಪಾಟೀಲ, ಬಾಳು ನಾಯಿಕ, ಅಶೋಕ ಕಾಂಬಳೆ, ಮಂಜುನಾಥ ತೇರದಾಳೆ, ಬಾಬು ಹೊಸಮನಿ, ಭಾವುಸಾಹೇಬ ನಾಯಿಕ, ಸೇರಿದಂತೆ ಅನೇಕರು ಇದ್ದರು. 


ಸುದ್ದಿ ಓದಿ