ಕಾಗವಾಡ

ಕೆಆರ್‌ಇಎಸ್ ಶಿಕ್ಷಣ ಸಂಸ್ಥೆಯು 2024ಕ್ಕೆ ಶತಮಾನೋತ್ಸವ ಆಚರಣೆ

ಕೆಆರ್‌ಇಎಸ್ ಶಿಕ್ಷಣ ಸಂಸ್ಥೆಯು 2024ಕ್ಕೆ ಶತಮಾನೋತ್ಸವ ಆಚರಣೆ

ಕಾಗವಾಡ 27: ಪ್ರತಿಷ್ಠಿತ ಕೆಆರ್‌ಇಎಸ್ ಶಿಕ್ಷಣ ಸಂಸ್ಥೆಯ 2021-22ನೇಸಾಲಿನ ವಾರ್ಷಿಕ ಸರ್ವ ಸಾಮಾನ್ಯ ಸಭೆಯ ದಿ. 27ರಂದು ಸಂಸ್ಥೆಯ ಕೇಂದ್ರ ಭವನದಲ್ಲಿ ಜರುಗಿತು.  

ಸಭೆಯ ಅಧಕ್ಷತೆಯನ್ನು ನಿವೃತ್ತ ಶಿಕ್ಷಕ ಬಿ ಎ ಪಾಟೀಲ ವಹಿಸಿದರು. ಸಭೆಯಲ್ಲಿ ಸಂಸ್ಥೆಯ ಚೇರಮನ ದಾದಾಗೌಡ ಪಾಟೀಲ ಮಾತನಾಡಿ 2024ಕ್ಕೆ ಸಂಸ್ಥೆಯು 100ವಸಂತಗಳನ್ನು ಪೂರೈಸಿ ಶತಮಾನೋತ್ಸವ ಕಾರ್ಯಕ್ರಮ ಆಚರಿಸುವ ಕುರಿತು ಹಾಗೂ ಮಹಾದ್ವಾರ ಕಟ್ಟಡ, ಹೈಸ್ಕೂಲ ಮೇಲೆ ಹೊಸ ಕಟ್ಟಡ ನಿರ್ಮಿಸುವ ಮತ್ತು ಮೂಲಭೂತ ಸೌಕರ್ಯ ಗಳು, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಕುರಿತು ಚರ್ಚಿಸಲಾಯಿತು.ಸಂಸ್ಥೆಯಲ್ಲಿ ಸುಮಾರು 2000 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಉತ್ತಮ ನುರಿತ ಶಿಕ್ಷಕರು ಸಿಬ್ಬಂದಿಯವರು ಕಾರ್ಯನಿರ್ಹಿಸುತ್ತಿದ್ದಾರೆ ಮತ್ತು ಸಂಸ್ಥೆಯ ಎಲ್ಲ ವಿಭಾಗಗಳಲ್ಲಿ  ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಹಾಗು ಆಟ ಪಾಠಗಳಲ್ಲಿ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಕೀರ್ತಿ ತಂದಿದ್ದಾರೆ ಎಂದು ತಿಳಿಸಿದರು.  

ನಿರ್ದೇಶಕ ರಾಜೇಂದ್ರ ಪೊತದಾರ ವರದಿ ವಾಚನ ಮಾಡಿದರು. ಖಜಾಂಚಿ ಉದಯ ನಿಡಗುಂದಿ ಲೆಕ್ಕಪತ್ರ ತಿಳಿಸಿದರು. ಆಡಳಿತ ಮಂಡಳಿಯ ಉಪಾಧ್ಯಕ್ಷ ಮೋಹನ ಕಾರ್ಚಿ, ಗೋಪಾಲರಾವ ಕಟ್ಟಿ, ವಿಶ್ವನಾಥ ಕಾರ್ಚಿ, ತಮ್ಮಣ್ಣಾ ಪಾರಶೇಟ್ಟಿ ಮತ್ತು  ಸರ್ವಸಾಮಾನ್ಯ ಸದಸ್ಯರು ಹಾಜರಿದ್ದರು. ಉಪಪ್ರಾಚಾರ್ಯ ಎ ಎಂ ಹುಲ್ಲೆನ್ನವರ ನಿರೂಪಿಸಿ ವಂದಿಸಿದರು. 


ಸುದ್ದಿ ಓದಿ