'ಕಾವ್ಯಾಂಜಲಿ- ಯಾರಿವಳು' ಮಹಾಸಂಗಮದಲ್ಲಿ ಅದಿತಿ ಪ್ರಭುದೇವ, ಶ್ರೀಕಿ
ಬೆಂಗಳೂರು, ಅ 20 :ಜನಮೆಚ್ಚುವಂತಹ ಧಾರಾವಾಹಿಗಳನ್ನು ನೀಡುತ್ತಿರುವ ಉದಯ ವಾಹಿನಿಯು ದಸರಾ ಪ್ರಯುಕ್ತ ಹಲವು ಹೊಸ ಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಮನಸಾರೆ, ಸೇವಂತಿ, ಆಕೃತಿ, ಕಸ್ತೂರಿ ನಿವಾಸ ಧಾರಾವಾಹಿಗಳಲ್ಲಿ ವಿಶೇಷ ಸಂಚಿಕೆಗಳನ್ನು ಪ್ರಸಾರ ಮಾಡುತ್ತಿದೆ. ಜೊತೆಗೆ ಯಾರಿವಳು ಮತ್ತು ಕಾವ್ಯಾಂಜಲಿ ಧಾರಾವಾಹಿಗಳ ಮಹಾಸಂಗಮವಾಗಿದ್ದು, ಕೆಲ ಎಪಿಸೋಡ್‌ಗಳಲ್ಲಿ 'ಓಲ್ಡ್ ಮಾಂಕ್' ಚಿತ್ರದ ನಟಿ ಅದಿತಿ ಪ್ರಭುದೇವ ಮತ್ತು ಶ್ರೀನಿ ಕೂಡ ಕಾಣಿಸಿಕೊಂಡಿದ್ದಾರೆ.
ಮಹಾಸಂಗಮದ ಎಪಿಸೋಡ್‌ನಲ್ಲಿ ಒಂದು ನಿಶ್ಚಿತಾರ್ಥ ಕಾರ್ಯಕ್ರಮ ನಡೆಯುತ್ತಿರುತ್ತದೆ. ಅಲ್ಲಿ ಅತಿಥಿಗಳಾಗಿ ಶ್ರೀಕಿ ಮತ್ತು ಅದಿತಿ ಪ್ರಭುದೇವ್ ಹೋಗಲಿದ್ದು, ಆ ಕುಟುಂಬದ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಜೊತೆಗೆ ಅದಿತಿ ಅವರ 'ಶ್ಯಾನೇ ಟಾಪಾಗವ್ಳೇ..' ಹಾಡಿಗೆ ಡ್ಯಾನ್ಸ್ ಕೂಡ ಮಾಡಿದ್ದಾರೆ. ಈ ಯಾರಿವಳು ಮತ್ತು ಕಾವ್ಯಾಂಜಲಿ ಧಾರಾವಾಹಿಗಳ ಮಹಾ ಸಂಗಮದ ಎಪಿಸೋಡ್ ಅ.19 ಭಾನುವಾರದಿಂದ ರಾತ್ರಿ 8ಕ್ಕೆ ಪ್ರಸಾರವಾಗುತ್ತಿದೆ. ಇದರ ಜೊತೆಗೆ ಅ. 24ರ ಶನಿವಾರ ಮತ್ತು ಅ 25ರ ಭಾನುವಾರ ರಾತ್ರಿ 9. 30ರಿಂದ 10.30ರವರೆಗೆ ದಸರಾ ಪ್ರಯುಕ್ತ ವಿಶೇಷ ಸಂಚಿಕೆಗಳು ಕೂಡ ಪ್ರಸಾರ ಆಗಲಿವೆ.