ರಾಣೆಬೆನ್ನೂರ

ಜೂನಿಯರ್ ವಿಷ್ಣುವರ್ಧನ್ ಅವರ ಕನ್ನಡ ಜಾಗೃತಿ ಅಭಿಯಾನ

ಜೂನಿಯರ್ ವಿಷ್ಣುವರ್ಧನ್ ಅವರ ಕನ್ನಡ ಜಾಗೃತಿ ಅಭಿಯಾನ

ರಾಣೇಬೆನ್ನೂರು 28:  ಕರ್ನಾಟಕ ರಾಜ್ಯೋತ್ಸವದ ನವಂಬರ್ 1ರಂದು ಅದ್ದೂರಿಯಾಗಿ ಆಚರಿಸಲು ಕನ್ನಡ ಜಾಗೃತಿ ಅಭಿಯಾನವನ್ನು ಹಮ್ಮಿಕೊಂಡಿದ್ದು, ಬೆಂಗಳೂರಿನಿಂದ ಬೆಳಗಾವಿವರೆಗೆ ರಾಣೇಬೆನ್ನೂರು ತಾಲೂಕಿನ ಐರಣಿ ಗ್ರಾಮದ ನಾಗಬಸಯ್ಯ ಮಳಲಿ ಮಠ, ಅವರು (ಜೂನಿಯರ್ ವಿಷ್ಣುವರ್ಧನ್) ಕನ್ನಡ ಭಾಷೆ, ನಾಡು, ನುಡಿ,ಮತ್ತು ಸಂಸ್ಕೃತಿಯ ಜಾಗೃತಿಗಾಗಿ ಅಭಿಯಾನವನ್ನು ಹಮ್ಮಿಕೊಂಡಿರುವುದು ಸ್ವಾಗತಾರ್ಹ ಕಾರ್ಯವಾಗಿದೆ. ಎಂದು ಮಾಜಿ ಶಾಸಕ ಅರುಣ್ ಕುಮಾರ್ ಪೂಜಾರ  ಹೇಳಿದರು.   ಅವರು, ಬೆಂಗಳೂರಿನಿಂದ ಹಮ್ಮಿಕೊಂಡಿರುವ  ಕನ್ನಡ ಜಾಗೃತಿ ಅಭಿಯಾನವನ್ನು ನಗರದಲ್ಲಿ ಸ್ವಾಗತಿಸಿ, ಅವರ ಸೇವಾ ಕಾರ್ಯವನ್ನು ಪ್ರಶಂಶಿಸಿ ಮಾತನಾಡಿದರು.  

ನಾಗಬಸಯ್ಯ ಮಳಲಿಮಠ ಅವರು ನಮ್ಮ ಕನ್ನಡ ನಾಡಿನ ಹೆಮ್ಮೆಯ ಪುತ್ರರಾಗಿದ್ದಾರೆ. ಮೇರು ನಟ, ವಿಷ್ಣುವರ್ಧನ್ ಅವರ, ಹೆಸರಿನಲ್ಲಿ, ನಟನ ಜೀವಂತ ಲಕ್ಷಣವಾಗಿ ಗೋಚರಿಸುತ್ತಾ ನಾಡಿನಾದ್ಯಂತ ಸಂಚರಿಸುತ್ತಾ, ಭಾಷಾ ಜಾಗೃತಿ ಮೂಡಿಸುತ್ತಿರುವುದು ನಾಡಿನ ಯುವ ಸಮುದಾಯಕ್ಕೆಈ ಪ್ರೇರಣೆಯಾಗಿದ್ದಾರೆ ಎಂದರು.ಕನ್ನಡ ನಟ ದಿವಂಗತ ವಿಷ್ಣುವರ್ಧನ್ ಅವರ ಅಭಿಮಾನಿಯಾಗಿ, ಜೂನಿಯರ್ ವಿಷ್ಣುವರ್ಧನ್ ನಾಗಿ  ಇಡೀ ರಾಜ್ಯದ್ಯಂತ ಕನ್ನಡ ಜಾಗೃತಿ ಹಮ್ಮಿಕೊಂಡಿರುವುದು ಒಳ್ಳೆಯ ಬೆಳವಣಿಗೆ. ಎಂದ ಅವರು, ನಾಗಬಸಯ್ಯ ಮಳಲಿಮಠ ಅವರನ್ನು ಗ್ರಹ ಕಚೇರಿಯಲ್ಲಿ, ಶುಭ ಹಾರೈಸಿ, ಸನ್ಮಾನಿಸಿ, ಗೌರವಿಸಿ  ಅಭಿನಂದಿಸಿದರು.               

ಮಾಜಿ ಶಾಸಕರ ಹಾಗೂ ಅಭಿಮಾನಿಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ, ಜೂನಿಯರ್ ವಿಷ್ಣುವರ್ಧನ್ ನಾಗಬಸಯ್ಯ ಅವರು, ಕನ್ನಡ ನಾಡಿನ ಸಮಗ್ರ ಕನ್ನಡಿಗರು, ಅಭಿಮಾನ ಸೂನ್ಯರಾಗದೇ, ಇಂದು ನಾಡು, ನುಡಿ, ಭಾಷೆ, ನೆಲ, ಜಲ ಮತ್ತು ಕನ್ನಡ ಸಂಸ್ಕೃತಿಯ ವಿಚಾರ ಬಂದಾಗ, ಸ್ವಾಭಿಮಾನಿಗಳಾಗಬೇಕಾಗುತ್ತದೆ. ಇಲ್ಲದೆ ಹೋದರೆ ಭವಿಷ್ಯದ ದಿನಗಳಲ್ಲಿ, ಕನ್ನಡಿಗರು ಅನ್ಯ ಭಾಷಿಕರ ದಬ್ಬಾಳಿಕೆಯಿಂದಾಗಿ ಸೂನ್ಯೂರಾಗಬೇಕಾಗುತ್ತದೆ ಎಂದರು. ಕರ್ನಾಟಕದ ಗಡಿ ಭಾಗದಲ್ಲಿ ಕನ್ನಡ ನಶಿಸಿ ಹೋಗುತ್ತದೆ. ಅದರ ಪ್ರಭಾವವಾಗಿ ಕನ್ನಡ ಭಾಷೆಯನ್ನು ಇಂತಹ ಜಾಗೃತಿ ಅಭಿಯಾನವನ್ನು ರಾಜ್ಯದಲ್ಲಿ ಹಮ್ಮಿಕೊಂಡು ಕನ್ನಡವನ್ನು ಉಳಿಸಿ ಬೆಳೆಸುವ ನನ್ನದೇ ಆದ ಸಣ್ಣ ಪ್ರಯತ್ನ ಇದಾಗಿದೆ. ಇದಕ್ಕೆ ಪ್ರತಿಯೊಬ್ಬ ಕನ್ನಡಿಗರು ಕೈ ಜೋಡಿಸಬೇಕು ಎಂದು ಮನವಿ ಮಾಡಿದ ಅವರು,  ವಿಷ್ಣು ಅಭಿಮಾನಿಯಾಗಿ ಇಂತಹ ಕಾರ್ಯ ಮಾಡುತ್ತಿರುವುದಕ್ಕೆ  ಕರ್ನಾಟಕ ರಾಜ್ಯ ಸಮಗ್ರ ಕನ್ನಡಿಗರು ತಮ್ಮ ಮೆಚ್ಚುಗೆ ವ್ಯಕ್ತಪಡಿಸುತ್ತಿವುದು ತಮಗೆ ಹೆಮ್ಮೆ ಮತ್ತು ಸ್ಪೂರ್ತಿ ತಂದಿದೆ. ಕನ್ನಡಾಂಬೆಗೆ ಸೇವೆಯನ್ನು ಮಾಡಲು ಗಡಿಭಾಗಕ್ಕೆ ತೆರಳುತ್ತಿದ್ದೇನೆ .ಕನ್ನಡ ಉಳಿಸಲು ಬೆಳೆಸಲು ಸಾಧ್ಯವಿದೆ ಎಂದರು. ಸರ್ಕಾರ ವಿಶೇಷವಾಗಿ ಪ್ರೋತ್ಸಾಹ ನೀಡಿ ನವಂಬರ್ 1ರಂದು ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಪ್ರತಿ ವರ್ಷ ಜಾಗೃತಿ ಅಭಿಯಾನವನ್ನು ಹಾಕಿಕೊಳ್ಳುತ್ತೇನೆ. ಈ ಅಭಿಯಾನವು ಒಂದು ತಿಂಗಳ ಕಾಲ ಸ್ವಂತ ನನ್ನ ರಥದಲ್ಲಿ ಪ್ರಯಾಣ ಮಾಡಿ ಪ್ರತಿಯೊಂದು ನಗರ ಗ್ರಾಮಗಳಲ್ಲಿ ಜಾಗೃತಿಯನ್ನು ಮೂಡಿಸಿ ಕನ್ನಡ ಭಾಷೆಯ ಅಭಿಮಾನವನ್ನು ಹೆಚ್ಚಿಸುತ್ತಿದ್ದೇನೆ. ಈ ಬಾರಿ ಎರಡನೇ ವರ್ಷದ ಕನ್ನಡ ಭಾಷೆಯ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.  

ವಿಶೇಷವಾಗಿ "ಕನ್ನಡವನ್ನು ಉಳಿಸಿ ಕನ್ನಡವನ್ನು ಬೆಳೆಸಿ" ಎಂಬ ಕನ್ನಡ ನಟ ದಿ ಡಾ. ವಿಷ್ಣುವರ್ಧನ್ ಆಸೆಯಂತೆ ಅವರ ಸವಿನೆನಪಿಗೋಸ್ಕರ ಕಳೆದ ಎಂಟು ವರ್ಷಗಳಿಂದ ಕರ್ನಾಟಕಾದ್ಯಂತ ಜಾಗೃತಿಯನ್ನು ಮೂಡಿಸುತ್ತಾ ಬರುತ್ತಿದ್ದೇನೆ. ಇವತ್ತು ಕನ್ನಡ ನಾಡು-ನುಡಿ ಜಲದ ಬಗ್ಗೆ ನನ್ನ ಪ್ರಾಣ ಹೋದರೂ ಚಿಂತೆ ಇಲ್ಲ ಅದಕ್ಕೋಸ್ಕರ ಪ್ರಾಣವನ್ನು ತ್ಯಾಗ ಮಾಡಲು ಸಿದ್ಧನಿದ್ದೇನೆ. ಕಾವೇರಿ ಹೋರಾಟ, ಕನ್ನಡ ಪರ ಹೋರಾಟಗಳಲ್ಲಿ ಇನ್ನು ಅನೇಕ ಕನ್ನಡದ ಹೋರಾಟದಲ್ಲಿ ಭಾಗಿಯಾಗಿದ್ದೇನೆ. ಎಂದರು. ಬೆಂಗಳೂರಿನಿಂದ ಬೆಳಗಾವಿ ಕಡೆ ಭಾಗಕ್ಕೆ ತೆರಳುವ ಮಾರ್ಗ ಮಧ್ಯದಲ್ಲಿ ರಾಣೇಬೆನ್ನೂರು ನನ್ನ ತವರು ಊರಿನಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ ನನ್ನನ್ನು ಇಲ್ಲಿಂದ ಜನರು ಬೀಳ್ಕೊಡುಗೆ ಕೊಡುತ್ತಿದ್ದಾರೆ. ನನ್ನ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸದ ಜೊತೆಗೆ ನಿಮ್ಮ ಪ್ರೀತಿಗೆ ಸದಾ ಕಾಲ ಚಿರಋಣಿಯಾಗಿರುತ್ತೇನೆ ಎಂದರು. ಅಭಿನಂದನಾ ಸಂದರ್ಭದಲ್ಲಿ ಪವನ್ ಕುಮಾರ್ ಮಲ್ನಾಡದ್, ಅನಿಲ್ ಸಿದ್ದಾಳೆ, ಸಿದ್ದಣ್ಣ ಚಿಕ್ಕಬಿದರೆ, ನಾಗರಾಜ್, ಶಿವಣ್ಣ, ಮೌನೇಶ ತಳವಾರ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು. 


ಸುದ್ದಿ ಓದಿ