ಕಾಗವಾಡ

ಜುಗೂಳ: ಕುಸ್ತಿ ಪಂದ್ಯಾವಳಿಗೆ ಶಾಸಕ ಶ್ರೀಮಂತ ಪಾಟೀಲ ಚಾಲನೆ

ಜುಗೂಳ: ಕುಸ್ತಿ ಪಂದ್ಯಾವಳಿಗೆ ಶಾಸಕ ಶ್ರೀಮಂತ ಪಾಟೀಲ ಚಾಲನೆ

ಕಾಗವಾಡ 28: ತಾಲೂಕಿನ ಜುಗೂಳ ಗ್ರಾಮದ ಗ್ರಾಮ ದೇವತೆಯಾದ ಶ್ರೀ ಮಾಸಾಹೇಬಿ ದೇವಿಯ ಉರುಸದ ನಿಮಿತ್ತ ಹಮ್ಮಿಕೊಂಡ ಕುಸ್ತಿ ಪಂದ್ಯಾವಳಿ, ಕ್ಷೇತ್ರ ಶಾಸಕ ಶ್ರೀಮಂತ ಪಾಟೀಲ್ ಇವರಿಂದ ಉದ್ಘಾಟನೆ ನೆರವೇರಿತು. 

ಶನಿವಾರ ಸಂಜೆ ಜುಗುಳ ಗ್ರಾಮದಲ್ಲಿ ಶಾಸಕ ಶ್ರೀಮಂತ ಪಾಟೀಲ್ ಅವರು ಶ್ರೀ ಮಾಸಾಹೇಬಿ ದರ್ಗಾಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದು, ಉರುಸದ ನಿಮಿತ್ಯ ಆಯೋಜಿಸಿದ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿ, ಕುಸ್ತಿ ಪಂದ್ಯಾವಳಿಯನ್ನು ವೀಕ್ಷಿಸಿ ಕುಸ್ತಿ ಪಟುಗಳನ್ನು ಹುರಿದುಂಬಿಸಿದರು. 

ನಂತರ ಮಾತನಾಡಿ ಜುಗುಳ ಗ್ರಾಮದಲ್ಲಿ ಬಹಳ ವರ್ಷಗಳಿಂದ ಕುಸ್ತಿ ಪಂದ್ಯಾವಳಿಯನ್ನು ಹಮ್ಮಿಕೊಳ್ಳುತ್ತಿರುವುದು ಸಂತೋಷದ ವಿಷಯ, ನಾನು ಒಬ್ಬ ಕುಸ್ತಿ ಅಭಿಮಾನಿಯಾಗಿ,  ಈ ಕುಸ್ತಿ ಪಂದ್ಯಾವಳಿಯನ್ನು ಗ್ರಾಮದ ಮುಖಂಡರೊಂದಿಗೆ ಉದ್ಘಾಟನೆಯನ್ನು ನೆರವೇರಿಸಿ, ಕುಸ್ತಿಯನ್ನು ವೀಕ್ಷಿಸುವ ಮೂಲಕ ಸಂಭ್ರಮಪಟ್ಟೆ, ನಾನು ನಮ್ಮ ಶ್ರೀಮಂತ ಪಾಟೀಲ್ ಫೌಂಡೇಶನ್ ವತಿಯಿಂದ ಉರೂಸದ ನಿಮಿತ್ಯ ಕುಸ್ತಿ ಪಂದ್ಯಾವಳಿ, ವಿವಿಧ ಶರ್ಯತ್ತು ಹಾಗೂ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ನಮ್ಮಿಂದ ಆದಷ್ಟು ಸುಮಾರು 65 ಸಾವಿರ ರೂ.ಗಳನ್ನು ನೀಡಿ ಸಹಕರಿಸಲಾಗಿದೆ.  

ಅದೇ ರೀತಿ ಜುಗುಳ ಗ್ರಾಮದ ಮೇಲೆ ನನಗೆ ಬಹಳಷ್ಟು ಪ್ರೀತಿ ಇದು ಜುಗುಳ ಗ್ರಾಮದ ಮುಖಂಡರ  ಬೇಡಿಕೆಯಂತೆ ಜೂಗುಳ ಗ್ರಾಮದಲ್ಲಿ ಕುಸ್ತಿ ಮೈದಾನದ ಕಾಂಪೌಂಡ್ ಹಾಗೂ ಗರಡಿ ಮನೆ ಅವಶ್ಯಕತೆ ವಿದ್ದು ಅವುಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು. 

ಸ್ಥಳೀಯ ಪಿಕೆಪಿಎಸ್ ಅಧ್ಯಕ್ಷ ಅಣ್ಣಾಸಾಹೇಬ ಪಾಟೀಲ, ಅರುಣ ಗಣೇಶವಾಡಿ, ಸುಧಾಕರ ಗಣೇಶವಾಡಿ, ಸುರೇಶ ಪಾಟೀಲ, ಅನಿಲ ಕಡೋಲೆ, ಕಾಕಾಸಾಬ ಪಾಟೀಲ, ತಾತ್ಯಾಸಾಬ ಅಂಬಿ, ಸುಭಾಸ ಕಾಗವಾಡೆ,  ದೀಪಕ ಪಾಟೀಲ, ರಾಜು ಬಿಷ್ಟನವರ,  ಅಮೀನ  ನಂದಗಾವೆ,  ಭರತ ಲಾಂಡಗೆ, ಅವಿನಾಶ ಪಾಟೀಲ, ಭಾಸ್ಕರ ಮಿಂಚೆ,  ಸರ್ದಾರ ಅತ್ತಾರ,  ಸದಾಶಿವ ಪೂಜಾರಿ,  ಬಾಬಾಸಾಬ ನಂದಾಳೆ, ಸಂತೋಷ ಶೇಠ, ಬಾಬಾಸಾಬ ತಾರದಾಳೆ,  ರಾವಸಾಬ ಅಕ್ಕೋಳೆ,  ಪ್ರಕಾಶ ಪಾನದಾರೆ ಸೇರಿದಂತೆ ಮತ್ತಿತರ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. 


ಸುದ್ದಿ ಓದಿ